ಬೆಂಗಳೂರು ಗ್ರಾಮಾಂತರ: ಪಲ್ಸರ್ ಬೈಕಿಗೆ ಗುದ್ದಿದ ಲಾರಿ, ವೃದ್ಧೆ ಸ್ಥಳದಲ್ಲೇ ಸಾವು

|

Updated on: May 12, 2023 | 8:26 AM

ಆತ ತನ್ನ ತಾಯಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ. ತನ್ನ ಅತ್ತೆ ಮಗಳನ್ನು ಕೂಡ ಬೈಕಿನಲ್ಲಿ ಕೂರಿಸಿಕೊಂಡು ಹೊರಟಾಗ ಯಮಸ್ವರೂಪಿ ಲಾರಿ ಗುದ್ದಿ ತನ್ನ ತಾಯಿಯನ್ನೇ ಕಳೆದುಕೊಂಡು ತಾನೂ ಆಸ್ಪತ್ರೆಗೀಡಾಗಿದ್ದಾನೆ.

ಬೆಂಗಳೂರು ಗ್ರಾಮಾಂತರ: ಪಲ್ಸರ್ ಬೈಕಿಗೆ ಗುದ್ದಿದ ಲಾರಿ, ವೃದ್ಧೆ ಸ್ಥಳದಲ್ಲೇ ಸಾವು
ಮೃತ ನಿಂಗಮ್ಮ, ಕುಟುಂಬಸ್ಥರ ಆಕ್ರಂದನ
Follow us on

ಬೆಂಗಳೂರು ನಗರ: ಪಲ್ಸರ್ ಬೈಕಿಗೆ ಲಾರಿಯೊಂದು ಡಿಕ್ಕಿ ಹೊಡೆದು ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಆನೇಕಲ್ (Anekal) ತಾಲ್ಲೂಕಿನ ಇಂಡ್ಲವಾಡಿ ಬಳಿ ಜರುಗಿದೆ. ಆರೋಗ್ಯ ಸರಿ ಇಲ್ಲವೆಂದು ತನ್ನ 60 ವರ್ಷದ ತಾಯಿಯನ್ನು ಬೈಕಿನಲ್ಲಿ ಕರೆದುಕೊಂಡು ಹೊರಟಿದ್ದ ಸಂದೀಪ್, ಜೊತೆಗೆ ಕುಟುಂಬ ಸದಸ್ಯೆ ರಕ್ಷಿತಾ ಎಂಬುವವರನ್ನು ಕೂಡ ಬೈಕಿನಲ್ಲಿ ಕೂರಿಸಿಕೊಂಡು ಆನೇಕಲ್​ನ ಸರಕಾರಿ ಆಸ್ಪತ್ರೆ ಕಡೆ ಹೋಗುತ್ತಿದ್ದ. ಈ ವೇಳೆ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದ್ದು. ಇದರ ಪರಿಣಾಮ ತಾಯಿ ನಿಂಗಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂದೀಪ್ ಹಾಗೂ ರಕ್ಷಿತಾಗೆ ಗಾಯಗಳಾಗಿದ್ದು ಕೂಡಲೇ ಅವರಿಗೆ ಆಸ್ಪತ್ರೆ ದಾಖಲಿಸಲಾಗಿದೆ.

ನಿನ್ನೆ(ಮೇ.11) ಅಪಘಾತವಾದ ಈ ಜಾಗದಲ್ಲಿ ಪದೇ ಪದೇ ಅಪಘಾತಗಳಾಗತ್ತಿದ್ರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಗರಂ ಆಗಿದ್ದಾರೆ. ಅಷ್ಟೇ ಅಲ್ಲ ಅಪಘಾತದ ಮಾಹಿತಿ‌ ತಿಳಿಯಲು ಬಂದ ಪೊಲೀಸರ ವಿರುದ್ಧವೂ ಕಲ್ಲು ತೂರಾಟ ನಡೆಸಿದ್ದು, ಸೂರ್ಯಸಿಟಿ ಪೊಲೀಸ್ ಠಾಣೆಯ ಪೇದೆ ಶಂಕರ್​ ಎಂಬಾತನಿಗೆ ಗಾಯಗಳಾಗಿವೆ. ಸಧ್ಯ ಪ್ರಕರಣ‌ ದಾಖಲಿಸಿಕೊಂಡಿರುವ ಸೂರ್ಯಸಿಟಿ ಪೊಲೀಸರು ಲಾರಿ ವಶಕ್ಕೆ ಪಡೆದು ಚಾಲಕನ್ನನ್ನು ಹುಡುಕುತ್ತಿದ್ದಾರೆ. ಅಪಘಾತವಾದ ಸ್ಥಳದಲ್ಲಿ ಇನ್ನಷ್ಟು ಕೇರ್ ತೆಗೆದುಕೊಳ್ಳಬೇಕಾಗಿದ್ದು, ಕೂಡಲೇ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ:ಬೀದರ್​: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಸಹೋದರ ಸಂಜಯ್ ಖೇಣಿ ಕಾರು ಅಪಘಾತ

ಭೀಕರ ರಸ್ತೆ ಅಪಘಾತ, 2 ಬಸ್​ಗಳ ನಡುವೆ ಡಿಕ್ಕಿ: ಇಬ್ಬರು ದುರ್ಮರಣ

ಶಿವಮೊಗ್ಗ: ಎರಡು ಬಸ್​ಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ದುರ್ಮರಣ ಹೊಂದಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿ ಬಳಿಯ ಕುಮಧ್ವತಿ ಸೇತುವೆ‌ ಮೇಲೆ ನಡೆದಿದೆ. ಹೊಸದುರ್ಗ ನಿವಾಸಿ ತಿಪ್ಪೇಸ್ವಾಮಿ, ಮತ್ತೊಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಸ್ ಎಲ್ಲಿಂದ ಎಲ್ಲಿಗೆ ಹೊರಟಿತ್ತು ಎಂಬ ಮಾಹಿತಿ ದೊರೆತಿಲ್ಲ. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಿಂದ 5 ಆ್ಯಂಬ್ಯುಲೆನ್ಸ್​ಗಳು ಮತ್ತು ಅಗ್ನಿಶಾಮಕ ದಳ ದಾವಿಸಿದೆ. ಎರಡು ಬಸ್​ಗಳು ಶಿಕಾರಿಪುರದ ಲೈನ್ ಬಸ್​ಗಳು ಎಂದು ತಿಳಿದು ಬಂದಿದೆ.

ಅಪಘಾತದ ಬಗ್ಗೆ ಶಿವಮೊಗ್ಗದಲ್ಲಿ ಟಿವಿ9ಗೆ ಎಸ್​​ಪಿ ಮಿಥುನ್​ಕುಮಾರ್​ ಪ್ರತಿಕ್ರಿಯೆ ನೀಡಿದ್ದು, 2 ಬಸ್​ಗಳ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 6 ಜನರ ಸ್ಥಿತಿ ಚಿಂತಾಜನಕ, ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್​ನಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ