ಬೆಂಗಳೂರು ಗ್ರಾಮಾಂತರ: ಕೆರೆ ಏರಿ ಮೇಲಿಂದ ಬಿದ್ದು ಶಾಲಾ ವಾಹನ (School Vehicle) ಪಲ್ಟಿಯಾಗಿ ಐದು ಜನ ವಿದ್ಯಾರ್ಥಿಗಳು (Student) ಗಂಭೀರವಾಗಿ ಗಾಯಗೊಂಡಿರುವ ಘಟನೆ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ತಿರುಮಗೊಂಡಹಳ್ಳಿ ಹಾಗೂ ಗಂಗಸಂದ್ರ ಗ್ರಾಮದ ನಡುವೆ ನಡೆದಿದೆ. ದೊಡ್ಡಬಳ್ಳಾಪುರದ ಪಾಲನಾ ಜೋಗಹಳ್ಳಿ ಬಳಿಯ ಬಿ.ಹೆಚ್. ಪಬ್ಲಿಕ್ ಶಾಲಗೆ ಸೇರಿದ ವಾಹನ ಪಲ್ಟಿಯಾಗಿದೆ. ಘಟನೆಯಲ್ಲಿ ಪಾಲ್ ಪಾಲ್ ದಿನ್ನೆ ಗ್ರಾಮದ ಮಗುವಿನ ತಲೆಗೆ ಗಂಭೀರ ಗಾಯಾವಾಗಿದ್ದು, ಗಂಗಸಂದ್ರ ಗ್ರಾಮದ ಓರ್ವ ಮಗುವಿನ ಕಾಲಿಗೆ ಪೆಟ್ಟಾಗಿದೆ. ಹಾಗೆ ಹಾಡೋನಹಳ್ಳಿಯ ಮೂವರು ಮಕ್ಕಳಿಗೆ ಗಾಯಗಳಾಗಿವೆ. ಅಪಘಾತ ಕಂಡು ಸ್ಥಳಕ್ಕೆ ಧಾವಿಸಿದ ಸ್ಥಳೀಯರಿಂದ ಮಕ್ಕಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳದಿಂದ ಚಾಲಕ ಪರಾರಿಯಾಗಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 7:44 pm, Fri, 23 June 23