ಬೆಂಗಳೂರು: ಉಡದ ಮಾಂಸ ಮಾರಾಟ ಮಾಡುತ್ತಿದ್ದವರ ಮೇಲೆ ಬೆಂಗಳೂರಿನ ಜಾಲಹಳ್ಳಿ ಅರಣ್ಯಧಿಕಾರಿಗಳು ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಉಡದ ಮಾಂಸ, ರಕ್ತಕ್ಕೆ ಅತಿದೊಡ್ಡ ಬೇಡಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಬೆಲೆಗೆ ಉಡಗಳನ್ನು ಮಾರುತಿದ್ದ ಇಬ್ಬರನ್ನು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲಪಾಡು ಗ್ರಾಮದ ಡಾಬಾ ಬಳಿ ಬಂಧಿಸಲಾಗಿದೆ. ಗೋವಿಂದ(55),ಮಹಮ್ಮದ್ ರಫೀಕ್(67) ಬಂಧಿತ ಆರೋಪಿಗಳು. ಬಂಧಿತರಿಂದ 2 ಲಕ್ಷ ರೂ. ಮೌಲ್ಯದ 4 ಜೀವಂತ ಉಡಗಳನ್ನು ಜಾಲಹಳ್ಳಿ ಅರಣ್ಯಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: Bengaluru News: ಗೆಳೆಯನಿಗಾಗಿ ಆ್ಯಪ್ ಮೂಲಕ ಸಾಲ ಪಡೆದಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
ಕೋಲಾರ ಜಿಲ್ಲೆಯ ವಿವಿಧ ದಟ್ಟರಾಣ್ಯ ಪ್ರದೇಶಗಳಲ್ಲಿ ಉಡಗಳನ್ನ ಹಿಡಿದುಕೊಂಡು ಬಂದು, ಅರ್ಡರ್ ಕೊಟ್ಟಿದ್ದ ಡಾಬಾ ಹಾಗೂ ಹೋಟೆಲ್‌ಗಳಿಗೆ ನೇರವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಂಚಾರಿ ಅರಣ್ಯ ಇಲಾಖೆ ಅರಣ್ಯಾಧಿಕಾರಿಗಳಾದ ಸಿದ್ದರಾಜು, ಚಿದಾನಂದ್ ಹೆಚ್.ಆರ್, ಅಮೃತ್ ಹಾಗೂ ಅಶ್ವಿನ್ ಅವರು ಸಿನಿಮೀಯ ರೀತಿಯಲ್ಲಿ ಅಂಡರ್ ಕವರ್ ಆಪರೇಷನ್ ಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ. ಉಡುಗಳನ್ನ ಕೊಂಡು ಕೊಳ್ಳುವ ನೆಪದಲ್ಲಿ ದಾಳಿ ಮಾಡಿದ್ದಾರೆ.
ಕಾಡು ಪ್ರಾಣಿಗಳಿಗೆ ಬೆಲೆ ಕಟ್ಟುವುದು ಕೂಡ ಅಪರಾಧ. ಹಾಗಾಗಿ ಅವರ ಮೌಲ್ಯದಲ್ಲಿ ಹೇಳಬೇಂದ್ರೆ ಸುಮಾರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ನಾಲ್ಕು ಜೀವಂತ ಉಡುಗಳನ್ನ ರಕ್ಷಿಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಅಳಿವಿನಂಚಿಬಲ್ಲಿರುವ ಪ್ರಭೇದಗಳಲ್ಲಿ ಒಂದಾದ ಉಡಗಳು, ಮಾನವನಿಗೆ ಆಹಾರ ಆಗುವ ಮುನ್ನಾ ಅಧಿಕಾರಿಗಳು ರಕ್ಷಿಸಿದ್ದು ಇದೀಗ ಹಿರಿಯ ಅರಣ್ಯಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:32 am, Fri, 14 July 23