ಆಡಳಿತಾರೂಢ ಬಿಜೆಪಿಯ ಜನಸ್ಪಂದನ ಸಮಾವೇಶಕ್ಕೆ ಬಂದಿದ್ದ ವೃದ್ಧ ಹೃದಯಾಘಾತಕ್ಕೆ ಬಲಿ

| Updated By: ಆಯೇಷಾ ಬಾನು

Updated on: Sep 10, 2022 | 10:06 PM

ದೊಡ್ಡಬಳ್ಳಾಪುರದ ಸಮಾವೇಶದ ಸ್ಥಳದಲ್ಲಿ ವೃದ್ಧನಿಗೆ ಹೃದಯಾಘಾತವಾಗಿತ್ತು. ದೊಡ್ಡಬಳ್ಳಾಪುರ ಸರ್ಕಾರಿ‌ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ವೃದ್ಧ ಮೃತಪಟ್ಟಿದ್ದಾರೆ.

ಆಡಳಿತಾರೂಢ ಬಿಜೆಪಿಯ ಜನಸ್ಪಂದನ ಸಮಾವೇಶಕ್ಕೆ ಬಂದಿದ್ದ ವೃದ್ಧ ಹೃದಯಾಘಾತಕ್ಕೆ ಬಲಿ
ಜನಸ್ಪಂದನ ಸಮಾವೇಶಕ್ಕೆ ಬಂದಿದ್ದ ವೃದ್ಧ ಹೃದಯಾಘಾತಕ್ಕೆ ಬಲಿ
Follow us on

ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಸರ್ಕಾರದ ಜನಸ್ಪಂದನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು ಜನಸ್ಪಂದನ ಸಮಾವೇಶಕ್ಕೆ ಬಂದಿದ್ದ ವೃದ್ಧ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ಸಮಾವೇಶದ ಸ್ಥಳದಲ್ಲಿ ವೃದ್ಧನಿಗೆ ಹೃದಯಾಘಾತವಾಗಿತ್ತು. ದೊಡ್ಡಬಳ್ಳಾಪುರ ಸರ್ಕಾರಿ‌ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ವೃದ್ಧ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ವೃದ್ಧ ಸಿದ್ದಲಿಂಗಪ್ಪ ಕೊನೆಯುಸಿರೆಳೆದಿದ್ದಾರೆ. ತುಮಕೂರು ಮೂಲದ 70 ವರ್ಷದ ವೃದ್ಧ ಸಿದ್ದಲಿಂಗಪ್ಪ ಮೃತ ವ್ಯಕ್ತಿ.

ಇನ್ನು ಮೃತನ ಮನೆಗೆ ತುಮಕೂರು ನಗರ ಶಾಸಕ ಜಿಬಿ ಜ್ಯೋತಿ ಗಣೇಶ್ ಭೇಟಿ ನೀಡಿದ್ದಾರೆ. ಮೃತನ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ವೈಯಕ್ತಿಕವಾಗಿ 25 ಸಾವಿರ ಹಣ ಸಹಾಯ ಮಾಡಿದ್ದಾರೆ.

ಅಮ್ಮನ ಕಳೆದುಕೊಂಡು ಕಣ್ಣೀರು ಹಾಕ್ತಿರುವ ಪುಟ್ಟ ಬಾಲಕ ಮನ್ವಂತ್!

ದೊಡ್ಡಬಳ್ಳಾಪುರ: ಪಕ್ಕದ ತಾಲೂಕಿನಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಬೃಹತ್ ಸಮಾವೇಶ ನಡೆಯುತ್ತಿದೆ ಎಂದು ನೆರೆಯ ತಾಲೂದು ಚಿಕ್ಕಬಳ್ಳಾಪುರದ ದಂಪತಿ ತಮ್ಮ ಪುಟ್ಟ ಕಂದಮ್ಮನ್ನೂ ಕರೆದುಕೊಂಡು ಸಮಾವೇಶಕ್ಕೆ ಬಂದಿದ್ದಾರೆ. ಆದರೆ ಅಲ್ಲೊಂದು ಎಡವಟ್ಟು ನಡೆದಿದೆ. ಅದು ಹೇಗೋ ಆ ಜನಜಂಗುಳಿಯಲ್ಲಿ ಕಂದಮ್ಮ ಅಮ್ಮಅಪ್ಪನಿಂದ ದೂರವಾಗಿದೆ. ಇದೀಗ ಕಂದ ಅಮ್ಮನಿಗಾಗಿ ಹಂಬಲಿಸ್ತಿದೆ

ಸಮಾವೇಶದ ಜನಸ್ತೋಮದಲ್ಲಿ ಅಮ್ಮನ ಕಳೆದುಕೊಂಡು ಕಣ್ಣೀರುಹಾಕಿ ಕಾಯ್ತಿರೋ ಮನ್ವಂತ್, ರಾಧಾ ಮತ್ತು ವೀರಜ್ ದಂಪತಿಯ ಪುತ್ರ. ಚಿಕ್ಕಬಳ್ಳಾಪುರ ಮೂಲದ ಬಾಲಕ ಮನ್ವಂತ್ ವಯಸ್ಸು ಇನ್ನೂ 7 ವರ್ಷ. ಊಟದ ಕೌಂಟರ್ ಬಳಿ ಬಂದ ವೇಳೆ ಅಮ್ಮನಿಂದ ತಪ್ಪಿಸಿಕೊಂಡ ಬಾಲಕ ಮನ್ವಂತ್ ಕಣ್ಣೀರು ಹಾಕುತ್ತಾ ಕಾಯ್ತಿದಾನೆ.

ತಾಜಾ ಮಾಹಿತಿ ಪ್ರಕಾರ ಮಗುವನ್ನು ಅವರ ಊರಿನ ಮಹಿಳೆಯೊಬ್ಬರು ಜೋಪಾನವಾಗಿ ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ ಕುರಿಗಾಹಿಯ ಮಗು ಸಾವು

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತೆನ್ನಿಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಕುರಿಗಾಹಿಯ ಮಗು ಮೃತಪಟ್ಟ ಘಟನೆ ನಡೆದಿದೆ. ಭಾಗ್ಯಶ್ರೀ ಲಾಯಪ್ಪ ಹೂವಣ್ಣನವರ (5) ಮೃತ ಬಾಲಕಿ. ತೆನ್ನಿಹಳ್ಳಿ ಗ್ರಾಮದ ಹೊರ ಭಾಗದಲ್ಲಿ ಕುರಿ ಮೇಯಿಸಲು ತಂದೆ ಲಾಯಪ್ಪನೊಂದಿಗೆ ಮೃತ ಬಾಲಕಿ ಹೋಗಿದ್ದಳು. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ಕಂಬದ ತಂತಿ ಸ್ಪರ್ಶಿಸಿ ಬಾಲಕಿ ಮೃತಪಟ್ಟಿದ್ದಾಳೆ.

ಪ್ರಮುಖ ಸುದ್ದಿಗಳನ್ನೂ ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:02 pm, Sat, 10 September 22