ಅಕ್ರಮವಾಗಿ ಇ ಸಿಗರೇಟ್​​​ಗಳ ಸಾಗಾಟ: ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 18, 2023 | 11:00 AM

ಅಕ್ರಮವಾಗಿ ವಿದೇಶದಿಂದ ಇ ಸಿಗರೇಟ್​ಗಳನ್ನು ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಪ್ರಯಾಣಿಕರಿಂದ 15.9 ಲಕ್ಷ ಮೌಲ್ಯದ 1590 ಸಿಗರೇಟ್​​ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ.

ಅಕ್ರಮವಾಗಿ ಇ ಸಿಗರೇಟ್​​​ಗಳ ಸಾಗಾಟ: ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು
ವಶಕ್ಕೆ ಪಡೆದ ಇ ಸಿಗರೇಟ್​ಗಳು
Follow us on

ದೇವನಹಳ್ಳಿ, ಸೆಪ್ಟೆಂಬರ್​ 18: ಅಕ್ರಮವಾಗಿ ವಿದೇಶದಿಂದ ಇ ಸಿಗರೇಟ್​ಗಳನ್ನು ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಏರ್ಪೋಟ್ ಕಸ್ಟಮ್ಸ್ (Bengaluru Airport) ಅಧಿಕಾರಿಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಪ್ರಯಾಣಿಕರಿಂದ 15.9 ಲಕ್ಷ ಮೌಲ್ಯದ 1590 ಸಿಗರೇಟ್​​ಗಳನ್ನು ವಶಕ್ಕೆ ಪಡೆಯಲಾಗಿದೆ. ತಡರಾತ್ರಿ ಎಂಎಚ್ 192 ಮಲೇಶಿಯಾ ಏರ್ಲೈನ್ಸ್​​ನಲ್ಲಿ ಮಲೇಶಿಯಾದ ಕೋಲಲಾಂಪುರದಿಂದ ಪ್ರಯಾಣಿಕರು ಆಗಮಿಸಿದ್ದರು. ಸದ್ಯ ಸಿಗರೇಟ್​ಗಳ ಸಮೇತ ಇಬ್ಬರು ಪ್ರಯಾಣಿಕರನ್ನ ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ ವಿವಿಧ ಬಗೆಯ 78 ಪ್ರಾಣಿಗಳು ವಶಕ್ಕೆ

ಇತ್ತೀಚೆಗೆ ಏರ್ ಏಷ್ಯಾ ವಿಮಾನದಲ್ಲಿ ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನೋರ್ವ ಹಲವು ಪ್ರಾಣಿಗಳು ಹಾಗೂ ಸರಿಸ್ಕ್ರಪಗಳನ್ನ ಅಕ್ರಮವಾಗಿ ಸಾಗಾಟ ಮಾಡಿ ಸಿಕ್ಕಿ ಬಿದ್ದಿದ್ದ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣಕ್ಕೆ ಬೆಳಗ್ಗೆ 10:30 ರ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕನ ಬ್ಯಾಗ್ ಅನ್ನ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ: ಇಂದಿನಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ನಿಂದ ವಿಮಾನಗಳ ಹಾರಾಟ ಶುರು, ಏನೆಲ್ಲ ವಿಶೇಷತೆಗಳಿವೆ ಗೊತ್ತಾ?

ಈ ವೇಳೆ ಬಾಕ್ಸ್​ಗಳಲ್ಲಿ ಹಾವು, ಕೋತಿ ಹಾಗೂ ಕೋಬ್ರಾಗಳನ್ನ ತಂದಿರುವುದು ಗೊತ್ತಾಗಿತ್ತು. ಹೀಗಾಗಿ ಬ್ಯಾಗ್ ಅನ್ನ ಒಪನ್ ಮಾಡಿಸಿ ನೋಡಿದಾಗ 55 ಹೆಬ್ಬಾವು, 17 ಕಿಂಗ್ ಕೋಬ್ರಾ, ಹಾಗೂ 06 ಸತ್ತ ಕಪ್ಚುನ್ ಕೋತಿಗಳು ಪತ್ತೆಯಾಗಿದ್ದವು.

ಇದನ್ನು ಓದಿ: ಬೆಂಗಳೂರು: ಪ್ರಯಾಣಿಕನ ಬ್ಯಾಗ್​ನಲ್ಲಿ ಜೀವಂತ 55 ಹೆಬ್ಬಾವು, 17 ಕಾಳಿಂಗ ಸರ್ಪದ ಮರಿಗಳು ಪತ್ತೆ: ಓರ್ವ ವ್ಯಕ್ತಿ ವಶಕ್ಕೆ

ಹೀಗಾಗಿ ಎಲ್ಲಾ ಪ್ರಾಣಿ ಹಾಗೂ ಸರಿಸ್ಕ್ರಪಗಳನ್ನ ವಶಕ್ಕೆ ಪಡೆದು ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಪ್ರಾಣಿಗಳ ಸಾಗಾಟ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು.

ಮಾತ್ರೆ ಮಾದರಿಯಲ್ಲಿ ಡ್ರಗ್ಸ್ ಸಾಗಾಟ: ಕೀನ್ಯಾ ಮೂಲದ ಮಹಿಳೆ ವಶಕ್ಕೆ 

ಕ್ಯಾಪ್ಸೂಲ್ ಮಾತ್ರೆ ಮಾದರಿಯಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದರು. ಕ್ಯಾಪ್ಸೂಲ್ ಮಾತ್ರೆ ರೂಪದಲ್ಲಿ ವಿದೇಶದಿಂದ ಡ್ರಗ್ ಸಾಗಿಸುತ್ತಿದ್ದ​ ಕೀನ್ಯಾ ಮೂಲದ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಬಳಿಕ NCB ಅಧಿಕಾರಿಗಳ ವಶಕ್ಕೆ ನೀಡಿದ್ದರು. ಮಹಿಳೆ ಬಳಿ ಇದ್ದ ಬರೋಬ್ಬರಿ 1 ಕೆಜಿ 144 ಗ್ರಾಂ ಡ್ರಗ್ಸ್​​ ಜಪ್ತಿ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.