10ನೇ ವಯಸ್ಸಿಗೆ ಕಳ್ಳತನಕ್ಕೆ ಎಂಟ್ರಿ; ಐಷಾರಾಮಿ ಜೀವನಕ್ಕೆ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಖದೀಮ ಅರೆಸ್ಟ್
ಹತ್ತನೇ ವಯಸ್ಸಿಗೆ ಕಳ್ಳತನಕ್ಕೆ ಎಂಟ್ರಿ ಕೊಟ್ಟ ಖದೀಮನೊಬ್ಬ, ಐಷಾರಾಮಿ ಜೀವನಕ್ಕಾಗಿ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ. ಇದೀಗ ಆತನನ್ನ ಬಂಧಿಸಲಾಗಿದೆ. ರಫೀಕ್ (29) ಬಂಧಿತ ಆರೋಪಿ.
ತುಮಕೂರು: ಹತ್ತನೇ ವಯಸ್ಸಿಗೆ ಕಳ್ಳತನಕ್ಕೆ ಎಂಟ್ರಿ ಕೊಟ್ಟ ಖದೀಮನೊಬ್ಬ, ಐಷಾರಾಮಿ ಜೀವನಕ್ಕಾಗಿ ಕಳ್ಳತನ (Theft)ವನ್ನೇ ವೃತ್ತಿ ಮಾಡಿಕೊಂಡಿದ್ದ. ಇದೀಗ ಆತನನ್ನ ಬಂಧಿಸಲಾಗಿದೆ. ರಫೀಕ್ (29) ಬಂಧಿತ ಆರೋಪಿ. ಮೂಲತಃ ತುಮಕೂರು(Tumakuru) ಮೂಲದವನಾದ ಇತ, ಕಳೆದ ಒಂದು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದನು. ಜೈಲಿಗೆ ಹೋದರೂ ಬುದ್ದಿ ಕಲಿಯದ ರಫೀಕ್, ಮತ್ತೆ ತನ್ನ ಹಳೆ ಚಾಳಿಯನ್ನ ಮುಂದುವರೆಸಿದ್ದ. ಹೌದು ನೆಲಮಂಗಲ ಹಾಗೂ ರಾಜಾಜಿನಗರದಲ್ಲಿ ಕಳ್ಳತನ ಮಾಡಿದ್ದ ಇತನನ್ನ ಇದೀಗ ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಬರೊಬ್ಬರಿ 20 ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿ
ಇನ್ನು ಇತ ಬರೊಬ್ಬರಿ 20 ಪ್ರಕರಣಗಳಲ್ಲಿ ಜೈಲು ಸೇರಿದ್ದ. ಬೀಗ ಹಾಕಿದ ಮನೆ, ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಒಂದು ಅಂಗಡಿ ಕಳ್ಳತನ ಪ್ರಕರಣ ಕುರಿತು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆ ವೇಳೆ ಆರೋಪಿ ರಫೀಕ್ ಸಿಕ್ಕಿಬಿದ್ದಿದ್ದಾನೆ. ಇನ್ನು ವಿಚಾರಣೆ ವೇಳೆ ನೆಲಮಂಗಲದ ಮೀನಿನ ಟೆಂಡರ್ ಮಾಡುವ ವ್ಯಕ್ತಿ ಮನೆಯ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಎರಡು ಪ್ರಕರಣ ಸಂಬಂಧ ಇತನಿಂದ22 ಲಕ್ಷ ಮೌಲ್ಯದ 409 ಗ್ರಾಂ ಚಿನ್ನ, ಹಾಗೂ 425 ಗ್ರಾಂ ಬೆಳ್ಳಿ, 189 ಗ್ರಾಂ ನಕಲಿ ಚಿನ್ನವನ್ನ ವಶಕ್ಕೆ ಪಡೆಯಲಾಗಿದೆ.
ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ಆರೋಪಿ
ಇನ್ನು ಆರೋಪಿ ರಫೀಕ್ ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದು, ಬೆಂಗಳೂರು ಸೇರಿದಂತೆ ಹಲವು ಕಡೆ ಕಳ್ಳತನ ಕೃತ್ಯವೆಸಗಿದ್ದಾನೆ. ಕಳೆದ ತಿಂಗಳಷ್ಟೇ ಜೈಲಿನಿಂದ ಹೊರಬಂದಿದ್ದ ಇತ. ಮತ್ತೇ ಕಳ್ಳತನ ಕೃತ್ಯ ಎಸಗಿ ರಾಜಾಜಿನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನ ಬಂಧಿಸಿ ತನಿಖೆ ನಡೆಸುತ್ತಿರುವ ರಾಜಾಜಿನಗರ ಪೊಲೀಸರು, ಇತನಿಂದ ಇನ್ನಷ್ಟು ಕಳ್ಳತನ ಪ್ರಕರಣಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ