Doddaballapura: ದೇವಾಲಯಕ್ಕೆ ಮಾಂಸದ ಹಾರ ತಂದುಕೊಟ್ಟ ಕಿಡಿಗೇಡಿಗಳು, ಗರ್ಭಗುಡಿ ಸೇರುವ ಮುನ್ನವೇ ಬಯಲಿಗೆ ಬಂತು ಹಾರದ ಅಸಲಿಯತ್ತು

|

Updated on: Feb 22, 2023 | 10:08 AM

ದೇವಾಲಯಕ್ಕೆ ಬಂದ ಕಿಡಿಗೇಡಿಗಳು, ದೇವರಿಗೆ ಹಾರ ಹಾಕಿ ಎಂದು ಪ್ಲಾಸ್ಟಿಕ್ ಪೇಪರ್​ ಒಳಗೊಂಡ ಹಾರದಲ್ಲಿ ಮಾಂಸದ ತುಂಡು ಇಟ್ಟು ಸಿಬ್ಬಂದಿಗೆ ನೀಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯ ಇತಿಹಾಸ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನದಲ್ಲಿ ನಡೆದಿದೆ.

Doddaballapura: ದೇವಾಲಯಕ್ಕೆ ಮಾಂಸದ ಹಾರ ತಂದುಕೊಟ್ಟ ಕಿಡಿಗೇಡಿಗಳು, ಗರ್ಭಗುಡಿ ಸೇರುವ ಮುನ್ನವೇ ಬಯಲಿಗೆ ಬಂತು ಹಾರದ ಅಸಲಿಯತ್ತು
ಶನಿಮಹಾತ್ಮ ದೇವಸ್ಥಾನ (ಎಡಚಿತ್ರ) ಕೃತ್ಯ ಎಸಗಿದ ಕಿಡಿಗೇಡಿಗಳು (ಬಲಚಿತ್ರ)
Follow us on

ದೊಡ್ಡಬಳ್ಳಾಪುರ: ದೇವಾಲಯಕ್ಕೆ ಬಂದ ಕಿಡಿಗೇಡಿಗಳು, ದೇವರಿಗೆ ಹಾರ ಹಾಕಿ ಎಂದು ಪ್ಲಾಸ್ಟಿಕ್ ಪೇಪರ್ (Plastic Paper)​ ಒಳಗೊಂಡ ಹಾರದಲ್ಲಿ (Flower Necklace) ಮಾಂಸದ ತುಂಡು (Meat) ಇಟ್ಟು ಸಿಬ್ಬಂದಿಗೆ ನೀಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bengaluru Rural) ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಕನಸವಾಡಿಯ ಇತಿಹಾಸ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನದಲ್ಲಿ (Shanimatma Temple) ನಡೆದಿದೆ. ದೇವಾಲಯಕ್ಕೆ‌‌ ಬಂದ ಇಬ್ಬರು ಅಪರಿಚಿತ ಯುವಕರಿಂದ ಕೃತ್ಯ ನಡೆದಿದೆ. ಕಿಡಿಗೇಡಿಗಳ ವಿರುದ್ಧ ದೊಡ್ಡಬೆಳವಂಗಲ‌ ಪೊಲೀಸ್ ಠಾಣೆಗೆ ದೇವಾಲಯದ ಸಿಬ್ಬಂದಿ ದೂರು ನೀಡಿದ್ದಾರೆ.

ಕನಸವಾಡಿಯ ಇತಿಹಾಸ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನಕ್ಕೆ ಇಬ್ಬರು ಯುವಕರು ಬಂದಿದ್ದಾರೆ. ದೇವರಿಗೆ ಹಾಕಿ ಎಂದು ಹೂವಿನ ಹಾರದ ಮಧ್ಯೆ ಬರುವ ಪ್ಲಾಸ್ಟಿಕ್ ಪೇಪರ್ ಒಳಗಡೆ ಮಾಂಸವಿಟ್ಟು ದೇವಸ್ಥಾನದ ಸಿಬ್ಬಂದಿಗೆ ನೀಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕವರ ತೆಗೆದುಕೊಂಡ ಸಿಬ್ಬಂದಿ, ದೇವರಿಗೆ ಹಾರ ಹಾಕಲೆಂದು ಗರ್ಭಗುಡಿಯೊಳಗೆ ಹೋಗವಾಗ, ಮಾಂಸದ ತುಂಡು ಹಾರದಿಂದ​ ಕೆಳಗೆ ಬಿದ್ದಿದೆ. ಕೂಡಲೇ ದೇವಸ್ಥಾನದ ಸಿಬ್ಬಂದಿ ಕವರ್​ ಹೊರಗೆ ಎಸೆದಿದ್ದಾರೆ.

ಇನ್ನು ಈ ಕೃತ್ಯಕ್ಕೆ ಕಾರಣರಾದ ಕಿಡಿಗೇಡಿಗಳು ದೇವಸ್ಥಾನಕ್ಕೆ ಬಂದು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ದೇವಾಲಯದ ಸಿಬ್ಬಂದಿ ದೊಡ್ಡಬೆಳವಂಗಲ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಆಡಳಿತ ಮಂಡಳಿ ದೇವಸ್ಥಾನದಲ್ಲಿ ಪೇಪರ್ ಒಳಗೊಂಡ ಹಾರಗಳನ್ನು ನಿಷೇಧಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:00 am, Wed, 22 February 23