ಫಾಸ್ಟ್ಟ್ಯಾಗ್ ಇಲ್ಲದೆ ಲೇನ್ನಲ್ಲಿ ಬಂದ ಲಾರಿ: ಡಬಲ್ ಶುಲ್ಕ ಕೇಳಿದ್ದಕ್ಕೆ ಪುಂಡಾಟ
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಗಂಗಾಧರಯ್ಯನಪಾಳ್ಯ ಬಳಿ ಇರುವ ಜಾಸ್ ಟೋಲ್‌ನಲ್ಲಿ ಡಬಲ್ ಶುಲ್ಕ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಅಟ್ಯಾಕ್ ನಡೆಸಿದ್ದಾರೆ. ನಿನ್ನೆ ತುಮಕೂರಿನಿಂದ ಬೆಂಗಳೂರು ಮಾರ್ಗವಾಗಿ ಲಾರಿ ಬಂದಿತ್ತು. ಫಾಸ್ಟ್ಟ್ಯಾಗ್ ಅಳವಡಿಸದೇ ಅದೇ ಲೈನ್‌ನಲ್ಲಿ ಚಾಲಕ ಲಾರಿ ತಂದಿದ್ದ. ಟೋಲ್ ಸಿಬ್ಬಂದಿ, ಡಬಲ್ ಶುಲ್ಕ ಕೇಳಿದ್ದಾರೆ. ಇದ್ರಿಂದ ಉರಿ ಉರಿ ಉರಿದ 6 ಜನರ ತಂಡ ಸಿಬ್ಬಂದಿ ಮೇಲೆ ಅಟ್ಯಾಕ್ ಮಾಡಿದೆ. ಕಚೇರಿ ಒಳಗೆ ನುಗ್ಗಿ ಸಿಸ್ಟಮ್ ಇಂಜಿನಿಯರ್ ಅಭಿಮಾನ್ ಪಾಂಡೆ ಮೇಲೆ ಹಲ್ಲೆ […]
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಗಂಗಾಧರಯ್ಯನಪಾಳ್ಯ ಬಳಿ ಇರುವ ಜಾಸ್ ಟೋಲ್‌ನಲ್ಲಿ ಡಬಲ್ ಶುಲ್ಕ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಅಟ್ಯಾಕ್ ನಡೆಸಿದ್ದಾರೆ. ನಿನ್ನೆ ತುಮಕೂರಿನಿಂದ ಬೆಂಗಳೂರು ಮಾರ್ಗವಾಗಿ ಲಾರಿ ಬಂದಿತ್ತು. ಫಾಸ್ಟ್ಟ್ಯಾಗ್ ಅಳವಡಿಸದೇ ಅದೇ ಲೈನ್‌ನಲ್ಲಿ ಚಾಲಕ ಲಾರಿ ತಂದಿದ್ದ. ಟೋಲ್ ಸಿಬ್ಬಂದಿ, ಡಬಲ್ ಶುಲ್ಕ ಕೇಳಿದ್ದಾರೆ. ಇದ್ರಿಂದ ಉರಿ ಉರಿ ಉರಿದ 6 ಜನರ ತಂಡ ಸಿಬ್ಬಂದಿ ಮೇಲೆ ಅಟ್ಯಾಕ್ ಮಾಡಿದೆ. ಕಚೇರಿ ಒಳಗೆ ನುಗ್ಗಿ ಸಿಸ್ಟಮ್ ಇಂಜಿನಿಯರ್ ಅಭಿಮಾನ್ ಪಾಂಡೆ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಡಿಸಿದ್ರೂ ಬಿಡದೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಡಬಲ್ ಶುಲ್ಕ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಪುಂಡಾಟ! ಇನ್ನು, ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳು ಫಾಸ್ಟ್ಯಾಗ್ ಲೈನ್‌ನಲ್ಲಿ ಬಂದರೆ ದುಪ್ಪಟ್ಟು ಶುಲ್ಕ ಪಾವತಿಸಬೇಕು. ಆ ನಿಯಮದಂತೆ ಸಿಬ್ಬಂದಿ ದುಪ್ಪಟ್ಟು ಶುಲ್ಕ ಪಾವತಿಸುವಂತೆ ಕೇಳಿದ್ದಾರೆ. ಅಷ್ಟಕ್ಕೆ ಮನಸೋ ಇಚ್ಛೆ ಹಲ್ಲೆ ಮಾಡಿ ಕಿರಾತಕರು ಎಸ್ಕೇಪ್ ಆಗಿದ್ದಾರೆ. ಸದ್ಯ ಹಲ್ಲೆಯಿಂದಾಗಿ ಟೋಲ್ ಸಿಬ್ಬಂದಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ, ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Published On - 7:26 am, Mon, 27 January 20