AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸಕೋಟೆ ದಮ್ ಬಿರಿಯಾನಿ ಕ್ರೇಜ್‌ಗೆ ಅಪಘಾತ, ಗಲಾಟೆ ನಂಟು: 4 ಗಂಟೆ ಬಿರಿಯಾನಿಗೆ ಬ್ರೇಕ್!

Hosakote Biryani: ಹೊಸಕೋಟೆಯಲ್ಲಿ ಬೆಳ್ಳಂಬೆಳಗ್ಗೆ ಸಿಗುವ ಬಿಸಿ ಬಿಸಿ ದಮ್​​ ಬಿರಿಯಾನಿ ಮಾರಾಟಕ್ಕೆ ಸದ್ಯ ಪೊಲೀಸರು ಬ್ರೇಕ್​ ಹಾಕಿದ್ದಾರೆ. ಆ ಮೂಲಕ ಅಪಘಾತ ಹಾಗೂ ಗಲಾಟೆ ಪ್ರಕರಣಗಳನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಇದು ಬಿರಿಯಾನಿ ಪ್ರಿಯರು ಮತ್ತು ಹೋಟೆಲ್ ಮಾಲೀಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಹೊಸಕೋಟೆ ದಮ್ ಬಿರಿಯಾನಿ ಕ್ರೇಜ್‌ಗೆ ಅಪಘಾತ, ಗಲಾಟೆ ನಂಟು: 4 ಗಂಟೆ ಬಿರಿಯಾನಿಗೆ ಬ್ರೇಕ್!
ಹೊಸಕೋಟೆ ದಮ್ ಬಿರಿಯಾನಿImage Credit source: tv9 kannada
ನವೀನ್ ಕುಮಾರ್ ಟಿ.
| Edited By: |

Updated on: Aug 23, 2026 | 5:01 PM

Share

ಮುಖ್ಯಾಂಶಗಳು

  • ಹೊಸಕೋಟೆಯಲ್ಲಿ ಮುಂಜಾನೆ 4 ಗಂಟೆಗೆ ಬಿರಿಯಾನಿ ಸೆಂಟರ್ ಓಪನ್​​ಗೆ ಬ್ರೇಕ್
  • ಗಲಾಟೆ ಪ್ರಕರಣ ಹಾಗೂ ಅಪಘಾತಗಳು ಹೆಚ್ಚಳ ಹಿನ್ನೆಲೆ ಖಡಕ್​ ಆದೇಶ
  • ಬೆಳಿಗ್ಗೆ 4 ಗಂಟೆ ಬದಲು 6 ಗಂಟೆಗೆ ಹೋಟೆಲ್ ತೆರೆಯಲು ಸೂಚನೆ

ದೇವನಹಳ್ಳಿ, ಆಗಸ್ಟ್​ 23: ಹೊಸಕೋಟೆ ಎಂದ ತಕ್ಷಣ ಆಹಾರ ಪ್ರಿಯರಿಗೆ ನೆನಪಾಗುವುದೇ ಬೆಳ್ಳಂಬೆಳಗ್ಗೆ ಸಿಗುವ ಬಿಸಿ ಬಿಸಿ ದಮ್ ಬಿರಿಯಾನಿ (Hosakote Biryani). ವಾರಾಂತ್ಯ ಬಂತೆಂದರೆ ಸಾಕು, ಸೂರ್ಯ ಹುಟ್ಟುವುದಕ್ಕೂ ಮುನ್ನವೇ ಸಿಟಿ ಜನರು ಬಿರಿಯಾನಿ ಸವಿಯಲು ಹೊಸಕೋಟೆಯ ಹೋಟೆಲ್‌ಗಳ ಮುಂದೆ ಕ್ಯೂ ನಿಲ್ಲುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಮುಂಜಾನೆಯ ಬಿರಿಯಾನಿ ಕ್ರೇಜ್​ನಿಂದ ಹೆದ್ದಾರಿಯಲ್ಲಿ ಮೋಜು-ಮಸ್ತಿ, ಅಪಘಾತ ಹಾಗೂ ಗಲಾಟೆಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ಅಲರ್ಟ್ ಆದ ಹೊಸಕೋಟೆ ಪೊಲೀಸರು, ಮುಂಜಾನೆ 4 ಗಂಟೆಗೆ ಬಿರಿಯಾನಿ ಮಾರಾಟಕ್ಕೆ ಬ್ರೇಕ್ ಹಾಕಿ ಬೆಳಿಗ್ಗೆ 6 ಗಂಟೆಗೆ ಹೋಟೆಲ್ ತೆರೆಯುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಬಿರಿಯಾನಿಗೂ ಅಪಘಾತಕ್ಕೂ ಹೇಗೆ ಸಂಬಂಧ?

ವೀಕೆಂಡ್ ಬಂತೆಂದರೆ ಬೆಂಗಳೂರಿನ ಐಟಿ ಉದ್ಯೋಗಿಗಳು ಹಾಗೂ ಯುವಜನರು ನಂದಿಬೆಟ್ಟ ಸೇರಿದಂತೆ ಹೊರವಲಯದ ಹೆದ್ದಾರಿಗಳಲ್ಲಿ ಲಾಂಗ್ ಡ್ರೈವ್​​ಗೆ ಹೋಗುತ್ತಾರೆ. ರಾತ್ರಿಯಿಡೀ ನಂದಿಬೆಟ್ಟ-ಕೋಲಾರ ಹೆದ್ದಾರಿಯಲ್ಲಿ ಸುತ್ತಾಡಿ ಮೋಜು ಮಸ್ತಿ ಮಾಡುವ ಯುವಕರು, ನಂತರ ಮುಂಜಾನೆ 4 ಗಂಟೆಗೆ ಬಿರಿಯಾನಿ ತಿನ್ನಲು ಹೊಸಕೋಟೆಗೆ ಬರುತ್ತಾರೆ.

ಇದನ್ನೂ ಓದಿ: Hoskote Biryani: ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!

ಈ ರೀತಿ ಬರುವವರ ಪೈಕಿ ಹಲವರು ರಾತ್ರಿಯಿಡೀ ಮದ್ಯಪಾನ ಮಾಡಿ ನಶೆಯಲ್ಲಿ ವಾಹನ ಚಲಾಯಿಸುವುದೇ ಇದೀಗ ದೊಡ್ಡ ಕಂಟಕವಾಗಿದೆ. ನಿದ್ರೆಗೆಟ್ಟು, ಮದ್ಯದ ಅಮಲಿನಲ್ಲಿ ಅತಿವೇಗವಾಗಿ ವಾಹನ ಚಲಾಯಿಸುವುದರಿಂದ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಇದರ ಜೊತೆಗೆ, ನಶೆಯಲ್ಲೇ ಹೋಟೆಲ್ ಬಳಿ ಬರುವ ಕಿಡಿಗೇಡಿಗಳು ಸಣ್ಣಪುಟ್ಟ ವಿಚಾರಗಳಿಗೂ ಸಾರ್ವಜನಿಕವಾಗಿ ಹೊಡೆದಾಟಕ್ಕಿಳಿದ ಘಟನೆಗಳು ನಡೆದಿವೆ.

ಪಾರ್ಕಿಂಗ್ ವಿಚಾರಕ್ಕೆ ಕಿರಿಕ್: ಎಫ್‌ಐಆರ್ ದಾಖಲು

ಇದಕ್ಕೆ ತಾಜಾ ಉದಾಹರಣೆ ಎಂದರೆ ಇತ್ತೀಚೆಗೆ ಮಣಿ ದಮ್ ಬಿರಿಯಾನಿ ಬಳಿ ಬಂದಿದ್ದ ರೌಡಿಶೀಟರ್ ಯಶಸ್ವಿನಿ ಗೌಡ ಮತ್ತು ತಂಡ ಕಾರು ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ತೆಗೆದು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಈ ಘಟನೆ ಸಂಬಂಧ ಹೊಸಕೋಟೆ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿತ್ತು. ಹೀಗೆ ಬಿರಿಯಾನಿ ಹೋಟೆಲ್‌ಗಳು ಮದ್ಯವ್ಯಸನಿಗಳ ಅಡ್ಡಾ ಹಾಗೂ ಗಲಾಟೆಯ ಕೇಂದ್ರಗಳಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಹೋಟೆಲ್ ಮಾಲೀಕರ ಸಭೆ ಕರೆದು ಮುಂಜಾನೆ 4 ಗಂಟೆ ಬದಲಿಗೆ 6 ಗಂಟೆಗೆ ಬಾಗಿಲು ತೆರೆಯುವಂತೆ ಸೂಚಿಸಿದ್ದಾರೆ.

ಪೊಲೀಸರ ಆದೇಶಕ್ಕೆ ಕ್ಯಾರೆ ಎನ್ನದ ಹೋಟೆಲ್‌ ಮಾಲೀಕರು; ನೋಟಿಸ್ ಜಾರಿ

ಪೊಲೀಸರು ಬೆಳಿಗ್ಗೆ 6 ಗಂಟೆಗೆ ತೆರೆಯುವಂತೆ ಆದೇಶಿಸಿದ್ದರೂ, ಹೋಟೆಲ್ ಮಾಲೀಕರು ಆದೇಶವನ್ನು ಗಾಳಿಗೆ ತೂರಿ ಬೆಳಿಗ್ಗೆ 4:30ರ ಸುಮಾರಿಗೆ ಎಂದಿನಂತೆ ವ್ಯಾಪಾರ ಮುಂದುವರಿಸಿದ್ದರು. ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವ ಇನ್ಸ್‌ಪೆಕ್ಟರ್ ಗೋವಿಂದ್, ಎಲ್ಲಾ ಬಿರಿಯಾನಿ ಹೋಟೆಲ್‌ಗಳಿಗೂ ನೋಟಿಸ್ ಜಾರಿ ಮಾಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ ಬಿರಿಯಾನಿ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದು, ‘6 ಗಂಟೆಗೆ ಹೋಟೆಲ್ ತೆರೆದರೆ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತದೆ, ಕನಿಷ್ಠ 5 ಗಂಟೆಗಾದರೂ ಅವಕಾಶ ನೀಡಿದರೆ ಒಳ್ಳೆಯದು’ ಎನ್ನುತ್ತಿದ್ದಾರೆ.

ಇದನ್ನೂ ಓದಿ: AC ರಿಪೇರಿ ಮಾಡ್ತಿದ್ದವನಿಗೆ ಪಾಕ್ ಗ್ಯಾಂಗ್​ಸ್ಟರ್​​ಗಳ​​​​ ನಂಟು: ಇವನ ಕಥೆ ಕೇಳಿದ್ರೆ ಶಾಕ್ ಆಗ್ತೀರಿ

ಒಟ್ಟಾರೆ ಬಿರಿಯಾನಿ ಹೆಸರಲ್ಲಿ ಮೋಜು-ಮಸ್ತಿ ಮಾಡುತ್ತಾ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿರುವುದಕ್ಕೆ ಬ್ರೇಕ್ ಹಾಕಲು ಹೊಸಕೋಟೆ ಪೊಲೀಸರು ಮುಂದಾಗಿದ್ದಾರೆ. ಇನ್ನೂ ಮುಂದಿನ ವಾರದಿಂದ ಆದರೂ ಪೊಲೀಸರ ಆದೇಶವನ್ನ ಬಿರಿಯಾನಿ ಹೋಟೆಲ್ ಮಾಲೀಕರು ಪಾಲನೆ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ನವೀನ್ ಕುಮಾರ್ ಟಿ.
ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!