ಬೆಂಗಳೂರು, ಅ.22: ಬಿಎಂಟಿಸಿ ರಾಜ್ಯ ರಾಜಾಧಾನಿಯ ಸಂಪರ್ಕಕೊಂಡಿ (BMTC). ಆದ್ರೆ ಈ ಬಿಎಂಟಿಸಿ ಬಸ್ ಕಿಲ್ಲರ್ ಬಿಎಂಟಿಸಿಯಾಗಿ ಅಮಾಯ ಬೆಂಗಳೂರಿಗರ ಬಲಿ ಪಡೀತಿದೆ, ಒಂದಾದ ಮೇಲೆ ಒಂದು ಆಕ್ಸಿಡೆಂಟ್ಗಳು ಆಗ್ತಾನೆ ಇವೆ (BMTC Accident). ಅದ್ರಲ್ಲೂ ಆಕ್ಸಿಡೆಂಟ್ ಆದಾಗೆಲ್ಲ ಸಾವು ನೋವು ಕೂಡ ಆಗ್ತಿದೆ. ವಾರದ ಹಿಂದಷ್ಟೇ ಬಿಎಂಟಿಸಿ ಬಸ್ಸಿನ ಚಕ್ರ ತಲೆ ಮೇಲೆ ಹರಿದು ವಿದ್ಯಾರ್ಥಿ ಗಂಗಾಧರ (21) ಮೃತಪಟ್ಟಿದ್ದ. ಬಿಎಂಟಿಸಿ ಚಾಲಕ ಲೋಕೇಶ್ನನ್ನು ಯಶವಂತಪುರ ಸಂಚಾರ ಪೊಲೀಸರು ಬಂಧಿಸಿದ್ದರು. ಈಗ ಇದೇ ರೀತಿಯ ಮತ್ತೊಂದು ಘಟನೆ ಸಂಭವಿಸಿದೆ. ಬಿಎಂಟಿಸಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನೆಲಮಂಗಲ ಟೌನ್ ಬಿನ್ನಮಂಗಲದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಟೌನ್ ಬಿನ್ನಮಂಗಲದಲ್ಲಿ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಬೈಕ್ ಸವಾರ ಸುಭಾಷ್ ನಗರದ ಮಧು(32) ಮೃತಪಟ್ಟಿದ್ದಾರೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎಂಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ನೈಜೀರಿಯಾ ಪ್ರಜೆ ಸಿಸಿಬಿ ವಶಕ್ಕೆ
ಅ.14ರಂದು ಬಿಎಂಟಿಸಿ ಬಸ್ ಗೆ 21 ವರ್ಷದ ಇಂಜನಿಯರಿಂಗ್ ವಿದ್ಯಾರ್ಥಿ ಗಂಗಾಧರ್ ಬಲಿಯಾಗಿದ್ದ. ಮಾರಪ್ಪನ ಪಾಳ್ಯದ ಕಡೆಯಿಂದ ಬೆಳಿಗ್ಗೆ ತನ್ನ ಸ್ನೇಹಿತನ ಜೊತೆ ಬೈಕ್ ನಲ್ಲಿ ಬಂದ ಗಂಗಾಧರ್ ಯಶವಂತಪುರ ಹೂವಿನ ಮಾರ್ಕೆಟ್ ಬಳಿ ಬರೋ ಅಷ್ಟೋತ್ತಿಗೆ ಹಂಪ್ ಒಂದು ಕಂಡಿತ್ತು. ಹೀಗಾಗಿ ವೇಗವಾಗಿದ್ದ ಬೈಕ್ ಸಡನ್ ಆಗಿ ಬ್ರೇಕ್ ಹಾಕಿದ್ದೇ ತಡ ಹಿಂದೆ ಬರ್ತಾ ಇದ್ದ ಬಿಎಂಟಿಸಿ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಆಗ ಗಂಗಾಧರ್ ಒಂದ್ ಕಡೆ ಬಿದ್ರೆ ಸ್ನೇಹಿತ ಮತ್ತೊಂದು ಕಡೆ ಬಿದ್ದಿದ್ದ. ಆಗ ಬಸ್ ಗಂಗಾಧರ್ ಮೇಲೆ ಹರಿದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದ.
ಕುಣಿಗಲ್ ಮೂಲದ ಗಂಗಾಧರ್ ಕಮಲನಗರ ಬಳಿ ವಾಸವಾಗಿದ್ದ. ತಂದೆ ಎಳೆನೀರು ವ್ಯಾಪಾರ ಮಾಡ್ತಾ ಇದ್ದು ಗಂಗಾಧರ್ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಇಂಜನಿಯರಿಂಗ್ ಓದುತ್ತಿದ್ದ. ಕಾಲೇಜಿನ ಸ್ನೇಹಿತರ ಜೊತೆ ಕಳೆದ ಒಂದು ತಿಂಗಳಿಂದ ಹೆಚ್ ಎ ಎಲ್ ನಲ್ಲಿ ಇಂಟರ್ನ್ ಶೀಪ್ ಮಾಡ್ತಾ ಇದ್ದು, ಅದರ ಸರ್ಟಿಫಿಕೇಟ್ ತೆಗೆದುಕೊಳ್ಳಲೆಂದು ಸ್ನೇಹಿತರ ಜೊತೆಗೂಡಿ ಹೋಗುವಾಗ ಘಟನೆ ನಡೆದಿತ್ತು. ಇನ್ನು ಈ ಕಿಲ್ಲರ್ ಬಿಎಂಟಿಸಿಗೆ ಕಳೆದ 10 ದಿನಗಳಲ್ಲಿ ಮೂವರು ಬಲಿಯಾಗಿದ್ದಾರೆ. ಯಲಹಂಕದಲ್ಲಿ ಸಿವಿಲ್ ಇಂಜನಿಯರ್ ಯುವಕ ಕಳೆದ ಅಕ್ಟೋಬರ್ 5 ರಂದು ಭರತ್ ರೆಡ್ಡಿ ಬಲಿಯಾದ್ರೆ, ಗಾರೆಭಾವಿಪಾಳ್ಯದಲ್ಲಿ ಮೂರು ವರ್ಷದ ಪುಟ್ಟ ಮಗು ಅಯಾನ್ ಪಾಷ ಸಾವನ್ಮಪ್ಪಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ