ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಬೆನ್ನಲ್ಲೇ ಟ್ರಾಫಿಕ್ ಪೊಲೀಸರ ಮೇಲೆ ಆರೋಪಗಳ ಸುರಿ ಮಳೆ, ತಿಂಗಳಲ್ಲಿ ಎರಡು ಮೂರು ಬಾರಿ ಮಾಮೂಲು ನೀಡಬೇಕೆಂದ ವ್ಯಾಪಾರಸ್ಥರು

| Updated By: ಆಯೇಷಾ ಬಾನು

Updated on: Jun 27, 2022 | 7:31 PM

ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ವಿರುದ್ಧ ಬೀದಿ ಬದಿ ವ್ಯಾಪರಸ್ಥರು ಆರೋಪ ಮಾಡಿದ್ದಾರೆ. ಟ್ರಾಫಿಕ್ ಪೊಲೀಸರು ವಿನಾಕಾರಣ ಕೇಸ್ ಹಾಕ್ತಾರೆ. ಯಾವುದೇ ರಸೀದಿಯೂ ನೀಡಲ್ಲ, ಇನ್ನೂರು ಮುನ್ನೂರು ತೆಗೆದುಕೊಂಡು ಹೋಗ್ತಾರೆ. ನಮ್ಮಿಂದ ಯಾವುದೇ ಟ್ರಾಫಿಕ್ ಜಾಮ್ ಆಗಲ್ಲ. ಆದ್ರೂ ನಮ್ಮ ಬಳಿ ಹಣ ಪಡೆದುಕೊಂಡು ಹೋಗ್ತಾರೆ.

ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಬೆನ್ನಲ್ಲೇ ಟ್ರಾಫಿಕ್ ಪೊಲೀಸರ ಮೇಲೆ ಆರೋಪಗಳ ಸುರಿ ಮಳೆ, ತಿಂಗಳಲ್ಲಿ ಎರಡು ಮೂರು ಬಾರಿ ಮಾಮೂಲು ನೀಡಬೇಕೆಂದ ವ್ಯಾಪಾರಸ್ಥರು
ಟ್ರಾಫಿಕ್ ಪೊಲೀಸರು
Follow us on

ಬೆಂಗಳೂರು: ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಟ್ವೀಟ್ ಮೂಲಕ ಡಿಜಿ&ಐಜಿಪಿ ಪ್ರವೀಣ್ ಸೂದ್(Praveen Sood) ಎಲ್ಲೆಂದರಲ್ಲಿ ವಾಹನ ತಡೆದು ಪರಿಶೀಲಿಸುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಬೆನ್ನಲ್ಲೇ ಜನರಿಂದ ಪ್ರತಿಕ್ರಿಯೆಗಳು ಶುರುವಾಗಿವೆ. ಟ್ವಿಟರ್ ಮೂಲಕ ಜನರು ತಮ್ಮ ಸಮಸ್ಯೆಗಳನ್ನು ಹಾಗೂ ಪೊಲೀಸರಿಂದ ಅವರಿಗಾಗುತ್ತಿರುವ ಒತ್ತಡವನ್ನು ಹೇಳಿ ಕೊಂಡಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ವಿರುದ್ಧ ಬೀದಿ ಬದಿ ವ್ಯಾಪರಸ್ಥರು ಆರೋಪ ಮಾಡಿದ್ದಾರೆ. ಟ್ರಾಫಿಕ್ ಪೊಲೀಸರು ವಿನಾಕಾರಣ ಕೇಸ್ ಹಾಕ್ತಾರೆ. ಯಾವುದೇ ರಸೀದಿಯೂ ನೀಡಲ್ಲ, ಇನ್ನೂರು ಮುನ್ನೂರು ತೆಗೆದುಕೊಂಡು ಹೋಗ್ತಾರೆ. ನಮ್ಮಿಂದ ಯಾವುದೇ ಟ್ರಾಫಿಕ್ ಜಾಮ್ ಆಗಲ್ಲ. ಆದ್ರೂ ನಮ್ಮ ಬಳಿ ಹಣ ಪಡೆದುಕೊಂಡು ಹೋಗ್ತಾರೆ. ತಿಂಗಳಲ್ಲಿ ಎರಡು ಮೂರು ಬಾರಿ ಮಾಮೂಲು ನೀಡಬೇಕು. ಇಲ್ಲದಿದ್ದರೆ ಜಾಗ ಖಾಲಿ ಮಾಡಿ ಅಂತಾರೆ, ನಾವು ತಳ್ಳು ಬಂಡಿ ವ್ಯಾಪಾರ ಮಾಡಿ ಜೀವನ‌ ಸಾಗಿಸ್ತೀವಿ, ಖಾಲಿ ಮಾಡಿ ಅಂದ್ರೆ ಹೇಗೆ ಅಂತ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆ ಬೀದಿ ಬದಿ ವ್ಯಾಪರಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ:ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಸುಪ್ರೀಂಕೋರ್ಟ್​ನಲ್ಲಿ ವಾದ, ಪ್ರತಿವಾದ ಹೇಗಿತ್ತು? 

ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆ ಬಳಿ ಸುಮಾರು ವರ್ಷಗಳಿಂದ ತಳ್ಳು ಗಾಡಿ ಇಟ್ಟುಕೊಂಡಿರುವ ವ್ಯಾಪಾರಸ್ಥರಿಗೆ ಬಂದಿಲೊಂದು ಸಮಸ್ಯೆ ಎದುರಾಗುತ್ತಿದೆಯಂತೆ. ಈ ಬಗ್ಗೆ ಮಾತನಾಡಿರುವ ವ್ಯಾಪಾರಸ್ಥರು, ನಮಗೆ ಬರುವ ಪುಡಿಕಾಸಿನಲ್ಲಿ ನಾವು ಪ್ರತಿ ತಿಂಗಳು ಪೊಲೀಸರಿಗೆ ಮಾಮುಲಿ ಕೊಡಬೇಕು. ಇಲ್ಲದಿದ್ದರೆ ಅವರು ನಮ್ಮನ್ನು ಇಲ್ಲಿಂದ ಎತ್ತಂಗಡಿ ಮಾಡುವುದಾಗಿ ಹೇಳುತ್ತಾರೆ. ನಿಮ್ಮಿಂದಲೇ ಟ್ರಾಫಿಕ್ ಜಾಮ್ ಆಗುತ್ತಿದೆ ಎನ್ನುತ್ತಾರೆ. ನಿಮಗೆ ಬೇರೆ ಕಡೆ ಜಾಗ ಕೊಡಿಸುವುದಾಗಿ ಭರವಸೆ ಕೊಡ್ತಾರೆ ಆದ್ರೆ ಈ ವರೆಗೆ ಯಾವುದೇ ಕ್ರಮ ಜರಿಗಿಲ್ಲ. ನಮಗೊಂದು ಉತ್ತಮ ವ್ಯವಸ್ಥೆ ಮಾಡಿಕೊಡ ಬೇಕು ಎಂದು ವ್ಯಾಪಾರಸ್ಥರು ಸಮಸ್ಯೆ ಹೇಳಿಕೊಂಡಿದ್ದಾರೆ.

ಶಾಸಕರ ಪಿಎ ಹೆಸರಲ್ಲಿ ಜಾಗ ಬಿಟ್ಟುಕೊಡುವಂತೆ ಬೀದಿ ಬದಿ ವ್ಯಾಪಾರಿಗಳಿಗೆ ಕಿರುಕುಳ
ಬೆಂಗಳೂರುನಗರದ ಎಲೆಕ್ಟ್ರಾನಿಕ್ ಸಿಟಿಯ ಪೇಸ್ ಒನ್ ನೀಲಾದ್ರಿ ರಸ್ತೆಯಲ್ಲಿ ವಾಹನಗಳು ನಿಲ್ಲಿಸಲು ಜಾಗದ ಕೊರತೆ ಕಾರಣ ಪಾರ್ಕಿಂಗ್ ಸ್ಲಾಟ್ ಮಾಡಿಕೊಡಲು ಸಾರ್ವಜನಿಕರು ಆಗಿನ ಪೊಲೀಸ್ ಕಮಿಷನರ್ ಕಮಲ್ ಪಂತ್ ಬಳಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಬೆಂಗಳೂರು ದಕ್ಷಿಣ ಶಾಸಕ ಕೃಷ್ಣಪ್ಪ ಬೆಂಬಲಿಗರೆಂದು ಹೇಳಿಕೊಂಡಿರುವ ಪಿಎ ರಮೇಶ್ ಹಾಗೂ ಕೆಲವರು ಪಾರ್ಕಿಂಗ್ ಲಾಟ್ ಗಾಗಿ ಜಾಗ ಬಿಟ್ಟುಕೊಡುವಂತೆ ಅಂಗಡಿ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದಾರೆ. ಪಾರ್ಕಿಂಗ್ ನಿರ್ಮಾಣ ಮಾಡಬೇಕಾಗಿರುವ ಬಹುತೇಕ ಜಾಗ ಬೀದಿ ಬದಿ ವ್ಯಾಪಾರಸ್ಥರು ಬಳಸಿಕೊಳ್ಳುತ್ತಿರುವ ಪರಿಣಾಮ‌ ಅವರೂ ಜಾಗ ಬಿಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಹಾಗಾಯೇ ಅವರ ವ್ಯಾಪಾರಕ್ಕೆ ಕುಂದು ಬರದಂತೆ ಪ್ರತ್ಯೇಕ ಜಾಗ ನೀಡುತ್ತೇವೆ ಅಂತ ವಾಗ್ದಾನ ಕೂಡ ಮಾಡಲಾಗಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಸ್ತೆ ಬದಿ ವ್ಯಾಪಾರಸ್ಥರು, ನಮ್ಮಿಂದಾಗಿ ಯಾವುದೇ ಟ್ರಾಫಿಕ್ ಜಾಮ್ ಆಗುತ್ತಿಲ್ಲ, ದಶಕಗಳಿಂದ ನಾವು ಇಲ್ಲಿ ವ್ಯಾಪಾರ ಮಾಡಿಕೊಂಡೆ ಬರ್ತಾ ಇದ್ದೇವೆ, ಈಗ ತತ್ ಕ್ಷಣಕ್ಕೆ ಜಾಗ ಖಾಲಿ ಮಾಡಿ ಅಂದ್ರೆ ಎಲ್ಲಿಗೆ ಹೋಗೊದು ಅಂತ ಪ್ರಶ್ನೆ ಮಾಡಿದ್ದಾರೆ. ದೊಡ್ಡ ದೊಡ್ಡ ಬಿಲ್ಡಿಂಗ್ ನಲ್ಲಿ ವಾಸಿಸುವವರು ನೀಲಾದ್ರಿ ರಸ್ತೆಯಲ್ಲಿ ತಮ್ಮ ಕಾರುಗಳನ್ನು ಎಲ್ಲಿ ಬೇಕೆಂದರಲ್ಲಿ ಪಾರ್ಕ್ ಮಾಡಿ ಟ್ರಾಪಿಕ್ ಜಾಮ್ ಮಾಡುತ್ತಿದ್ದಾರೆ ವಿನಃ ನಮ್ಮಿಂದ ಯಾವುದೇ ತೊಂದರೆ‌ ಇಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.

Published On - 6:50 pm, Mon, 27 June 22