ಸಿದ್ದನಪುರ ಗ್ರಾಮದಲ್ಲಿ ವಾಟರ್ ಫಿಲ್ಟರ್ ಪಾಲಿಟಿಕ್ಸ್: ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬೆಂಬಲಿಗರ ಮಧ್ಯೆ ಗಲಾಟೆ

| Updated By: ಸಾಧು ಶ್ರೀನಾಥ್​

Updated on: Aug 07, 2021 | 9:50 AM

MTB Nagaraj: ಸಚಿವ ನಾಗರಾಜ್ ಬೆಂಬಲಿಗ ಸಂತೋಷ್ ಗಲಾಟೆ ಬಳಿಕ, ಶಾಸಕರ ಸಹಯೋಗದೊಂದಿಗೆ ವಾಟರ್ ಫಿಲ್ಟರ್ ಕಟ್ಟಡ ಕಟ್ಟುತ್ತಿದ್ದರೂ ರಾಜಕೀಯ ಮಾಡ್ತಿದ್ದಾರೆ ಅಂತಾ ಶರತ್ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ.

ಸಿದ್ದನಪುರ ಗ್ರಾಮದಲ್ಲಿ ವಾಟರ್ ಫಿಲ್ಟರ್ ಪಾಲಿಟಿಕ್ಸ್: ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬೆಂಬಲಿಗರ ಮಧ್ಯೆ ಗಲಾಟೆ
ಸಿದ್ದನಪುರ ಗ್ರಾಮದಲ್ಲಿ ವಾಟರ್ ಫಿಲ್ಟರ್ ಪಾಲಿಟಿಕ್ಸ್: ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬೆಂಬಲಿಗರ ಮಧ್ಯೆ ಗಲಾಟೆ
Follow us on

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸಿದ್ದನಪುರ ಗ್ರಾಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬೆಂಬಲಿಗರ ಮಧ್ಯೆ ಗಲಾಟೆ ವಾಟರ್ ಫಿಲ್ಟರ್ ಪಾಲಿಟಿಕ್ಸ್ ನಡೆದಿದೆ. ಇದರಿಂದ ಎರಡು ಗುಂಪುಗಳ ನಡುವೆ ಗಲಾಟೆಗಳು ನಡೆದಿವೆ.

ರಸ್ತೆ ಜಾಗದಲ್ಲಿ ವಾಟರ್ ಫಿಲ್ಟರ್ ಕಟ್ಟುತ್ತಿರುವ ಆರೋಪ ಕೇಳಿಬಂದಿದೆ. ಇದನ್ನು ವಿರೋಧಿಸಿ ವಾಟರ್ ಫಿಲ್ಟರ್ ಕಟ್ಟಡದ ಗೋಡೆ ಒಡೆದು ಗಲಾಟೆ ಮಾಡಲಾಗಿದೆ. ಸಚಿವ ಎಂಟಿಬಿ ನಾಗರಾಜ್ ಬೆಂಬಲಿಗರಿಂದ ಗಲಾಟೆ ನಡೆದಿದೆ. ಆಗ ಎಂಟಿಬಿ ನಾಗರಾಜ್ ಬೆಂಬಲಿಗರ ನಡೆಗೆ ಶರತ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಶಾಸಕ‌ ಶರತ್ ಬೆಂಬಲಿಗರು ರಸ್ತೆ ಬದಿಯ ಖಾಲಿ ನಿವೇಶನದಲ್ಲಿ ವಾಟರ್ ಫಿಲ್ಟರ್ ಕಟ್ಟಡ‌ ಕಟ್ಟಿಸುತ್ತಿದ್ದರು. ಈ‌ ವೇಳೆ, ಅದು ರಸ್ತೆ ಜಾಗ ಎಂದು ಬಿಎಂಆರ್​​ಡಿಎ ಸದಸ್ಯ ಮತ್ತು ಸಚಿವ ಎಂಟಿಬಿ ನಾಗರಾಜ್ ಬೆಂಬಲಿಗ ಸಂತೋಷ್ ಗಲಾಟೆ ಮಾಡಿದ್ದಾನೆ, ರಸ್ತೆ ಜಾಗದಲ್ಲಿ ಕಟ್ತಿದ್ದೀರಾ? ಅಂತಾ ಗಡಾರಿ‌ಯಿಂದ ಗೋಡೆ ಹೊಡೆದು ಗಲಾಟೆ ಎಬ್ಬಿಸಿದ್ದಾನೆ. ಗೋಡೆ ಹೊಡೆಯುವ ದೃಶ್ಯ ಸ್ಥಳಿಯರ ಮೊಬೈಲ್‌ ನಲ್ಲಿ ಸೆರೆಯಾಗಿದೆ.

ಸಚಿವ ನಾಗರಾಜ್ ಬೆಂಬಲಿಗ ಸಂತೋಷ್ ಗಲಾಟೆ ಬಳಿಕ, ಶಾಸಕರ ಸಹಯೋಗದೊಂದಿಗೆ ವಾಟರ್ ಫಿಲ್ಟರ್ ಕಟ್ಟಡ ಕಟ್ಟುತ್ತಿದ್ದರೂ ರಾಜಕೀಯ ಮಾಡ್ತಿದ್ದಾರೆ ಅಂತಾ ಶರತ್ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್ಪಿ ಕೋನವಂಶಿ ಕೃಷ್ಣಗೆ ನೂತನ ಸಚಿವ ಎಂಟಿಬಿ ನಾಗರಾಜ್ ಫುಲ್​ ಕ್ಲಾಸ್

(Minister MTB Nagaraj and MLA Sharath Bachegowda supporters indulge in fight at siddapura hoskote)