ಅಯ್ಯೋ ಶಿವನೇ! ಮನೆ ಹೊರಗಡೆ ನಿಂತು ವಿದ್ಯುತ್​ ಬಿಲ್​ ಕೇಳಿದ್ದಕ್ಕೆ ಮೀಟರ್​ ರೀಡರ್​ ಮೇಲೆ ಹಲ್ಲೆ

| Updated By: ರಮೇಶ್ ಬಿ. ಜವಳಗೇರಾ

Updated on: Aug 28, 2023 | 4:07 PM

ಮನೆ ಹೊರಗಡೆ ನಿಂತು ವಿದ್ಯುತ್​ ಬಿಲ್​ ಕೇಳಿದ್ದಕ್ಕೆ ಬೆಸ್ಕಾಂ ಮೀಟರ್ ರೀಡರ್ ಮೇಲೆ ಹಲ್ಲೆ ಮಾಡಿರುವ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ. ಮನೆ ಹೊರಗಡೆ ನಿಂತ ಕೇಳುತ್ತೀಯಾ ಎಂದು ಹಲ್ಲೆ ಮಾಡಲಾಗಿದೆ. ಇನ್ನು ನಾಯಿ ಭಯದಿಂದ ಹೊರಗಡೆ ನಿಂತು ಕೇಳಿದ್ದೇನೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಅಯ್ಯೋ ಶಿವನೇ! ಮನೆ ಹೊರಗಡೆ ನಿಂತು ವಿದ್ಯುತ್​ ಬಿಲ್​ ಕೇಳಿದ್ದಕ್ಕೆ ಮೀಟರ್​ ರೀಡರ್​ ಮೇಲೆ ಹಲ್ಲೆ
ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ
Follow us on

ವಿಜಯಪುರ, (ಆಗಸ್ಟ್ 28): ಕೆಲವರು ಬೇರೆಯವರ ಮನೆಗೆ ಒಳಗೆ ಹೋಗಲು ಒಂದು ಕ್ಷಣ ಹಿಂದೆ-ಮುಂದೆ ನೋಡುತ್ತಾರೆ. ಯಾಕಂದ್ರೆ ನಾಯಿ ಭಯ. ಇದರಿಂದ ಮನೆ ಹೊರಗಡೆ ನಿಂತ ಕೂಗುತ್ತಾರೆ. ಅದರಂತೆ ವಿಜಯಪುರದಲ್ಲಿ ಮನೆ ಹೊರಗಡೆ ನಿಂತು ವಿದ್ಯುತ್​ ಬಿಲ್ (electricity bill)​ ಕೇಳಿದ್ದಕ್ಕೆ ಮೀಟರ್ ರೀಡರ್ ಮೇಲೆ ಹಲ್ಲೆಯಾಗಿರುವ ಘಟನೆ ದೇವನಹಳ್ಳಿ (Devenahalli) ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ. ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಚನ್ನರಾಯಪ್ಪ ಬಡಾವಣೆಯ ಶಿವಮೂರ್ತಿ ಎಂಬುವವರ ಮನೆ ಬಳಿ ವಿದ್ಯುತ್​ ಬಾಕಿ ಬಿಲ್ ಕೇಳಲು ಬೆಸ್ಕಾಂ ಮೀಟರ್ ರೀಡರ್​ ತೌಸೀಪ್ ಹೋಗಿದ್ದರು. ಈ ವೇಳೆ ಶಿವಮೂರ್ತಿ ಎನ್ನುವರು ಮನೆಯಿಂದ ಆಚೆ ನಿಂತು ಬಿಲ್ ಕೇಳುತ್ತೀಯಾ ಎಂದು ಬೆಸ್ಕಾಂ ಸಿಬ್ಬಂದಿ ತೌಸೀಪ್ ಮೇಲೆ ಹಲ್ಲೆ ಮಾಡಿದ್ದಾರೆ.

ಮನೆಯೊಳಗೆ ಹೋಗದೇ ಹೊರಗಡೆ ನಿಂತು ವಿದ್ಯುತ್​ ಬಿಲ್​ ಕೇಳಿದ್ದಾನೆ. ಇದರಿಂದ ಮನೆ ಮಾಲೀಕ ಕೋಪಗೊಂಡು ಮೀಟರ್​ ರೀಡರ್​ ಮೇಲೆ ಹಲ್ಲೆ ಮಾಡಿದ್ದಾನೆ ತಫೀಕ್​ ಆರೋಪಿಸಿದ್ದಾರೆ. 2 ತಿಂಗಳ 3700 ರೂಪಾಯಿ ವಿದ್ಯುತ್​ ಬಿಲ್ ಪಾವತಿ ಬಾಕಿ ಇತ್ತು. ಹೀಗಾಗಿ ಕೇಳಲು ಹೋಗಿದ್ದೆ, ಆದ್ರೆ, ಮನೆಯ ಬಳಿ ನಾಯಿ ಇದ್ದಿದ್ದನ್ನ ಕಂಡು ಹೊರಗಡೆ ನಿಂತು ಬಿಲ್ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ತೌಸೀಪ್ ಆರೋಪಿಸಿದ್ದು, ಈ ಬಗ್ಗೆ ವಿಜಯಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಗೃಹ ಜ್ಯೋತಿ ಯೊಜನೆಯಡಿ ವಿದ್ಯುತ್​ ನಿಗಮಗಳಿಗೆ ಹಣ ಬಿಡುಗಡೆ ಮಾಡಿದ ಸರ್ಕಾರ: ಯಾವ ನಿಗಮಕ್ಕೆ ಎಷ್ಟು ಸಿಕ್ತು?

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ