ತಿಂದ ಮನೆಗೆ ಕನ್ನ ಹಾಕಿದ್ದ ಖದೀಮರು ಕೊನೆಗೂ ಅಂದರ್: ಶ್ರೀಮಂತರಾಗಲು ಹೀಗಾ ಮಾಡೋದು

ಮಾಲೀಕನನ್ನೇ ಯಾಮಾರಿಸಿ ಬೊಮ್ಮಸಂದ್ರ ಸಮೀಪದ ಯಾರಂಡಹಳ್ಳಿಯ ಕನ್ನಿಕಾನಗರದಲ್ಲಿರುವ ಆತನ ಮನೆಯಿಂದ 25 ಲಕ್ಷ ಹಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೋಲೀಸರು ಬಂಧಿಸಿದ್ದಾರೆ. ​

ತಿಂದ ಮನೆಗೆ ಕನ್ನ ಹಾಕಿದ್ದ ಖದೀಮರು ಕೊನೆಗೂ ಅಂದರ್: ಶ್ರೀಮಂತರಾಗಲು ಹೀಗಾ ಮಾಡೋದು
ಪ್ರಾತಿನಿಧಿಕ ಚಿತ್ರ
Edited By: ಕಿರಣ್ ಹನುಮಂತ್​ ಮಾದಾರ್

Updated on: Jul 23, 2023 | 1:15 PM

ಬೆಂಗಳೂರು ಗ್ರಾಮಾಂತರ, ಜು.23: ಮಾಲೀಕನನ್ನೇ ಯಾಮಾರಿಸಿ ಬೊಮ್ಮಸಂದ್ರ ಸಮೀಪದ ಯಾರಂಡಹಳ್ಳಿಯ ಕನ್ನಿಕಾನಗರದಲ್ಲಿರುವ ಆತನ ಮನೆಯಿಂದ 25 ಲಕ್ಷ ಹಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಆನೇಕಲ್(Anekal) ಉಪವಿಭಾಗದ ಹೆಬ್ಬಗೋಡಿ ಪೋಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದವರಾದ ಮಹೇಂದ್ರ ಸಿಂಗ್, ಜಗಮಲ್ ಸಿಂಗ್ ಬಂಧಿತ ಆರೋಪಿಗಳು. ಇವರು ಗುಟ್ಕಾ ವ್ಯಾಪಾರಿಯಾಗಿದ್ದ ಸರ್ವಣ್ ಭಾರತಿ ಎಂಬುವವರ ಬಳಿ ಕೆಲಸ ಮಾಡುತ್ತಿದ್ದು, ಅವರ ಮನೆಯ ಬಾಗಿಲನ್ನೇ ಮುರಿದು 25 ಲಕ್ಷ ಹಣವನ್ನ ಕದ್ದು ಎಸ್ಕೇಪ್ ಆಗಿದ್ದರು.

ಚೆನೈನಲ್ಲಿದ್ದ ಸ್ನೇಹಿತ ಜಗಮಲ್ ಸಿಂಗ್ ಜೊತೆ ಸೇರಿ ಸ್ಕೇಚ್

ಹೌದು ಗುಟ್ಕಾ ಮಾರಾಟ ಮಾಲೀಕ ಸರ್ವಣ್​​ಗೆ ಹಣ ಬಂದಿರುವುದನ್ನ ತಿಳಿದಿದ್ದ ಮಹೇಂದ್ರ ಸಿಂಗ್, ಚೆನೈನಲ್ಲಿದ್ದ ತನ್ನ ಸ್ನೇಹಿತ ಜಗಮಲ್ ಸಿಂಗ್ ಜೊತೆ ಸೇರಿ ಸ್ಕೇಚ್ ಹಾಕಿ, ಬರೊಬ್ಬರಿ 25 ಲಕ್ಷ ಹಣ ಕಳ್ಳತನ ಮಾಡಿದ್ದರು. ಬಳಿಕ ಜಗಮಲ್ ಸಿಂಗ್ ಆ ಹಣವನ್ನ ತೆಗೆದುಕೊಂಡು ಹೋಗಿದ್ದ. ಅದರಂತೆಯೇ ಜು.19 ನೇ ತಾರೀಖಿನಂದು ಲೋಡ್ ಇಳಿಸಿ ಬರಲು ಹೋಗಿದ್ದ ಸರ್ವಣ್​ಗೆ ಕಳ್ಳತನವಾಗಿರುವುದ ಬೆಳಕಿಗೆ ಬಂದಿದೆ. ಕೂಡಲೇ ಮನೆಯಲ್ಲಿದ್ದ ಹಣ ಕಳ್ಳತನವಾಗಿರುವ ಬಗ್ಗೆ ಹೆಬ್ಬಗೋಡಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಬಳಿಕ ಸರ್ವಣ್ ಬಳಿ ಕೆಲಸ ಮಾಡುತ್ತಿದ್ದ ಮಹೇಂದ್ರ ಸಿಂಗ್​ನನ್ನು ಕರೆತಂದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಹೆಬ್ಬಗೋಡಿ ಪೋಲೀಸರು ಯಶಸ್ಸಿಯಾಗಿದ್ದಾರೆ.

ಇದನ್ನೂ ಓದಿ:10ನೇ ವಯಸ್ಸಿಗೆ ಕಳ್ಳತನಕ್ಕೆ ಎಂಟ್ರಿ; ಐಷಾರಾಮಿ ಜೀವನಕ್ಕೆ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಖದೀಮ ಅರೆಸ್ಟ್​

ಘಟನೆ ಕುರಿತು ಮಾತನಾಡಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ‘ ಹೆಬ್ಬುಗೋಡಿ ಯಾರಂಡಹಳ್ಳಿ ಗುಟುಕ ದಾಸ್ತಾನಿನ ಮಾಲೀಕನ ಮನೆಯಲ್ಲಿ ವ್ಯವಹಾರದಿಂದ ಬಂದ ಕಲೆಕ್ಷನ್ ದುಡ್ಡು ಕಳ್ಳತನವಾಗಿತ್ತು. ಅದೇ ಅಂಗಡಿಯಲ್ಲಿ ಕೆಲಸ ಮಾಡುತಿದ್ದ ಮಹೇಂದ್ರ ಸಿಂಗ್ ಎಂಬಾತನ ಮೇಲೆ ಅನುಮಾನ ಮೂಡಿತ್ತು. ಬಳಿಕ ರಾಜಸ್ಥಾನ ಮೂಲದ ಆತನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಯಿತು. ಈ ವೇಳೆ ಆತ ನಡೆಸಿದ ಕೃತ್ಯ ಬಯಲಿಗೆ ಬಂದಿದೆ. ಚೆನ್ನೈನಲ್ಲಿರುವ ತನ್ನ ಸಂಬಂಧಿ ಜಗಮಲ್ ಸಿಂಗ ಜೊತೆಗೂಡಿ ಕಳ್ಳತನ ಮಾಡಲಾಗಿದೆ.
ಇದೀಗ ಬಂಧಿತರಿಂದ 19 ಲಕ್ಷ ಹಣ ರಿಕವರಿ ಮಾಡಲಾಗಿದೆ. ಮಾಡಿದ ಸಾಲ ಹಾಗೂ ಹಾಗೂ ಧಿಡೀರ್ ಶ್ರೀಮಂತಿಕೆಯ ಆಸೆಯಿಂದ ಕೃತ್ಯ ಎಸಗಿದ್ದಾರೆ ಎಂದರು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us