ದುಬಾರಿ ದುನಿಯಾ; ಆಗಸ್ಟ್ನಿಂದ ಹೋಟೆಲ್ ತಿಂಡಿ ಊಟದ ದರ ಶೇ 10ರಷ್ಟು ಹೆಚ್ಚಳಕ್ಕೆ ತೀರ್ಮಾನ
ಹೋಟೆಲ್ ತಿಂಡಿ ಬೆಲೆಯನ್ನ ಶೇಕಡಾ 10 ರಷ್ಟು ದರ ಏರಿಕೆಗೆ ಚಿಂತನೆ ನಡೆದಿದೆ. ಆಗಸ್ಟ್ ಒಂದರಿಂದ ಈ ದರ ಜಾರಿಗೆ ಬರಲಿದ್ದು, ಯಾವ ತಿಂಡಿಗೆ ಎಷ್ಟು ದರ ನಿಗದಿ ಮಾಡಬೇಕು ಎನ್ನುವ ಕುರಿತಾಗಿ ಇದೇ ಮಂಗಳವಾರ ಹೊಟೇಲ್ ಮಾಲೀಕರ ಅಸೋಸಿಯೇಷನ್ ಇಂದ ಸಭೆ ಕರೆಯಲಾಗಿದೆ.
ಬೆಂಗಳೂರು, ಜುಲೈ 23: ದಿನಸಿ, ತರಕಾರ, ಹಾಲಿನ ದರ ಏರಿಕೆ ನಿರ್ಧಾರದ ಬೆನ್ನಲ್ಲೇ ಹೋಟೆಲ್ ಮಾಲೀಕರು ಕೂಡ ತಿಂಡಿ, ಊಟದ ದರ ಏರಿಕೆ ಮಾಡಲು ಸಜ್ಜಾಗಿದ್ದಾರೆ(Hotel Food Price Increase). ಸಧ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗಿದ್ದು, ಹೋಟೆಲ್ ತಿಂಡಿಗಳ ಬೆಲೆಯನ್ನ ಶೇಕಡಾ 10 ರಷ್ಟು ದರ ಏರಿಕೆ ಮಾಡಲು ಹೊಟೇಲ್ ಮಾಲೀಕರ ಅಸೋಸಿಯೇಷನ್ ಚಿಂತನೆ ನಡೆಸಿದೆ. ಇನ್ನು ಮಂಗಳವಾರ ನಡೆಯಲಿರುವ ಹೋಟೆಲ್ ಮಾಲೀಕರ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ. ಹೀಗಾಗಿ ಇನ್ಮುಂದೆ ಸಾಮಾನ್ಯ ಜನರ ಬದುಕು ಫುಲ್ ದುಬಾರಿಯಾಗಲಿದೆ.
ಈಗಾಗಲೇ ಟೆಮೆಟೊ ದರ ಶತಕ ಬಾರಿಸಿದೆ. ದಿನಸಿ ಪಾದಾರ್ಥ ಬೆಲೆ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ. ಇದರ ನಡುವೆ ಈಗ ಹೊಟೇಲ್ ಮಾಲೀಕರು ಗ್ರಾಹಕರಿಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಹೋಟೆಲ್ ತಿಂಡಿ ಬೆಲೆಯನ್ನ ಶೇಕಡಾ 10 ರಷ್ಟು ದರ ಏರಿಕೆಗೆ ಚಿಂತನೆ ನಡೆದಿದೆ. ಸಧ್ಯ ಕಾಫಿ ಪೌಡರ್ ಕೆಜಿಗೆ 80 ರೂ ಆಗಿದೆ. ಒಂದು ಲೀಟರ್ ಹಾಲು 42 ರೂಪಾಯಿ ಇದೆ. ಹೀಗಾಗಿ ಕಾಫಿ ಹಾಗೂ ಟೀ ಬೆಲೆಯನ್ನ 3. ರೂ ಏರಿಸಲು ಹಾಗೂ ತಿಂಡಿ ತಿನಿಸುಗಳ ದರ 5 ಹಾಗೂ ಊಟದ ದರ 10 ರೂಪಾಯಿ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದಾರೆ.
ಇನ್ನು ಆಗಸ್ಟ್ ಒಂದರಿಂದ ಈ ದರ ಜಾರಿಗೆ ಬರಲಿದ್ದು, ಯಾವ ತಿಂಡಿಗೆ ಎಷ್ಟು ದರ ನಿಗದಿ ಮಾಡಬೇಕು ಎನ್ನುವ ಕುರಿತಾಗಿ ಇದೇ ಮಂಗಳವಾರ ಹೊಟೇಲ್ ಮಾಲೀಕರ ಅಸೋಸಿಯೇಷನ್ ಇಂದ ಸಭೆ ಕರೆಯಲಾಗಿದೆ. ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸದಸ್ಯರುಗಳು ಇರಲಿದ್ದು, ಯಾವ ತಿಂಡಿಗೆ ಎಷ್ಟು ಬೆಲೆ ನಿಗದಿ ಮಾಡಬೇಕು ಎನ್ನುವುದು ನಿರ್ಧಾರವಾಗಲಿದೆ. ಇನ್ನು ಈಗಾಗಲೇ ಕೆಲ ಹೋಟೆಲ್ಗಳು 20 ಪರ್ಸೆಂಟ್ ದರ ಏರಿಕೆಗೆ ನಿರ್ಧಾರ ಮಾಡಿದ್ದು, ಗೊಂದಲಕ್ಕೆ ಈಡಾಗದಂತೆ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಹೊಟೇಲ್ ಮಾಲೀಕರ ಸಂಘ ಬರುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರ ಜೇಬು ಇನ್ಮುಂದೆ ಫುಲ್ ಖಾಲಿಯಾಗಲಿದೆ.
ಇದನ್ನೂ ಓದಿ: Tomato: ಕರ್ನಾಟಕದಲ್ಲಿ ಟೊಮ್ಯಾಟೊ ಬೆಲೆ ಏರಿಕೆ ಕಾರಣವೇನು ? ಇಲ್ಲಿದೆ ಮಾಹಿತಿ
ಬೆಲೆ ಏರಿಕೆ ಮಾಡುವುದಕ್ಕೆ ನಮಗೆ ಇಷ್ಟವಿಲ್ಲ, ಆದ್ರೂ ಮಾಡಲೇಬೇಕು
ಹೋಟೆಲ್ ಅಸೋಸಿಯೇಷನ್ ಸೆಕ್ರೆಟರಿ ವಿರೇಂದ್ರ ಕಾಮಾತ್ ಮಾತನಾಡಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ದಿನಸಿ ಪದಾರ್ಥಗಳು ಹಾಗೂ ತರಕಾರಿ ಬೆಲೆಯು ಜಾಸ್ತಿಯಾಗಿದೆ. ಈ ಬೆಲೆಯಲ್ಲಿ ಹೋಟೆಲ್ಗಳನ್ನ ನಡೆಸೋದು ಕಷ್ಟ. ಹೀಗಾಗಿ ಗ್ರಾಹಕರಿಗೆ ಹೊರೆಯಾಗದ ರೀತಿ ಬೆಲೆ ಏರಿಕೆ ಮಾಡ್ತೀವಿ. ಸಧ್ಯ 10% ರಷ್ಟು ಬೆಲೆ ಏರಿಕೆಯಾಗಲಿದೆ. ಮಂಗಳವಾರ ಹೋಟೆಲ್ ಮಾಲೀಕರೊಂದಿಗೆ ಸಭೆ ಕರೆದಿದ್ದೀವಿ. ಆ ಸಭೆಯಲ್ಲಿ ಬೆಲೆ ಏರಿಕೆಯ ಕುರಿತು ನಿರ್ಧಾರವಾಗಲಿದೆ. ಗ್ರಾಹಕರು ಹಾಗೂ ಹೋಟೆಲ್ ಮಾಲೀಕರ ಸಮಸ್ಯೆಗಳನ್ನ ಗಮನದಲ್ಲಿಟ್ಟುಕೊಂಡು ಏರಿಕೆ ಮಾಡ್ತಿವಿ. ನಷ್ಟದಲ್ಲಿ ಹೋಟೆಲ್ಗಳನ್ನ ನಡೆಸುವುದಕ್ಕೆ ಆಗೋದಿಲ್ಲ. ಬೆಲೆ ಏರಿಕೆ ಅನಿವಾರ್ಯವಾಗಿದೆ. ವಿದ್ಯುತ್ ಬೆಲೆಯು ನಮಗೆ ನುಂಗಲಾರದ ತುತ್ತಾಗಿದೆ. ಬೆಲೆ ಏರಿಕೆ ಮಾಡುವುದಕ್ಕೆ ನಮಗೆ ಇಷ್ಟವಿಲ್ಲ. ಆದ್ರೆ ಹೋಟೆಲ್ ನಡೆಸಬೇಕು ಅಂದ್ರೆ ಬೆಲೆ ಏರಿಕೆ ನಡೆಸಲೇಬೇಕು ಎಂದರು.
ಇನ್ನು ಈ ಬಗ್ಗೆ ಹೋಟೆಲ್ ಮಾಲೀಕರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಬೆಲೆ ಏರಿಕೆ ಅನಿವಾರ್ಯವಾಗಿದೆ. ತರಕಾರಿ, ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಈ ಮಧ್ಯೆ ಹಾಲಿನ ಬೆಲೆಯು ಏರಿಕೆಯಾಗ್ತಿದೆ. ಹೀಗಾಗಿ ಬೆಲೆ ಏರಿಕೆಯನ್ನ ಮಾಡಲೇ ಬೇಕಾಗಿದೆ. ಹೋಟೆಲ್ಗಳನ್ನ ನಡೆಸೋದು ಇತ್ತೀಚಿಗೆ ಸವಾಲಾಗಿದೆ. ಹೀಗಾಗಿ ಅಸೋಸಿಯೇಷನ್ ಗೆ ಬೆಲೆ ಏರಿಕೆ ಕುರಿತಾಗಿ ನಾವು ಸಲಹೆ ಕೊಟ್ಟಿದ್ವಿ. ಗ್ರಾಹಕರಿಗೆ ಹೊರೆಯಾಗಂತೆ 10% ರಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಆಗಸ್ಟ್ ಒಂದರಿಂದಲೇ ಹೊಸ ದರ ನಿಗದಿಯಾಗಲಿದೆ ಎಂದು ತಿಳಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ