ಧರ್ಮಸ್ಥಳದ ಕನ್ಯಾಡಿ ಬಳಿ ದಿನೇಶ್ ಕೊಲೆ ಪ್ರಕರಣ; ಟಿವಿ9ಗೆ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯ ಲಭ್ಯ
ಭಜರಂಗದಳ ಸಹಸಂಚಾಲಕ ಭಾಸ್ಕರ್ ಧರ್ಮಸ್ಥಳ ಅವರ ತಮ್ಮ ಕೃಷ್ಣ ಹಲ್ಲೆ ಮಾಡಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ: ಜಿಲ್ಲೆಯ ಧರ್ಮಸ್ಥಳದ, ಬೆಳ್ತಂಗಡಿ ತಾಲೂಕು ಕನ್ಯಾಡಿ ಬಳಿ ಕ್ಷುಲ್ಲಕ ಕಾರಣಕ್ಕೆ ಹೊಟ್ಟೆಗೆ ಗುದ್ದಿ ದಿನೇಶ್ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿತ್ತು. ಫೆಬ್ರವರಿ 23 ರಂದು ದಿನೇಶ್ ಮೇಲೆ ಕಿಟ್ಟ ಅಲಿಯಾಸ್ ಕೃಷ್ಣ.ಡಿ. ಹಲ್ಲೆ ಮಾಡಿದ್ದ. ಚಿಕಿತ್ಸೆ(Treatment) ಫಲಿಸದೆ ನಿನ್ನೆ ದಿನೇಶ್ ಸಾವನ್ನಪ್ಪಿದ್ದಾನೆ(Death). ಭಜರಂಗದಳ ಸಹಸಂಚಾಲಕ ಭಾಸ್ಕರ್ ಧರ್ಮಸ್ಥಳ ಅವರ ತಮ್ಮ ಕೃಷ್ಣ ಹಲ್ಲೆ ಮಾಡಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಕೃಷ್ಣ, ದಿನೇಶ್ ಮೇಲೆ ಹಲ್ಲೆ ಮಾಡಿದ ಸಿಸಿಟಿವಿ(CCTV) ದೃಶ್ಯಾವಳಿಗಳು ಟಿವಿ9 ಡಿಜಿಟಲ್ಗೆ ಲಭ್ಯವಾಗಿದೆ.
ದಿನೇಶ್ ಕೊಲೆ ಪ್ರಕರಣ ಸಂಬಂಧ ಟ್ವೀಟ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ
ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ದಿನೇಶ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಕೊಲೆ ಆರೋಪಿ ಭಜರಂಗದಳದ ನಾಯಕನಾಗಿದ್ದಾನೆ. ದಲಿತ ಯುವಕ ದಿನೇಶ್ ಕೊಲೆ ಖಂಡನೀಯ. ಆದ್ದರಿಂದ ಮೃತನ ಕುಟುಂಬ ಆತಂಕಕ್ಕೀಡಾಗಿದೆ. ಪೊಲೀಸರು ರಾಜಕೀಯ ಪ್ರಭಾವಕ್ಕೆ ಮಣಿಯದೆ ಆರೋಪಿಯನ್ನು ಬಂಧಿಸಬೇಕು ಎಂದು ಟ್ವೀಟ್ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೂ ಟಾಂಗ್ ಕೊಟ್ಟ ಸಿದ್ದರಾಮಯ್ಯ
ಬಿಜೆಪಿ ಹಿಂದೂಗಳ ರಕ್ಷಣೆಯ ಮಂತ್ರ ಜಪಿಸುತ್ತಿದೆ. ದಲಿತ ಯುವಕನ ಹತ್ಯೆಕೋರನ ರಕ್ಷಣೆಗೆ ನಿಂತಿರೋದು ಆತ್ಮವಂಚನೆ ನಡವಳಿಕೆ. ಮುಖ್ಯಮಂತ್ರಿಗಳು ಸಾವಿನ ಮನೆಯಲ್ಲಿ ರಾಜಕೀಯ ಮಾಡಲು ಹೋಗದೆ ನ್ಯಾಯ ಒದಗಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೂ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.
ಸಿದ್ದರಾಮಯ್ಯ ಹೊರಟಿರೋದು ಗೂಗಲ್ ಗುರು ಹಿಂದೆ: ಅಭಿನವ ಹಾಲ ವೀರಪ್ಪ ಮಾಹಾಸ್ವಾಮಿ
ಸಿದ್ದರಾಮಯ್ಯ ಹರ್ಷನ ಮೇಲೆ ಕೇಸ್ ಇದೆ ಎಂದು ಹೇಳುತ್ತಾರೆ. ಇವರು ಗೂಗಲ್ ಗುರು ಹಿಂದೆ ಹೋಗಿ ಈ ಮಾತನ್ನ ಹೇಳಿದ್ದಾರೆ. ಈ ದೇಶದ ಸಂವಿಧಾನದ ಆಶಯ ಬಿಟ್ಟು, ಗೂಗಲ್ ಗುರು ಹಿಂದೆ ಸಿದ್ದರಾಮಯ್ಯ ಹೊರಟಿದ್ದಾರೆ. ಸಿದ್ದರಾಮಯ್ಯ ಎಷ್ಟು ಬುದ್ಧಿವಂತರು. ಸಿದ್ದರಾಮಯ್ಯ ಮಾತಿಂದ ಒಂದು ಸಾಂತ್ವನದ ಮಾತು ಬರಲಿಲ್ಲ. ಬಿಕೆ ಹರಿಪ್ರಸಾದ್ ನಾಲಾಯಕ್, ದುರ್ಲಜ್ಜ. ತನಿಖೆಗೆ ಮೊದಲೇ ಹೇಗೆ ಗೊತ್ತಾಗತ್ತದೆ ಅಂತಾ ಹರಿ ಪ್ರಸಾದ್ ಕೇಳುತ್ತಾರೆ. ತನ್ವೀರ್ ಸೇಠ್ ಬಿದಿ ಹೆಣ ಮಾಡುವುದಕ್ಕೆ ಹೊರಟೋರು ಬ್ರದರ್ಸ್. ಪರೋಕ್ಷವಾಗಿ ಒಂದು ಸಮುದಾಯದ ವಿರುದ್ಧ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಹಿರೇಹಡಗಲಿ ಅಭಿನವ ಹಾಲ ವೀರಪ್ಪ ಮಾಹಾಸ್ವಾಮಿ ಹೇಳಿಕೆ ನೀಡಿದ್ದಾರೆ.
ದಲಿತ ಹುಡಗನ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ಸ್ವಾಮೀಜಿ ಪ್ರತಿಕ್ರೀಯೆ
ನೀವು ಕೇಳಬೇಕಾಗಿರೋದು ನಿಜ. ಆದರೆ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿದಾಗ ಅವರ ಮನೆಗೆ ಯಾರು ಹೋಗಿದ್ರು. ಡಿಜೆ.ಕೆಜಿ ಹಳ್ಳಿಯಲ್ಲಿ ಗಲಾಟೆಯಾದ ಸಿದ್ದರಾಮಯ್ಯ ನಿಮ್ಮ ಸಂವಿಧಾನದ ಆಶಯ ಎಲ್ಲಿ ಹೋಗಿತ್ತು. ಸಿದ್ದರಾಮಯ್ಯ, ಡಿಕೆಶಿ ಬೈದಾಗ ನಮಗೆಲ್ಲ ಖುಷಿಯಾಗತ್ತದೆ. ಆದರೆ ನಮ್ಮನ್ನ ಆಳೋ ನಾಯಕರು ಷಂಡರಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಕೇಸರಿ ಶಾಲು ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳೇ, ನೀವು ಹಾಕಿರುವುದು ಒಂದೇ ಕೇಸ್. ಇದು ಈ ಸರ್ಕಾರದ ವೈಫಲ್ಯ. ನಿಮಗೆನಾದ್ರೂ ಖುಣ ಇದ್ರೆ, ಉತ್ತರ ಪ್ರದೇಶ ಮಾದರಿ ಒಳಗೆ ಸಮಾಜ ಘಾತಕ ಶಕ್ತಿಗಳಿಗೆ ಶಿಕ್ಷೆ ಕೊಡಬೇಕು. ನಾವು ಯಾರನ್ನ ನಂಬಿ, ನಾವು ಯಾರ ಜೊತೆ ನಿಂತು ಜೈಕಾರ ಹಾಕಿದ್ವೋ, ಅವರು ನಮ್ಮ ಜೊತೆ ಇಲ್ಲ. ಕೇಂದ್ರ, ರಾಜ್ಯದಲ್ಲೂ ಬಿಜೆಪಿ ಇದೆ. ಆದ್ರೆ ನಮ್ಮ ರಕ್ಷಣೆ ಯಾರೂ ಮಾಡಲ್ಲ ನಾವೇ ಮಾಡಕೊಳ್ಳಬೇಕು ಎಂದು ಹೇಳಿದ್ದಾರೆ.
ದಾವಣಗೆರೆ: ಜೀರಾ ಸೋಡಾದಲ್ಲಿ ಸೈನೆಡ್ ಹಾಕಿ ಕೊಲೆ; ವೈದ್ಯಕೀಯ ಪರೀಕ್ಷೆ ಬಳಿಕ ಸತ್ಯ ಬಯಲು
ಸೋಡಾದಲ್ಲಿ ಸೈನೈಡ್ ಹಾಕಿ ದರ್ಶನ ರಾಯ್ಕರ್ (27) ಕೊಲೆ ಮಾಡಿದ್ದ ಮಂಜುನಾಥ್ ಚಿತ್ರಗಾರ ಅಲಿಯಾಸ್ ಪಿಂಟು(30)ವನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿನ್ನದ ಆಭರಣ ಮಾಡುತ್ತಿದ್ದ ಆರೋಪಿ ಮಂಜುನಾಥ ಚಿತ್ರಗಾರನ ಬಳಿ ಆಭರಣ ಮಾಡಲು 110 ಗ್ರಾಂ ಗಟ್ಟಿ ಚಿನ್ನ ಕೊಟ್ಟಿದ್ದ ಕೊಲೆಯಾದ ದರ್ಶನ ರಾಯ್ಕರ್. ಹೀಗಾಗಿ ಆಭರಣ ಕೇಳಲುಮನೆ ಬಂದಾಗ ಜೀರಾ ಸೋಡಾ ಕುಡಿ ಆಭರಣ ತರುವೆ ಎಂದು ಮಂಜುನಾಥ ಹೊರಹೋಗಿದ್ದಾನೆ. ಜೀರಾ ಸೋಡಾ ಕುಡಿದ ರಾಯ್ಕರ್ ತೀವ್ರ ಅಸ್ವಸ್ಥನಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಿದರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ. ವೈದ್ಯಕೀಯ ಪರೀಕ್ಷೆ ಬಳಿಕ ಜೀರಾ ಸೋಡಾದಲ್ಲಿ ಸೈನಡ್ ಹಾಕಿ ಕೊಲೆ ಮಾಡಿದ್ದು ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ ಜಿಲ್ಲೆಯಲ್ಲಿ ಹೀನಾಯ ಕೃತ್ಯ: ಆ್ಯಸಿಡ್ ಕುಡಿಸಿ ರಾಡ್‌ನಿಂದ ಹೊಡೆದು ಅಕ್ಕಸಾಲಿಗನ ಕೊಲೆ
ಹರ್ಷ ಹುತಾತ್ಮನಾಗಿದ್ದಾನೆ, ಕೊಲೆ ಮಾಡಿದವರನ್ನು ಗುಂಡಿಟ್ಟು ಕೊಲ್ಲಬೇಕು ಎಂದರು ಬಿಜೆಪಿ ಶಾಸಕ ಹರತಾಳು ಹಾಲಪ್ಪ
Published On - 9:54 am, Sat, 26 February 22