ಬೆಂಗಳೂರು ಗ್ರಾಮಾಂತರ: ಲವ್ವರ್ ಖರ್ಚಿಗೆ ಕಾಸಿಲ್ಲ ಎಂದಿದ್ದಕ್ಕೆ ತನ್ನ ದೊಡ್ಡಪ್ಪನ ಮನೆಯಲ್ಲಿಯೇ ಕಳ್ಳತನ (theft) ಮಾಡಿಸಿದ್ದ ಪ್ರಿಯತಮೆ ಹಾಗೂ ಪ್ರಿಯಕರನನ್ನ ಪೊಲೀಸರು ಬಂಧಿಸಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ನೆಲಗದಿರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಿಕಾಂ ವಿದ್ಯಾರ್ಥಿನಿ ದೀಕ್ಷಿತಾ ಹಾಗೂ ಮೆಡಿಕಲ್ ವಿದ್ಯಾರ್ಥಿ ಮಧುನನ್ನ ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜುಲೈ 8ರಂದು ಬೆಂಗಳೂರು ಉತ್ತರ ತಾಲೂಕಿನ ನೆಲಗದಿರನಹಳ್ಳಿಯಲ್ಲಿ ತಿಮ್ಮೇಗೌಡರ ಮನೆಯಲ್ಲಿ 90 ಸಾವಿರ ನಗದು, 200 ಗ್ರಾಂ ಚಿನ್ನಾಭರಣವನ್ನ ಆರೋಪಿ ದೋಚಿದ್ದರು. ಸದ್ಯ ಆರೋಪಿಗಳಿಂದ 30 ಸಾವಿರ ನಗದು, 200 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಭೀಕರ ಅಪಘಾತ: ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣ
ಗಮನ ಬೇರೆಡೆ ಸೆಳೆಯಲು ಮಾಟ ಮಂತ್ರದ ನಾಟಕ:
ಮಾಟ ಮಂತ್ರದ ವಸ್ತುಗಳನ್ನು ಮನೆಯ ಕಾಂಪೌಂಡ್ನಲ್ಲಿ ಇಟ್ಟು ಮನೆಯವರ ಗಮನ ಬೇರೆಡೆ ಸೆಳೆದಿದ್ರು. ಮೆಡಿಕಲ್ ವಿದ್ಯಾರ್ಥಿಯಾದ ಲವ್ವರ್ ಮಧು ಪಿಪಿ ಕಿಟ್ ಹಾಕೊಂಡೆ ಬೈಕ್ನಲ್ಲಿ ಬಂದು ಕೃತ್ಯವೆಸಗಿದ್ದ. ಮಾಟ ಮಂತ್ರದ ವಸ್ತುಗಳನ್ನು ಶುಚಿಗೊಳಿಸುವ ವೇಳೆ ಲವ್ವರ್ ಮಹಡಿಗೆ ತೆರಳಿ ಮನೆಯಲ್ಲಿದ್ದ, 90 ಸಾವಿರ ಹಣ, 200 ಗ್ರಾಂ ಚಿನ್ನಾಭರಣಗಳನ್ನ ದೋಚಿದ್ದಳು.
ಆ ದಿನ ಅಪರಿಚಿತನೊಬ್ಬ ಯುವಕ ಪಿಪಿ ಕಿಟ್ ಹಾಕಿಕೊಂಡು ಬಂದಿರೋದು ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾ ಜಾಡು ಹಿಡಿದು ಮೊಬೈಲ್ ಟವರ್ ಲೋಕೇಷನ್ ಮೇಲೆ ತುಮಕೂರಿನ ಶಿರ ಬಳಿ ಆರೋಪಿ ಬಂಧನ ಮಾಡಿದ್ದು, ಪೊಲೀಸ್ ತನಿಖೆ ವೇಳೆ ಲವ್ವರ್ ದೀಕ್ಷಿತಾ ಮಾಸ್ಟರ್ ಮೈಂಡ್ ಬೆಳಕಿಗೆ ಬಂದಿದೆ. ಸದ್ಯ ಪ್ರಿಯತಮೆ ಜೊತೆ ಪ್ರಿಯಕರನೂ ಕಂಬಿ ಎಣಿಸುವಂತ್ತಾಗಿದೆ.