ನೆಲಮಂಗಲ: ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆಯ ದೊಡ್ಡಬ್ಯಾಲಕೆರೆಯ ಬಳಿ ಡಾಬಾವೊಂದರ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ. ಡಿಸೆಂಬರ್ 24ರಂದು ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿದ್ದಾರೆ. ಡಾಬಾದ ಒಂದು ಹಾಲಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಇನ್ನು ಘಟನೆಯಲ್ಲಿ ಡಾಬಾ ಸಿಬ್ಬಂದಿ ಹಾಸನ ಮೂಲದ ಮನೋಜ್ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಡಿಸೆಂಬರ್ 24ರಂದು ರಾತ್ರಿ 10.30ಕ್ಕೆ ಡಾಬಾ ಕ್ಲೋಸ್ ಮಾಡಿದ್ದರು. ರಾತ್ರಿ 12 ಗಂಟೆ ಸಮಯದಲ್ಲಿ ಇಬ್ಬರು ಒಂದೇ ರೂಮ್ನಲ್ಲಿದ್ದರು. 12.40ಕ್ಕೆ ಹೊರಗಡೆಯಿಂದ ಜೋರಾಗಿ ಶಬ್ಧ ಮತ್ತು ಬೆಳಕು ಕಾಣಿಸಿದೆ. ಶಾರ್ಟ್ ಸರ್ಕೂಟ್ ಆಗಿರಬಹುದುದೆಂದು ತಿಳಿದು ಹೊರಗಡೆ ಬಂದಾಗ ಬೆಂಕಿ ಹೊತ್ತಿಕೊಂಡಿದೆ. ನಂತರ ಬಾಗಿಲನ್ನು ತೆರೆದಾಗ ವ್ಯಕ್ತಿಯೊಬ್ಬ ಏಕಾಏಕಿ ಪೆಟ್ರೋಲ್ ಎರಚಿದ್ದಾರೆ ಅಂತ ಹೇಳಲಾಗುತ್ತಿದೆ.
ದರೋಡೆ ಮಾಡಿದ್ದ ಗ್ಯಾಂಗ್ ಅರೆಸ್ಟ್
ಲಾಂಗ್ನಿಂದ ಏಳು ಜನರಿಗೆ ಹಲ್ಲೆ ಮಾಡಿ ದರೋಡೆ ಮಾಡಿದ್ದ ಅರೋಪಿಗಳನ್ನ ಅನ್ನಪೂರ್ಣೇಶ್ವರಿ ಪೊಲೀಸರು ಬಂಧಿಸಿದ್ದಾರೆ. ಗೌತಮ್, ಶ್ರೀಕಾಂತ್, ಹೇಮಂತ್, ಜ್ನಾನೇಶ್, ಅಶ್ವಥ್, ಪ್ರದೀಪ್, ನವೀನ್ ಬಂಧಿತ ಅರೋಪಿಗಳು. ಘಟನೆ ನಡೆದ ಎರಡು ಗಂಟೆ ಒಳಗೆ ಅರೋಪಿಗಳ ವಶಕ್ಕೆ ಪಡೆಯಲಾಗಿದೆ. ಏಳು ಜನರು ಗೋಡನ್ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆರೋಪಿಗಳು ನುಗ್ಗಿದ್ದರು. ಲಾಂಗ್ ಸಹಿತ ಬಂದು ಏಳು ಜನರ ಮೇಲೆ ದಾಳಿ ಮಾಡಿದ್ದರು. ಬಳಿಕ ಕೆಲಸ ಮಾಡ್ತಿದ್ದವರ ಬಳಿಯ ಮೊಬೈಲ್ ಹಾಗು 1 ಲಕ್ಷದ ಇಪ್ಪತ್ತೈದು ಸಾವಿರ ಹಣ ದೋಚಿದ್ದರು. ಸದ್ಯ ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಇದನ್ನೂ ಓದಿ
ಮಹಿಳೆ ಹುಟ್ಟಿನಿಂದಲೇ ಸಾಧಕಿ, ಕುಟುಂಬದ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಚಿಂತನೆ ಮಾಡುತ್ತಾಳೆ; ಸುಮಲತಾ ಅಂಬರೀಶ್
Bipul Sharma: ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರ
Published On - 11:31 am, Mon, 27 December 21