AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸಚಿವ ಎ ನಾರಾಯಣಸ್ವಾಮಿ ವಾಹನದಲ್ಲಿ ತಲೆ ಕೆಳಗಾಗಿ ಹಾರಿದ ರಾಷ್ಟ್ರಧ್ವಜ

ರಾಷ್ಟ್ರಧ್ಜಜವನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ವಾಹನ ಚಾಲಕ, ಸಿಬ್ಬಂದಿ ಸರಿಪಡಿಸಿದರು.

ಕೇಂದ್ರ ಸಚಿವ ಎ ನಾರಾಯಣಸ್ವಾಮಿ ವಾಹನದಲ್ಲಿ ತಲೆ ಕೆಳಗಾಗಿ ಹಾರಿದ ರಾಷ್ಟ್ರಧ್ವಜ
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
TV9 Web
| Updated By: guruganesh bhat|

Updated on: Aug 16, 2021 | 10:30 PM

Share

ಬೆಂಗಳೂರು: ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಸರ್ಕಾರಿ ವಾಹನಕ್ಕೆ ಅಳವಡಿಸಲಾದ ಧ್ವಜ ತಲೆ ಕೆಳಗಾಗಿತ್ತು. ವಾಹನದ ಮುಂಭಾಗದಲ್ಲಿ ತಲೆ ಕೆಳಗಾಗಿ ರಾಷ್ಟ್ರೀಯ ಧ್ವಜ ಹಾರಾಡುತ್ತಿತ್ತು. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಬಿಜೆಪಿ ಕಚೇರಿಗೆ ಆಗಮಿಸಿದ್ದು. ಆದರೆ ಅವರ ವಾಹನಕ್ಕೆ ಅಳವಡಿಸಲಾಗಿದ್ದ ಧ್ವಜ ಉಲ್ಟಾ ಆಗಿತ್ತು. ಕೇಸರಿ ಬಿಳಿ ಹಸಿರಿನ ಬದಲಿಗೆ, ಹಸಿರು ಬಿಳಿ ಕೇಸರಿ ಅನುಕ್ರಮಣಿಕೆಯಲ್ಲಿ ರಾಷ್ಟ್ರಧ್ವಜ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಕಾರಿನ ಮೇಲಿತ್ತು.

ಬಳಿಕ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು, ಪತ್ರಿಕಾಗೋಷ್ಠಿಯ ನಂತರ  ತಪ್ಪನ್ನು ತಿದ್ದಿಕೊಂಡರು. ರಾಷ್ಟ್ರಧ್ಜಜವನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ವಾಹನ ಚಾಲಕ, ಸಿಬ್ಬಂದಿ ಸರಿಪಡಿಸಿದರು.

ತುಮಕೂರು ಜಿಲ್ಲೆ ಶಿರಾದ ಮದಲೂರು ಕೆರೆಗೆ ನೀರು ವಿಚಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ನಿನ್ನೆ, ಇಂದು, ನಾಳೆಯೂ ನೀರು ಹರಿಸುವುದು ಖಚಿತ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅಂತಿಮ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು. ಮದಲೂರು ಕೆರೆಗೆ ನೀರು ಬಿಡಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿಕೆಗೂ ಪ್ರತಿಕ್ರಿಯಿಸಿದ, ‘ಮಾಧುಸ್ವಾಮಿ ಅವರು ಜಿಲ್ಲೆ ವಿಚಾರ ಮಾತ್ರ ಮಾತಾಡಿದ್ದಾರೆ. ಅದನ್ನು ರಾಷ್ಟ್ರೀಯ ಯೋಜನೆಯಾಗಿ ನಾವು ಮಾಡಿದ್ದೇವೆ. ಎತ್ತಿನ ಹೊಳೆ ಅಥವಾ ಹೇಮಾವತಿಯಿಂದ ನೀರು ಬರಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: 

ಧಾರವಾಡದಲ್ಲಿ ಅಪ್ಘಾನಿಸ್ತಾನದ ವಿದ್ಯಾರ್ಥಿಗಳು; ತಾಯ್ನಾಡಿನ ದುಸ್ಥಿತಿ, ಕುಟುಂಬದವರನ್ನು ನೆನೆದು ಕಣ್ಣೀರು

ಅಂಧ ವಿದ್ಯಾರ್ಥಿಗಳಿಗೆ ಮಾತನಾಡುವ ಲ್ಯಾಪ್​ಟಾಪ್: ಹೈಕೋರ್ಟ್​ಗೆ ಸರ್ಕಾರದಿಂದ ಮಾಹಿತಿ

(Union Minister A Narayanaswamy vehicle indian flag is reversed in Bengaluru)