Doddaballapur Poll Results: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: 30 ಸಾವಿರ ಮತಗಳ ಅಂತರದಲ್ಲಿ ಧೀರಜ್​ಗೆ ಗೆಲುವು

Doddaballapur Assembly Election Result 2023 Live Counting Updates: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಹಾಲಿ ಶಾಸಕ ಟಿ.ವೆಂಕಟರಮಣಯ್ಯ, ಜೆಡಿಎಸ್ ನಿಂದ ಕಳೆದ ಮೂರು ಭಾರಿ ಸೋಲನ್ನ ಅನುಭವಿಸಿರುವ ಬಿ.ಮುನೇಗೌಡ ಮತ್ತು ಬಿಜೆಪಿಯಿಂದ ಯುವ ಅಭ್ಯರ್ಥಿ ವಿದೇಶದಲ್ಲಿ ಓದಿ ಬಂದಿರುವ ದೀರಜ್ ಮುನಿರಾಜು ಕಣದಲ್ಲಿದ್ದಾರೆ. ಮತ ಎಣಿಕೆಯ ವಿವರ ಇಲ್ಲಿದೆ.

Doddaballapur Poll Results: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: 30 ಸಾವಿರ ಮತಗಳ ಅಂತರದಲ್ಲಿ ಧೀರಜ್​ಗೆ ಗೆಲುವು
ದೀರಜ್ ಮುನಿರಾಜು ಪರ ಸಿಎಂ ಬೊಮ್ಮಾಯಿ ಪ್ರಚಾರ (ಸಂಗ್ರಹ ಚಿತ್ರ)
Follow us
ಆಯೇಷಾ ಬಾನು
|

Updated on:May 13, 2023 | 1:47 PM

Doddaballapur Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಹೊರಬಿದ್ದಿದೆ. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ( Doddaballapur Assembly Constituency) ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಧೀರಜ್​ ಗೆಲುವು ಕಂಡಿದ್ದಾರೆ. 30 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಿಕ್ಕಿದ್ದು ಕಾಂಗ್ರೆಸ್ ಹಾಲಿ ಶಾಸಕ ವೆಂಕಟರಮಣಯ್ಯಗೆ ಸೋಲಾಗಿದೆ.

ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಈ ಹಿಂದಿನಿಂದಲು ನೇರ ಹಣಾಹಣಿ ನಡೆಯುತ್ತಿದ್ದು ಇದೇ ಮೊದಲ ಬಾರಿಗೆ ಬಿಜೆಪಿ ಪ್ರಬಲ ಫೈಟ್ ಅನ್ನ ಕ್ಷೇತ್ರದಲ್ಲಿ ನೀಡುತ್ತಿದ್ದು ತ್ರಿಕೋನ ಸ್ವರ್ದೆ ಏರ್ಪಟ್ಟಿತ್ತು. ಇನ್ನೂ ಕಳೆದ ಎರಡು ಭಾರಿಯಿಂದ ಕಾಂಗ್ರೆಸ್ ಶಾಸಕರೆ ಇಲ್ಲಿ ಗೆದ್ದಿದ್ದು ಈ ಭಾರಿ ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸಿ ನಾವು ಗೆಲುವು ಸಾಧಿಸಬೇಕು ಅಂತ ಜೆಡಿಎಸ್ ಮತ್ತು ಬಿಜೆಪಿ ಕಸರತ್ತು ನಡೆಸಿತ್ತು.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 1:27 am, Sat, 13 May 23