ಬೆಂಗಳೂರು: ಪ್ರಯಾಣಿಕನ ಬ್ಯಾಗ್​ನಲ್ಲಿ ಜೀವಂತ 55 ಹೆಬ್ಬಾವು, 17 ಕಾಳಿಂಗ ಸರ್ಪದ ಮರಿಗಳು ಪತ್ತೆ: ಓರ್ವ ವ್ಯಕ್ತಿ ವಶಕ್ಕೆ

ಬ್ಯಾಂಕಾಕ್​ನಿಂದ ಏರ್ ಏಷ್ಯಾ FD 137 ವಿಮಾನದಲ್ಲಿ ಬಂದಿದ್ದ ವ್ಯಕ್ತಿ ಬ್ಯಾಗ್​ನಲ್ಲಿ ಜೀವಂತ 55 ಹೆಬ್ಬಾವು ಮರಿಗಳು, 17 ಕಾಳಿಂಗಸರ್ಪದ ಮರಿಗಳು ಮತ್ತು ಸತ್ತ 6 ಕಪ್ಪುಚುನ್ ಕೋತಿ ಮರಿಗಳ ಕಳೇಬರ ಪತ್ತೆ ಆಗಿದ್ದು, ಪ್ರಾಣಿಗಳ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಐಎಬಿನಲ್ಲಿ ನಡೆದಿದೆ.

ಬೆಂಗಳೂರು: ಪ್ರಯಾಣಿಕನ ಬ್ಯಾಗ್​ನಲ್ಲಿ ಜೀವಂತ 55 ಹೆಬ್ಬಾವು, 17 ಕಾಳಿಂಗ ಸರ್ಪದ ಮರಿಗಳು ಪತ್ತೆ: ಓರ್ವ ವ್ಯಕ್ತಿ ವಶಕ್ಕೆ
ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಾಣಿಗಳು ವಶಕ್ಕೆ
Follow us
ನವೀನ್ ಕುಮಾರ್ ಟಿ
| Updated By: ಗಂಗಾಧರ​ ಬ. ಸಾಬೋಜಿ

Updated on:Sep 07, 2023 | 9:12 PM

ದೇವನಹಳ್ಳಿ, ಸೆಪ್ಟೆಂಬರ್​​ 7: ಅಕ್ರಮವಾಗಿ ವಿದೇಶದಿಂದ ಸಾಗಾಟ ಮಾಡುತ್ತಿದ್ದ 78 ಪ್ರಾಣಿಗಳನ್ನು ಮತ್ತು ಓರ್ವ ವ್ಯಕ್ತಿಯನ್ನು ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು (Customs officials) ವಶಕ್ಕೆ ಪಡೆದಿದ್ದಾರೆ. ಬ್ಯಾಂಕಾಕ್​ನಿಂದ ಏರ್ ಏಷ್ಯಾ FD 137 ವಿಮಾನದಲ್ಲಿ ಬಂದಿದ್ದ ವ್ಯಕ್ತಿ ಬ್ಯಾಗ್​ನಲ್ಲಿ ಜೀವಂತ 55 ಹೆಬ್ಬಾವು ಮರಿಗಳು, 17 ಕಾಳಿಂಗಸರ್ಪದ ಮರಿಗಳು ಮತ್ತು ಸತ್ತ 6 ಕಪ್ಪುಚುನ್ ಕೋತಿ ಮರಿಗಳ ಕಳೇಬರ ಪತ್ತೆ ಆಗಿದ್ದು, ಪ್ರಾಣಿಗಳ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಣಿಗಳ ಅಕ್ರಮ ಸಾಗಾಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ. ಸದ್ಯ ಪ್ರಾಣಿಗಳನ್ನ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.

ಪ್ರಾಣಿಗಳ ಅಕ್ರಮ ಸಾಗಣೆ ಕಾಯ್ದೆ 1962 ರ ಸೆಕ್ಷನ್ 110 ರ ಅಡಿಯಲ್ಲಿ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ಪ್ರಾಣಿಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ನಿಗದಿತ ಪ್ರಾಣಿಗಳೆಂದು ನಿಗದಿಪಡಿಸಲಾಗಿದೆ ಮತ್ತು ಬೆಂಗಳೂರು ಕಸ್ಟಮ್ಸ್ ಪ್ರಕಾರ CITESನ ಅನುಬಂಧಗಳ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ.

ಇದನ್ನೂ ಓದಿ: ಬ್ಯಾಂಕಾಕ್‌ನಿಂದ ಬಂದವನ ಬ್ಯಾಗಲ್ಲಿತ್ತು ಹೆಬ್ಬಾವು, ಮೊಸಳೆ! ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 234 ಪ್ರಾಣಿಗಳ ಜಪ್ತಿ

ಈ ಕುರಿತಾಗಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಟ್ವೀಟ್​ ಮಾಡಿದ್ದು, ವನ್ಯಜೀವಿ ಕಳ್ಳಸಾಗಣೆ ಪ್ರಕರಣವನ್ನು ಏರ್ ಕಸ್ಟಮ್ಸ್ ಸೆಪ್ಟೆಂಬರ್ 6 ರಂದು, ಕೆಐಎಎಲ್ ಬೆಂಗಳೂರಿನಲ್ಲಿ ದಾಖಲಿಸಲಾಗಿದೆ ಜೀವಂತವಾಗಿ ಕಂಡುಬಂದ ಪ್ರಾಣಿಗಳನ್ನು ಮೂಲ ದೇಶಕ್ಕೆ ಗಡೀಪಾರು ಮಾಡಲಾಗುತ್ತಿದ್ದು, 6 ಸತ್ತ ಕ್ಯಾಪುಚಿನ್ ಕೋತಿಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಸದ್ಯ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.

ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ಟ್ವೀಟ್

ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಆಗಸ್ಟ್‌ನಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಅಕ್ರಮವಾಗಿ 234 ಕಾಡುಪ್ರಾಣಿಗಳನ್ನು ಸಾಗಾಟ ಮಾಡಿದ್ದಕ್ಕಾಗಿ ಓರ್ವ ಪ್ರಯಾಣಿಕನನ್ನು ಬಂಧಿಸಿದ್ದರು. ಅಧಿಕಾರಿಗಳು ಜೋಯ್, ಹೆಬ್ಬಾವು, ಊಸರವಳ್ಳಿಗಳು, ಇಗ್ವಾನಾಗಳು, ಆಮೆಗಳು ಮತ್ತು ಮೊಸಳೆಗಳನ್ನು ವಶಪಡಿಸಿಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:11 pm, Thu, 7 September 23