ದೊಡ್ಡಬಳ್ಳಾಪುರ: ಕೆಲಸ ಅರಸಿ ಬಂದ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವು

| Updated By: ರಮೇಶ್ ಬಿ. ಜವಳಗೇರಾ

Updated on: Sep 17, 2023 | 12:06 PM

8 ದಿನಗಳ ಹಿಂದೆಯಷ್ಟೇ ಕೆಲಸ ಅರಸಿ ಬಂದಿದ್ದ ನಾಲ್ವರು ಸದಸ್ಯರ ಕುಟುಂಬವೊಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ರಾತ್ರಿ ಮಲಗಿದ್ದವರು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದು, ನಾಲ್ವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಇನ್ನು ಸ್ಥಳಕ್ಕೆ ಪೊಲೀಸರು ದೌಡಾಯಿಸಿ ತನಿಖೆ ಕೈಗೊಂಡಿದ್ದಾರೆ. ಆದ್ರೆ, ಕೆಲಸ ಅರಸಿ ಬಂದವರು ನಿಗೂಢವಾಗಿ ಸಾವನ್ನಪ್ಪಿದ್ದು ದುರಂತವೇ ಸರಿ.

ದೊಡ್ಡಬಳ್ಳಾಪುರ: ಕೆಲಸ ಅರಸಿ ಬಂದ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವು
Follow us on

ದೊಡ್ಡಬಳ್ಳಾಪುರ, (ಸೆಪ್ಟೆಂಬರ್ 17): ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura) ತಾಲೂಕಿನ ಹೊಲೆಯರಹಳ್ಳಿಯಲ್ಲಿ ನಡೆದಿದೆ. ನೇಪಾಳ ಮೂಲದ ಕಾಲೆ ಸರೆರಾ(60), ಲಕ್ಷ್ಮೀ ಸರೇರಾ(50), ಉಷಾ ಸರೇರಾ(40), ಪೊಲ್ ಸರೇರಾ(16) ಎನ್ನುವ ಒಂದೇ ಕುಟುಂಬದ ನಾಲ್ವರು ರಾತ್ರಿ ಕೋಳಿ ಫಾರಂನಲ್ಲಿ ಮಲಗಿದ್ದವರು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಈ ನೇಪಾಳಿ ಕುಟುಂಬ 8 ದಿನಗಳ ಹಿಂದೆಯಷ್ಟೇ ಕೆಲಸ ಅರಸಿ ದೊಡ್ಡಬಳ್ಳಾಪುರ ತಾಲೂಕಿನ ಹೊಲೆಯರಹಳ್ಳಿಗೆ ಬಂದಿತ್ತು. ಆದ್ರೆ, ನಿನ್ನೆ (ಸೆಪ್ಟೆಂಬರ್ 16) ರಾತ್ರಿ ಶೆಡ್ ಬಾಗಿಲು ಹಾಕಿಕೊಂಡು ಮಲಗಿದ್ದವರು, ಇಂದು(ಸೆ್ಪಟೆಂಬರ್ 17) ಬೆಳಗ್ಗೆ ಸ್ಥಳೀಯರು ಹೋಗಿ ನೋಡಿದಾಗ ಶವವಾಗಿ ಪತ್ತೆಯಾಗಿದ್ದಾರೆ.

ಅನುಮಾನಗೊಂಡ ಸ್ಥಳೀಯರು ಹೋಗಿ ನೋಡಿದಾಗ ನಾಲ್ವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಆದ್ರೆ, ನಾಲ್ವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ.

ಸೊಳ್ಳೆ ಕಾಟ ತಪ್ಪಿಸಲು ಹೋಗಿ ಬಲಿ ಆಯ್ತಾ ಕುಟುಂಬ?

ಕೋಳಿ ಪಾರಂನಲ್ಲಿ ಸೊಳ್ಳೆಕಾಟ ಹೆಚ್ಚಾಗಿದ್ದರಿಂದ ರಾತ್ರಿ ನಿದ್ದೆ ಬರಲ್ಲ ಅಂತ ಹೊಗೆ ಹಾಕಿದ್ದು, ಇದ್ದಿಲಿನಿಂದ ಹೊಗೆ ಹಾಕಿಕೊಂಡು ಮಲಗಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಕೊಠಡಿಯಲ್ಲಿ ಕಿಟಕಿ ಬಾಗಿಲು ಬಂದ್ ಆಗಿದ್ದ ಕಾರಣ ಹೊಗೆ ದಟ್ಟವಾಗಿ ಆವರಿಸಿದ ಹಿನ್ನೆಲೆಯಲ್ಲಿ ಉಸಿರುಗಟ್ಟಿ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಈಗಲು ಕೊಠಡಿ ಒಳಗಡೆ ಹೊಗೆ ತುಂಬಿಕೊಂಡಿದೆ. ಹೀಗಾಗಿ ಕೊಠಡಿಯಲ್ಲಿ ಕಿಟಕಿ ಬಾಗಿಲು ಬಂದ್ ಆಗಿದ್ದ ಕಾರಣ ಹೊಗೆ ದಟ್ಟವಾಗಿ ಆವರಿಸಿದ ಹಿನ್ನೆಲೆಯಲ್ಲಿ ಉಸಿರುಗಟ್ಟಿ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ‌ ಹಾಗೂ ಎಫ್​ಎಸ್ಎಲ್ ಹಾಗೂ ಕ್ರೈಂ ಸೀನ್ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Published On - 11:15 am, Sun, 17 September 23