ಸರ್ಕಾರಿ ಕಚೇರಿಯಲ್ಲೇ ನಗರಸಭೆ ಆಯುಕ್ತರ ರೀಲ್ಸ್ ವೈರಲ್: ಸಾರ್ವಜನಿಕರು ಆಕ್ರೋಶ; ಅಧಿಕಾರಿ ಕೊಟ್ಟ ಸ್ಪಷ್ಟನೆ ಏನು?

Nelamangala News: ನೆಲಮಂಗಲ ನಗರಸಭೆ ಆಯುಕ್ತ ಸರ್ಕಾರಿ ಕಚೇರಿಯಲ್ಲಿ ಮಾಡಿದ ಹಳೆಯ ರೀಲ್ಸ್​​ ಇದೀಗ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದು 8 ವರ್ಷಗಳ ಹಿಂದಿನ ವಿಡಿಯೋ. ನನ್ನ ಇಮೇಜ್ ಕೆಡಿಸಲು ಯಾರೋ ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ ಎಂದು ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರಿ ಕಚೇರಿಯಲ್ಲೇ ನಗರಸಭೆ ಆಯುಕ್ತರ ರೀಲ್ಸ್ ವೈರಲ್: ಸಾರ್ವಜನಿಕರು ಆಕ್ರೋಶ; ಅಧಿಕಾರಿ ಕೊಟ್ಟ ಸ್ಪಷ್ಟನೆ ಏನು?
ನಗರಸಭೆ ಆಯುಕ್ತ ಗಂಗಾಧರ್
Image Credit source: tv9 kannada
Edited By:

Updated on: Aug 23, 2026 | 8:38 PM

ನೆಲಮಂಗಲ, ಆಗಸ್ಟ್​ 23: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ (Reels) ಕ್ರೇಜ್ ದಿನದಿಂದ ದಿನಕ್ಕೆ ಎಲ್ಲರನ್ನೂ ಆವರಿಸಿಕೊಳ್ಳುತ್ತಿದ್ದು, ಇದೀಗ ಜವಾಬ್ದಾರಿಯುತ ಸ್ಥಾನದಲ್ಲಿರುವ ಸರ್ಕಾರಿ ಅಧಿಕಾರಿಯೊಬ್ಬರೂ ಈ ರೀಲ್ಸ್ ವಿವಾದದ ಸುಳಿಗೆ ಸಿಲುಕಿದ್ದಾರೆ. ನೆಲಮಂಗಲ ನಗರಸಭೆ ಆಯುಕ್ತರಾಗಿ (City Municipal Council Commissioner) ಕಳೆದ ಒಂದೂವರೆ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಗಂಗಾಧರ್, ಕಚೇರಿಯಲ್ಲೇ ಸಿನಿಮಾ ಹಾಡುಗಳಿಗೆ ಮಾಡಿರುವ ರೀಲ್ಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ನಡೆದಿದ್ದೇನು?

ವೈರಲ್ ಆಗಿರುವ ವಿಡಿಯೋಗಳಲ್ಲಿ ಆಯುಕ್ತ ಗಂಗಾಧರ್, ‘ರಾ ರಾ ರಕ್ಕಮ್ಮ’ ಸೇರಿದಂತೆ ಮಾಸ್ ಹಾಡುಗಳಿಗೆ ಕಚೇರಿಯಲ್ಲೇ ಕುಳಿತು ಮ್ಯಾನರಿಸಂ ಪ್ರದರ್ಶಿಸಿ ರೀಲ್ಸ್ ಮಾಡಿರುವುದು ಕಂಡುಬಂದಿದೆ. ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕಾದ ಸರ್ಕಾರಿ ಕಚೇರಿಯ ಕುರ್ಚಿಯಲ್ಲಿ ಕುಳಿತು ಇಂತಹ ವಿಡಿಯೋಗಳನ್ನು ಮಾಡಿರುವುದು ಎಷ್ಟು ಸರಿ ಎಂದು ನೆಟ್ಟಿಗರು ಹಾಗೂ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಇದು 8 ವರ್ಷದ ಹಳೆಯ ವಿಡಿಯೋ ಎಂದ ಆಯುಕ್ತ ಗಂಗಾಧರ್

ಇನ್ನು ಈ ವಿವಾದದ ಕುರಿತು ಟಿವಿ9ಗೆ ಪ್ರತಿಕ್ರಿಯಿಸಿರುವ ಆಯುಕ್ತ ಗಂಗಾಧರ್, ‘ಇದು 8 ವರ್ಷಗಳ ಹಳೆಯ ವಿಡಿಯೋ. ನಾನು ಡಿಸಿ ಕಚೇರಿಯಲ್ಲಿ ಕೆಲಸ ಮಾಡುವಾಗ ಮಧ್ಯಾಹ್ನ ಊಟದ ಸಮಯದಲ್ಲಿ ರೀಲ್ಸ್ ಮಾಡಿರುವುದು. ಯಾರೋ ಕಿಡಿಗೇಡಿಗಳು ಇದನ್ನ ವೈರಲ್ ಮಾಡಿದ್ದಾರೆ. ನಾನು ನೆಲಮಂಗಲದಲ್ಲಿ ಸಾರ್ವಜನಿಕ ಸೇವೆಯಲ್ಲಿ ಯಾವುದೇ ಚ್ಯುತಿ ಬರುವ ಕೆಲಸ ಮಾಡಿಲ್ಲ. ನನ್ನ ಸರ್ಕಾರಿ ಸೇವೆಗೆ ಕಳಂಕ ತರುವ ಕೆಲಸ ಮಾಡಿಲ್ಲ. ನಾನು ಸದ್ಯ ಇನ್‌ಸ್ಟಾಗ್ರಾಮ್ ಖಾತೆಯನ್ನೂ ಬಳಸುತ್ತಿಲ್ಲ. ನನ್ನ ಹೆಸರಿಗೆ ಮಸಿ ಬಳಿಯುವ ದುರುದ್ದೇಶದಿಂದ ಕೆಲ ಕಿಡಿಗೇಡಿಗಳು ಹಳೆಯ ವಿಡಿಯೋವನ್ನು ಈಗ ವೈರಲ್ ಮಾಡಿದ್ದಾರೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಮಂಡ್ಯ: ಇಡಿ ಊರಿಗೂರೇ ಶಾಕ್! ಮೃತ ಭಿಕ್ಷುಕಿ ಮನೆಯಲ್ಲಿ​ ಮೂಟೆಗಟ್ಟಲೆ ನಾಣ್ಯ, ನೋಟುಗಳು ಪತ್ತೆ

ನೆಲಮಂಗಲದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಯಾವುದೇ ಸಾರ್ವಜನಿಕ ಸೇವೆಗೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿರುವ ಆಯುಕ್ತರು, ಕಚೇರಿಯ ಕೆಲಸದ ಸಮಯದಲ್ಲಿ ತಾನು ಯಾವುದೇ ರೀಲ್ಸ್ ಮಾಡಿಲ್ಲವೆಂದು ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಂಜುನಾಥ ಎಚ್​. ವಿ.

ಮಂಜುನಾಥ ಹೆಚ್ ವಿ. ಇವರು ಹುಟ್ಟಿದ್ದು ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದರು. 8 ವರ್ಷಗಳ ಕಾಲ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಆಗಿ ವೃತ್ತಿ ನಿರ್ವಹಿಸಿದ್ದು ಸಾಮಾಜಿಕವಾಗಿ ನ್ಯಾಯ ಒದಗಿಸುವ ಕೆಲಸವನ್ನ ಮಾಡಿದ್ದಾರೆ. ಕಳೆದ 9 ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಬೆಂಗಳೂರು ಹಾಗೂ ನೆಲಮಂಗಲ ಭಾಗದ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್, ಬುಕ್ ಹಾಗೂ ಪೇಪರ್ ಓದುವ ಹವ್ಯಾಸವಿದೆ.

Read More
Loading...
Unable to load recommendations.
Follow Us