ಬೀದರ್: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಸಹೋದರ ಸಂಜಯ್ ಖೇಣಿ ಕಾರು ಅಪಘಾತ
ಇಂದು(ಮೇ.10) ಬೆಳಗಿನ ಜಾವ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ್ ಖೇಣಿ (Ashok Kheny) ಅವರ ಸಹೋದರ ಸಂಜಯ್ ಖೇಣಿ (Sanjay Kheny) ಕಾರ್ ಅಪಘಾತಕ್ಕೊಳಗಾಗಿದೆ.
ಬೀದರ್: ರಾಜ್ಯಾದ್ಯಂತ ವಿಧಾನಸಭೆ ಚುನಾವಣೆ( Karnataka Assembly Election)ಮತದಾನ ಪ್ರಕ್ರಿಯೆ ಆರಂಭವಾಗಿದೆ. ಭರ್ಜರಿಯಾಗಿ ಮತದಾನ ಕೂಡ ನಡೆಯುತ್ತಿದೆ. ಈ ಮಧ್ಯೆ ಇಂದು(ಮೇ.10) ಬೆಳಗಿನ ಜಾವ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ್ ಖೇಣಿ (Ashok Kheny) ಅವರ ಸಹೋದರ ಸಂಜಯ್ ಖೇಣಿ (Sanjay Kheny) ಕಾರ್ ಅಪಘಾತಕ್ಕೊಳಗಾಗಿದೆ. ಜಿಲ್ಲೆಯ ಹಳ್ಳಿಖೇಡ್ ಬಳಿ ಕಾರ್ ಪಲ್ಟಿಯಾಗಿದ್ದು, ಕೂಡಲೇ ಗಾಯಾಳು ಸಂಜಯ್ ಖೇಣಿ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಅಶೋಕ್ ಮಹಾರುದ್ರಪ್ಪ ಖೇಣಿ ಕರ್ನಾಟಕದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದು, ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ (Nandi Infrastructure Corridor Enterprise Ltd) ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಜೊತೆಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಖೇಣಿ ಅವರು ಕ್ರಿಕೆಟ್ ತಂಡ ಕರ್ನಾಟಕ ಬುಲ್ಡೋಜರ್ಸ್ನ್ನು ಮುನ್ನಡೆಸಿದ್ದಾರೆ.
ಕರ್ನಾಟಕದ ಈ ಹೆದ್ದಾರಿ ಈಗ ಸಾವಿನ ಹೆದ್ದಾರಿ; ಒಂದೇ ವರ್ಷದಲ್ಲಿ 30ಕ್ಕೂ ಹೆಚ್ಚು ಅಪಘಾತ, 23 ಸಾವು
ಗದಗ: ನಮ್ಮ ಜಮೀನುಗಳಿಗೆ ಹೋಗಬೇಕಾದ್ರೆ ನಿತ್ಯವೂ ಜೀವ ಭಯ. ಎಲ್ಲಿ ಏನಾಗುತ್ತೋ ಅನ್ನೋ ಆತಂಕ ಕಾಡುತ್ತಿದೆ ಎಂದು ರೈತರ ಗೋಳಾಟ. ಜಮೀನಿಗೆ ಹೋದವರು ಸುರಕ್ಷಿತವಾಗಿ ಮನೆಗೆ ವಾಪಸ್ ಆಗುತ್ತೇವೋ ಇಲ್ಲವೋ ಅನ್ನೋ ಭಯ ಕುಟುಂಬವನ್ನು ಕಾಡುತ್ತಿದ ಎಂದು ರೈತರ ಅಳಲು. ಹೌದು ಈ ಸಾವಿನ ಹೆದ್ದಾರಿ ಇರುವುದು ಗದಗ ಜಿಲ್ಲೆಯಲ್ಲಿ. ಈ ಹೆದ್ದಾರಿ ಅರಬಾವಿ ಹಾಗೂ ಚಳ್ಳಕೆರೆ ರಾಜ್ಯ ಹೆದ್ದಾರಿ ಮಾರ್ಗವಾಗಿ ನಿತ್ಯ ಸಾವಿರಾರು ವಾಹನಗಳ ಸಂಚಾರ ಮಾಡುತ್ತಿವೆ. ಅದರಲ್ಲೂ ಬೃಹತ್ ಲಾರಿಗಳು, ಕಾರು ಸೇರಿದಂತೆ ಅನೇಕ ವಾಹನಗಳು ಓಡಾಡುತ್ತಿವೆ. ಹೀಗಾಗಿ ಈ ಮಾರ್ಗವಾಗಿ ರೈತರು ಜಮೀನಿಗೆ ಹೋಗಿ ಬರಲು ಹಾಗೂ ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಬರಲು ಭಯ ಪಡುತ್ತಿದ್ದಾರೆ.
ಇದನ್ನೂ ಓದಿ:Cyclone Mocha: ನೀವು ಚಂಡಮಾರುತದ ಅಪ್ಡೇಟ್ಗಳನ್ನು ಹೇಗೆ ಟ್ರ್ಯಾಕ್ ಮಾಡಬಹುದು ಎಂಬುದು ಇಲ್ಲಿದೆ
ಹೌದು ಗದಗ ಬೆಟಗೇರಿ ಬಾಗದಲ್ಲಿ ರೈತರ ಜಮೀನು ಹೆಚ್ಚಾಗಿವೆ. ಹೀಗಾಗಿ ನಿತ್ಯ ರೈತರು, ಕೂಲಿ ಕಾರ್ಮಿಕರು ಓಡಾಡುತ್ತಾರೆ. ಎತ್ತಿನ ಬಂಡಿ, ಹಾಗೂ ಟ್ರ್ತಾಕ್ಟರ್ ಮೂಲಕ ಉತ್ಪನ್ನ ತರುವಾಗ ಅಪಘಾತಗಳು ಹೆಚ್ಚಾಗಿ ಆಗುತ್ತಿವೆ. ಕಳೆದ ಒಂದು ವರ್ಷದಲ್ಲಿ ಇದೇ ಮಾರ್ಗದಲ್ಲಿ 30 ಕ್ಕೂ ಹೆಚ್ಚು ಅಪಘಾತವಾಗಿದ್ದು, 23 ಕ್ಕೂ ಹೆಚ್ಚು ಸಾವು ಸಂಭವಿಸಿವೆ ಎಂದು ರೈತರು ಆರೋಪಿಸಿದ್ದಾರೆ. ಅದರಲ್ಲೂ ಹೆಚ್ಚಾಗಿ ರೈತರೇ ಸಾವಿನ ಮನೆ ಸೇರಿದ್ದಾರೆ ಎನ್ನುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗಿ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಅಪಘಾತವಾಗಿವೆ. ಹೀಗಾಗಿ ಈ ಹೆದ್ದಾರಿ ಚತುಷ್ಪಥ ಹೆದ್ದಾರಿ ಮಾಡಿ, ಇಲ್ಲವಾದರೆ ಸರ್ವಿಸ್ ರೋಡ್ ಮಾಡಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಿಗೆ ಮನವಿ ಮಾಡಿದ್ರು, ಸರ್ಕಾರ ಸರ್ವೀಸ್ ರೋಡ್ ಮಾಡುತ್ತಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ