ಬೈಕ್ ಮತ್ತು ಟಿಪ್ಪರ್ ಡಿಕ್ಕಿ ಹೊಡೆದು ಅಪಘಾತ; ಕಾರು ನಿಲ್ಲಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಚಿವ ಸುಧಾಕರ್
ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಕಾರಣ ಸವಾರನ ಕಾಲು ನಜ್ಜುಗುಜ್ಜಾಗಿದೆ. ಸದ್ಯ ಅಪಘಾತ ಸ್ಥಳಕ್ಕೆ ಬಂದ ಸಚಿವ ಸುಧಾಕರ್ ಕೂಡಲೆ ಆ್ಯಂಬುಲೆನ್ಸ್ಗೆ ಕರೆ ಮಾಡಿ ಗಾಯಾಳನ್ನು ಆಸ್ವತ್ರೆಗೆ ರವಾನಿಸಿದ್ದಾರೆ. ವೈದ್ಯರಿಗೆ ಕರೆಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಭೀಕರ ಅಪಘಾತವೊಂದು(Accident) ಸಂಭವಿಸಿದ್ದು ಈ ಅಪಘಾತದಲ್ಲಿ ಸಿಲುಕಿದ ಗಾಯಾಳುವಿನ ನೆರವಿಗೆ ಸಚಿವ ಸುಧಾಕರ್(Dr K Sudhakar) ಧಾವಿಸಿದ ಘಟನೆ ನಡೆದಿದೆ. ಸಚಿವ ಸುಧಾಕರ್, ರಸ್ತೆಯಲ್ಲಿ ತೆರಳುತ್ತಿದ್ದಾಗ ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿತ್ತು. ಬೈಕ್ನಲ್ಲಿದ್ದ ಮಹಿಳೆ ಮತ್ತು ಸವಾರ ಟಿಪ್ಪರ್ ನಡುವೆ ಸಿಲುಕಿ ಪರದಾಡುತ್ತಿದ್ದರು. ಅಪಘಾತ ಕಂಡ ಕೂಡಲೆ ಕಾರು ನಿಲ್ಲಿಸಿ ಗಾಯಾಳುಗಳ ನೆರವಿಗೆ ಸಚಿವ ಡಾ.ಕೆ ಸುಧಾಕರ್ ಧಾವಿಸಿದ್ದಾರೆ.
ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಕಾರಣ ಸವಾರನ ಕಾಲು ನಜ್ಜುಗುಜ್ಜಾಗಿದೆ. ಸದ್ಯ ಅಪಘಾತ ಸ್ಥಳಕ್ಕೆ ಬಂದ ಸಚಿವ ಸುಧಾಕರ್ ಕೂಡಲೆ ಆ್ಯಂಬುಲೆನ್ಸ್ಗೆ ಕರೆ ಮಾಡಿ ಗಾಯಾಳನ್ನು ಆಸ್ವತ್ರೆಗೆ ರವಾನಿಸಿದ್ದಾರೆ. ವೈದ್ಯರಿಗೆ ಕರೆಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ಸಚಿವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮಚ್ಚುಗೆ ವ್ಯಕ್ತಪಡಿಸಿದ್ದಾರೆ. ಏರ್ಪೋಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.