ಬೆಂಗಳೂರು: ಪತ್ನಿ ನಾಪತ್ತೆಯಾದ ಬೆನ್ನೆಲ್ಲೇ ಪತಿ ಫೇಸ್‌ಬುಕ್(Facebook) ಖಾತೆಯಲ್ಲಿ ಆರ್ಐಪಿ(RIP) ಎಂದು ಪೋಸ್ಟ್ ಮಾಡಿದ ಘಟನೆ ಬೆಂಗಳೂರು ನಗರದ ದೊಡ್ಡಬಳ್ಳಾಪುರ ತಾಲೂಕಿನ ಊದನಹಳ್ಳಿ ಬಳಿ ನಡೆದಿದೆ. ಲೀಲಾವತಿ(24) ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಹೀಗಾಗಿ ಪತಿ ಮುನಿಕೃಷ್ಣನೇ ಲೀಲಾವತಿಯನ್ನು ಕೊಂದಿದ್ದಾನೆಂದು ಪೋಷಕರು ಗಂಭೀರ ಆರೋಪ(Allegation) ಮಾಡಿದ್ದಾರೆ. ಸದ್ಯ ಈ ಸಂಬಂಧ ದೊಡ್ಡಬಳ್ಳಾಪುರ ಮಹಿಳಾ ಠಾಣೆಗೆ ಲೀಲಾವತಿ ಪೋಷಕರು ದೂರು ನೀಡಿದ್ದಾರೆ.
ಸಂಬಂಧಿಕರ ಮನೆಗೆ ಹುಟ್ಟು ಹಬ್ಬದ ಪಾರ್ಟಿಗೆ ಹೋಗಿದಕ್ಕೆ ಗಂಡ- ಹೆಂಡತಿ ನಡುವೆ ಜಗಳವಾಗಿದೆ. ಬೇಡ ಅಂದರು ಬರ್ತಡೆಗೆ ಹೋಗಿದ್ದಿಯಾ ಎಂದು ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಜಗಳದ ನಂತರ ಮನೆಯಲ್ಲಿದ್ದ ಪತ್ನಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಹೀಗಾಗಿ ಗಂಡನೆ ಕೊಲೆ ಮಾಡಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರಬಹುದು ಎಂದು ಗೃಹಿಣಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಈ ಬಗ್ಗೆ ಗಂಡ ಮುನಿಕೃಷ್ಣ ಸ್ಪಷ್ಟನೆ ಕೊಟ್ಟಿದ್ದು, ನಾನು ಆರ್ಐಪಿ ಪೋಸ್ಟ್ ಮಾಡಿಲ್ಲ ಪತ್ನಿಯೆ ಪೋಸ್ಟ್ ಮಾಡಿ ನಾಪತ್ತೆಯಾಗಿದ್ದಾಳೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಒಟ್ಟಾರೆ ಗಂಡ- ಹೆಂಡತಿ ಮತ್ತು ಪೇಸ್ಬುಕ್ ಪೋಸ್ಟ್ ಜಗಳ ಪೊಲೀಸರಿಗೆ ತಲೆನೋವಾಗಿದೆ. ಸದ್ಯ ನಾಪತ್ತೆಯಾಗಿರುವ ಗೃಹಿಣಿ ಲೀಲಾವತಿಗಾಗಿ ಪೊಲೀಸರು, ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾರೆ.
ಗಲಾಟೆ ವೇಳೆ ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಲೆಗೈದ ಪತಿ
ಗಲಾಟೆ ವೇಳೆ ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಪತಿ ಕೊಲೆಗೈದ ಘಟನೆ ಬೆಂಗಳೂರಿನ ಗೋವಿಂದಪುರದ ಭೈರಪ್ಪ ಲೇಔಟ್ನಲ್ಲಿ ನಡೆದಿದೆ. ಪತ್ನಿ ಆಯೇಷಾ ಬಾನು ತನ್ನನ್ನು ಸೇರುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಪತಿ, ಎಷ್ಟೇ ರಾಜಿ ಪಂಚಾಯತಿ ಮಾಡಿದ್ದರೂ ಸೇರದಿದ್ದಕ್ಕೆ ಕೊಲೆ ಮಾಡಿದ್ದಾನೆ. ಆರೋಪಿ ಮುಜಾಮಿಲ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಧರ್ಮಸ್ಥಳದ ಕನ್ಯಾಡಿ ಬಳಿ ದಿನೇಶ್ ಕೊಲೆ ಪ್ರಕರಣ; ಟಿವಿ9ಗೆ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯ ಲಭ್ಯ
Published On - 1:04 pm, Sat, 26 February 22