ಬೆಂಗಳೂರು: ನೆಲಮಂಗಲದ ಪ್ರತಿಷ್ಠಿತ ಕಾಲೇಜ್ ಗೇಟ್ ಬಳಿ ಹುಡುಗಿಯ ವಿಚಾರಕ್ಕೆ ಪಿಯು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಯುವತಿಯನ್ನು ರೇಗಿಸಿದ್ದಕ್ಕೆ 5 ಹುಡುಗರು ಸೇರಿಕೊಂಡು ಆಕಾಶ್ ಎಂಬ ಪಿಯುಸಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಆದರೆ, ಹಲ್ಲೆಗೊಳಗಾದ ಆಕಾಶ್ (16) ಎಂಬ ವಿದ್ಯಾರ್ಥಿ ಮನನೊಂದು ನೇಣಿಗೆ ಶರಣಾಗಿದ್ದಾನೆ. ಹಲ್ಲೆ ಮಾಡುವುದನ್ನು ವಿಡಿಯೋ ಮಾಡಿಕೊಂಡು ವೈರಲ್ ಮಾಡಲಾಗಿತ್ತು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಮಡಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಕೆರೆಗುಡ್ಡದಹಳ್ಳಿ ಕೆರೆಗುಡ್ಡದಹಳ್ಳಿಯ ಪ್ರತಿಷ್ಠಿತ ಕಾಲೇಜ್ ಗೇಟ್ ಬಳಿ ಈ ಘಟನೆ ನಡೆದಿದೆ. ವಿದ್ಯಾಭ್ಯಾಸಕ್ಕೆಂದು ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದ ಆಕಾಶ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿವಿ 9 ಗೆ ಡಿಸಿಪಿ ವಿನಾಯಕ್ ಪಟೇಲ್ ಹೇಳಿಕೆ:
ಕಾಲೇಜು ಹುಡುಗ ನೇಣು ಬಿಗಿದು ಸಾವನಪ್ಪಿರುವ ಪ್ರಕರಣದ ಸಂಬಂಧ ಟಿವಿ 9 ಗೆ ಡಿಸಿಪಿ ವಿನಾಯಕ್ ಪಟೇಲ್ ಪ್ರತಿಕ್ರಿಯೆ ನೀಡಿದ್ದು, ಸದರಿ ಪ್ರಕರಣದಲ್ಲಿ ಒಬ್ಬ ಮೈನರ್ ಹುಡುಗ ಮನೆಯಲ್ಲಿ ನೇಣು ಬಿಗಿದು ಸಾವನಪ್ಪಿದ್ದಾನೆ. ಈ ಪ್ರಕರಣ ಹಿನ್ನೆಲೆಯಲ್ಲಿ 6ನೆಯ ತಾರೀಖು ನಂದು ಯುಡಿಆರ್ ಪ್ರಕರಣ ದಾಖಲಾಗಿದೆ. ಸಂಬಂಧಿಕರ ದೂರಿನ ಆಧಾರದ ಮೇಲೆ ನಾವು ತನಿಖೆಯನ್ನು ಮುಂದುವರಿಸುತ್ತೇವೆ. ಆಕಾಶ್ ನನ್ನು ಸ್ನೇಹಿತರು ಹೊಡೆಯುವಾಗ ವೀಡಿಯೋ ಮಾಡಲಾಗಿದೆ. ಸ್ನೇಹಿತರು ವಿಡಿಯೊ ಮಾಡಿ, ಅದನ್ನು ವೈರಲ್ ಮಾಡಿದ್ದಾರೆ. ಹೀಗಾಗಿ ಆಕಾಶ್ ಮನ ನೊಂದು ನೇಣಿಗೆ ಶರಣಾಗಿದ್ದಾನೆ ಎಂಬುದು ಸಂಬಂಧಿಕರ ಮಾತು. ಈಗಾಗಲೇ ಐದು ಮೈನರ್ ಹುಡುಗರನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಬಾಲಾಪರಾಧಿ ಬೋರ್ಡ್ ಗೆ ಹುಡುಗರನ್ನು ಕಳಿಸಲಾಗಿದೆ. ಪ್ರಕರಣ ಸಂಭಂದ ಪಟ್ಟಂತೇ ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಬೆಂಗಳೂರು: ಬಹುಮಹಡಿ ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು ಟೆಕ್ಕಿ ಸಾವು
ಬೆಂಗಳೂರು: ಬಹುಮಹಡಿ ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು ಟೆಕ್ಕಿ ಸಾವನ್ನಪ್ಪಿರುವ ಘಟನೆ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಸ್ಸಾಂ ಮೂಲದ ತ್ರಿದಿಪ್ ಕೊನ್ವರ್ (28) ಮೃತ ದುರ್ದೈವಿ. ಮೃತ ತ್ರಿದಿಪ್ ಕೊನ್ವರ್ ಬೆಳ್ಳಂದೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಟೆಕ್ಕಿ ತ್ರಿದಿಪ್ ಕೊನ್ವರ್ ಶೋಭಾ ಡಾಲಿಯಾ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು.
ಇಂದು (ಆಗಸ್ಟ್ 13) ಬೆಳಗ್ಗೆ 3 ಗಂಟೆ ಸುಮಾರಿಗೆ ಹತ್ತನೇ ಮಹಡಿಯ ಟೆರಸ್ಗೆ ಹೋಗಿದ್ದಾರೆ. ಈ ವೇಳೆ ಟೆರೆಸ್ ಮೇಲಿಂದ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ಳಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಟಿಪ್ಪರ್ ಲಾರಿ,ಬೈಕ್ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತ
ನೆಲಮಂಗಲ: ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತವಾಗಿದೆ. ಬೆಂಗಳೂರು ಉತ್ತರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ಮಾಕಳಿ ಬಳಿ ಈ ದುರ್ಘಟನೆ ನಡೆದಿದೆ. ಬೆಂಗಳೂರಿನ RT ನಗರ ನಿವಾಸಿ ಅಂಜನಿ ಶಾಂತ (50) ಮೃತ ಮಹಿಳೆ. ಅಪಘಾತದಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ನೆಲಮಂಗಲದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 5:40 pm, Sat, 13 August 22