ರೋಡ್ ರೋಲರ್ ಅನ್ಲೋಡ್ ಮಾಡುವಾಗ ಭಾರೀ ದುರಂತ: ಚಾಲಕನ ನಿರ್ಲಕ್ಷ್ಯದಿಂದ ಲಾರಿ ಕ್ಲೀನರ್ ಸಾವು

| Updated By: ಆಯೇಷಾ ಬಾನು

Updated on: Aug 04, 2022 | 7:16 PM

ಮೈಸೂರು ಮೂಲದ ಲಾರಿ ಕ್ಲೀನರ್ ರವಿ(46) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರೋಡ್ ರೋಲರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೋಡ್ ರೋಲರ್ ಅನ್ಲೋಡ್ ಮಾಡುವಾಗ ಭಾರೀ ದುರಂತ: ಚಾಲಕನ ನಿರ್ಲಕ್ಷ್ಯದಿಂದ ಲಾರಿ ಕ್ಲೀನರ್ ಸಾವು
ರೋಡ್ ರೋಲರ್ ಅನ್ಲೋಡ್ ಮಾಡುವಾಗ ಭಾರೀ ದುರಂತ: ಚಾಲಕನ ನಿರ್ಲಕ್ಷ್ಯದಿಂದ ಲಾರಿ ಕ್ಲೀನರ್ ಸಾವು
Follow us on

ನೆಲಮಂಗಲ: ಲಾರಿಯಿಂದ ರೋಡ್ ರೋಲರ್ ಅನ್ಲೋಡ್ ಮಾಡುವಾಗ ಭಾರೀ ದುರಂತವೊಂದು ಸಂಭವಿಸಿದೆ. ರೋಡ್ ರೋಲರ್ ಚಾಲಕನ ನಿರ್ಲಕ್ಷ್ಯದಿಂದ ಲಾರಿ ಕ್ಲೀನರ್ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೂದಿಹಾಳ ಬಳಿಯ ಖಾಸಗಿ ಕಂಪನಿಯಲ್ಲಿ ನಡೆದಿದೆ. ಮೈಸೂರು ಮೂಲದ ಲಾರಿ ಕ್ಲೀನರ್ ರವಿ(46) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರೋಡ್ ರೋಲರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನೇಣು ಬಿಗಿದುಕೊಂಡು ಯುವಕ ಸಾವಿಗೆ ಶರಣು

ವಿಜಯಪುರ: ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಸಾಲಬಾಧೆಯಿಂದ ಮಾಲಪ್ಪ ಲೋಕೂರ(24) ನೇಣಿಗೆ ಶರಣಾಗಿದ್ದಾರೆ. ವೈಯುಕ್ತಿಕವಾಗಿ ಸಾಲ ಮಾಡಿಕೊಂಡಿದ್ದ ಮಾಲಪ್ಪ ಸಾಲಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಹೊರ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಸಿಬಿ ಬಲೆಗೆ ಬಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್

ಮೈಸೂರು: ಆಸ್ತಿ ಖಾತೆ ವರ್ಗಾವಣೆಗೆ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ರೆವಿನ್ಯೂ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ ಬಿದ್ದ ಘಟನೆ ನಡೆದಿದೆ. ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 8 ರ ಪ್ರಭಾರ ರೆವಿನ್ಯೂ ಇನ್ಸ್‌ಪೆಕ್ಟರ್ ಸಿದ್ದರಾಜು, ಗಾಯಿತ್ರಿ ಪುರಂನ ನಿವಾಸಿಯ ಖಾತೆ ವರ್ಗಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 15 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮೈಸೂರು ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಸಿಬಿ ಬಲೆಗೆ

ಚಿತ್ರದುರ್ಗ: ಜಿಲ್ಲೆಯ ಇಲಾಖೆ ಕಚೇರಿಯಲ್ಲಿ ಎಡಿ ತೋಟಯ್ಯ ಬಲೆಗೆ ಬಿದ್ದಿದ್ದಾರೆ. ಕೃಷಿ ಹೊಂಡ ನಿರ್ಮಾಣಕ್ಕೆ 2 ಲಕ್ಷ 80 ಸಾವಿರ ರೂ. ಸಹಾಯಧನ ನೀಡಲು 1 ಲಕ್ಷ 40 ಸಾವಿರ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಸರ್ಕಾರದ ಸಹಾಯಧನದಲ್ಲಿ ಶೇಕಡಾ 50ರಷ್ಟು ಲಂಚವನ್ನು ಅರಬಗಟ್ಟ ಗ್ರಾಮದ ರೈತ ಕೃಷ್ಣ ನಾಯ್ಕ್ರಿಂದ ಪಡೆಯುವಾಗ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಡಿವೈಎಸ್ಪಿ ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Published On - 7:16 pm, Thu, 4 August 22