ಬೆಂಗಳೂರು: ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಇಂದು ನೆಲಮಂಗಲಕ್ಕೆ ಭೇಟಿ ನೀಡಿದ್ದು, ಸಚಿವರನ್ನು ಸ್ವಾಗತಿಸುವ ಭರದಲ್ಲಿ ಜನರು ದೈಹಿಕ ಅಂತರ ಮರೆತು, ಮಾಸ್ಕ್ ಧರಿಸದೆ ಕೊವಿಡ್ ನಿಯಮ ಉಲ್ಲಂಘಿಸಿದ್ದಾರೆ. ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಮೊದಲು ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ರಾಮಾಂಜನೇಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.
ನೆಲಮಂಗಲಕ್ಕೆ ಆಗಮಿಸಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಪ್ರವಾಸಿ ಮಂದಿರದ ಬಳಿ ಆರತಿ ಬೆಳಗಿ ಮಹಿಳೆಯರು ಬರಮಾಡಿಕೊಂಡಿದ್ದಾರೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ ನಾಗರಾಜ್ ಸೇರಿದಂತೆ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ. ಇನ್ನು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ನೆಲಮಂಗಲ ಮಾದಿಗ ಮಹಾಸಭಾ ಕೇಂದ್ರ ಸಚಿವರಿಗೆ ಅದ್ದೂರಿ ಸ್ವಾಗತ ಕೋರಿದೆ.
ತಲೆ ಕೆಳಗಾಗಿ ಹಾರಿದ ರಾಷ್ಟ್ರಧ್ವಜ
ಬೆಂಗಳೂರು: ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಸರ್ಕಾರಿ ವಾಹನಕ್ಕೆ ಅಳವಡಿಸಲಾದ ಧ್ವಜ ತಲೆ ಕೆಳಗಾಗಿತ್ತು. ವಾಹನದ ಮುಂಭಾಗದಲ್ಲಿ ತಲೆ ಕೆಳಗಾಗಿ ರಾಷ್ಟ್ರೀಯ ಧ್ವಜ ಹಾರಾಡುತ್ತಿತ್ತು. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಬಿಜೆಪಿ ಕಚೇರಿಗೆ ಆಗಮಿಸಿದ್ದು. ಆದರೆ ಅವರ ವಾಹನಕ್ಕೆ ಅಳವಡಿಸಲಾಗಿದ್ದ ಧ್ವಜ ಉಲ್ಟಾ ಆಗಿತ್ತು. ಕೇಸರಿ ಬಿಳಿ ಹಸಿರಿನ ಬದಲಿಗೆ, ಹಸಿರು ಬಿಳಿ ಕೇಸರಿ ಅನುಕ್ರಮಣಿಕೆಯಲ್ಲಿ ರಾಷ್ಟ್ರಧ್ವಜ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಕಾರಿನ ಮೇಲಿತ್ತು.
ಬಳಿಕ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು, ಪತ್ರಿಕಾಗೋಷ್ಠಿಯ ನಂತರ ತಪ್ಪನ್ನು ತಿದ್ದಿಕೊಂಡರು. ರಾಷ್ಟ್ರಧ್ಜಜವನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ವಾಹನ ಚಾಲಕ, ಸಿಬ್ಬಂದಿ ಸರಿಪಡಿಸಿದರು.
ತುಮಕೂರು ಜಿಲ್ಲೆ ಶಿರಾದ ಮದಲೂರು ಕೆರೆಗೆ ನೀರು ವಿಚಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ನಿನ್ನೆ, ಇಂದು, ನಾಳೆಯೂ ನೀರು ಹರಿಸುವುದು ಖಚಿತ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅಂತಿಮ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು. ಮದಲೂರು ಕೆರೆಗೆ ನೀರು ಬಿಡಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿಕೆಗೂ ಪ್ರತಿಕ್ರಿಯಿಸಿದ, ‘ಮಾಧುಸ್ವಾಮಿ ಅವರು ಜಿಲ್ಲೆ ವಿಚಾರ ಮಾತ್ರ ಮಾತಾಡಿದ್ದಾರೆ. ಅದನ್ನು ರಾಷ್ಟ್ರೀಯ ಯೋಜನೆಯಾಗಿ ನಾವು ಮಾಡಿದ್ದೇವೆ. ಎತ್ತಿನ ಹೊಳೆ ಅಥವಾ ಹೇಮಾವತಿಯಿಂದ ನೀರು ಬರಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:
ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ: ಮೈಸೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ
ಕೇಂದ್ರ ಸಚಿವ ಎ ನಾರಾಯಣಸ್ವಾಮಿ ವಾಹನದಲ್ಲಿ ತಲೆ ಕೆಳಗಾಗಿ ಹಾರಿದ ರಾಷ್ಟ್ರಧ್ವಜ
Published On - 11:41 am, Tue, 17 August 21