ಮಂಗಳಮುಖಿಯರ ಜೊತೆ ಸಂಬಂಧ ಎಂದು ಸ್ನೇಹಿತನ ಮೇಲೆ ಮಚ್ಚಿನಿಂದ ಹಲ್ಲೆ; ಇಬ್ಬರನ್ನು ವಶಕ್ಕೆ ಪಡೆದ ಡಿ.ಜೆ.ಹಳ್ಳಿ ಪೊಲೀಸರು

ಸ್ಯಾಮುಯೆಲ್ ಮಂಗಳಮುಖಿಯರ ಜೊತೆ ಸುತ್ತಾಡುತ್ತಿದ್ದ ಹೀಗಾಗಿ ಕಳೆದ 4 ತಿಂಗಳಿನಿಂದ ಪ್ರವೀಣ್, ಸುರೇಶ್ ಇದೇ ವಿಚಾರವಾಗಿ ಆಗಾಗ ಕಿರಿಕ್ ಮಾಡುತ್ತಿದ್ದರು. ಇದರಿಂದ ಬೇಸತ್ತ ಸ್ಯಾಮುಯೆಲ್ ಪ್ರವೀಣ್, ಸುರೇಶ್ ಮೇಲೆ ಹಲ್ಲೆಗೆ ಲಾಂಗ್ ಹಿಡಿದು ಬಂದಿದ್ದ.

ಮಂಗಳಮುಖಿಯರ ಜೊತೆ ಸಂಬಂಧ ಎಂದು ಸ್ನೇಹಿತನ ಮೇಲೆ ಮಚ್ಚಿನಿಂದ ಹಲ್ಲೆ; ಇಬ್ಬರನ್ನು ವಶಕ್ಕೆ ಪಡೆದ ಡಿ.ಜೆ.ಹಳ್ಳಿ ಪೊಲೀಸರು
ಮಂಗಳಮುಖಿಯರ ಜೊತೆ ಸುತ್ತಾಡಿದ್ದ ಎಂದು ಸ್ನೇಹಿತನ ಮೇಲೆ ಮಚ್ಚಿನಿಂದ ಹಲ್ಲೆ; ಇಬ್ಬರನ್ನು ವಶಕ್ಕೆ ಪಡೆದ ಡಿ.ಜೆ.ಹಳ್ಳಿ ಪೊಲೀಸರು
Follow us
TV9 Web
| Updated By: ಆಯೇಷಾ ಬಾನು

Updated on:Feb 22, 2022 | 2:13 PM

ಬೆಂಗಳೂರು: ಮಂಗಳಮುಖಿಯರ(Transgender) ಜೊತೆ ಸುತ್ತಾಡಿದ್ದಕ್ಕೆ ಸ್ನೇಹಿತರು(Friends) ಕಿರಿಕ್ ನಡೆಸಿದ್ದು ಇದರಿಂದ ಬೇಸತ್ತು ಸ್ನೇಹಿತರ ಮೇಲೆ ಹಲ್ಲೆಗೆ ಮುಂದಾದವನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಡಿ.ಜೆ.ಹಳ್ಳಿ ವ್ಯಾಪ್ತಿ ತ್ರಿವಳಿ ಜಂಕ್ಷನ್‌ ಬಳಿ ನಡೆದಿದೆ. ಮದ್ಯದ ಅಮಲಿನಲ್ಲಿ ಲಾಂಗ್‌ನಿಂದ ಸ್ನೇಹಿತನ ಮೇಲೆ ಹಲ್ಲೆ ನಡೆಸಲಾಗಿದೆ. ಸ್ನೇಹಿತ ಸ್ಯಾಮುಯೆಲ್(23) ಮೇಲೆ ಪ್ರವೀಣ್(24), ಸುರೇಶ್‌ನಿಂದ(24) ಹಲ್ಲೆ ನಡೆದಿದೆ.

ಹಲ್ಲೆಗೊಳಗಾದ ಸ್ಯಾಮುಯೆಲ್​ಗೆ ಹಲವು ಮಂಗಳಮುಖಿಯರ ಜೊತೆ ಸಂಬಂಧ ಇತ್ತು. ಮದುವೆ ಆಗಿ ಎರಡು ಮೂರು ದಿನಕ್ಕೆ ಮತ್ತೋರ್ವ ಮಂಗಳಮುಖಿ ಬದಲಾಯಿಸುತ್ತಿದ್ದ. ಇದೇ ಮಾದರಿಯ ಕೆಲಸ ಮಾಡುತಿದ್ದ ಪ್ರವೀಣ ಕೂಡ. ಆದರೆ ಅದೊಂದು ಮಂಗಳಮುಖಿ ವಿಚಾರಕ್ಕಾಗಿ ಪ್ರವೀಣ ಸ್ಯಾಮುಯೆಲ್​ನ ವಿಡಿಯೋ ಮಾಡಿದ್ದ. ಸ್ಯಾಮುಯೆಲ್‌ನ ನಗ್ನ ವಿಡಿಯೋ ಚಿತ್ರಿಸಿಕೊಂಡಿದ್ದ ಪ್ರವೀಣ ಅದೇ ವಿಡಿಯೋ ಸ್ಯಾಮುಯೆಲ್‌ಗೆ ತೊರಿಸಿ ಬ್ಲ್ಯಾಕ್ ಮೇಲ್ ಮಾಡಿದ್ದ. ಇದೇ ವಿಚಾರವಾಗಿ ನಿನ್ನೆ ಚಾಕು ಹಿಡಿದು ಹಲ್ಲೆ ಮಾಡಲು ಬಂದಿದ್ದ ಸ್ಯಾಮುಯೆಲ್‌ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪ್ರವೀಣ್, ಸುರೇಶ್ ಇಬ್ಬರೂ ಸೇರಿ ಸ್ಯಾಮ್ಯುಯೆಲ್ ಹಣೆ, ತಲೆಯ ಹಿಂಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಗಾಯಾಳು ಸ್ಯಾಮುಯೆಲ್‌ಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹಲ್ಲೆಗೈದ ಪ್ರವೀಣ್, ಸುರೇಶ್‌ ಡಿ.ಜೆ.ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯನಗರ: ವಸಂತ ಎಂಬುವವರ ನವಜಾತ ಶಿಶು ಅಪಹರಣ ಆರೋಪಕ್ಕೆ ಸಂಬಂಧಿಸಿ ಸ್ವಾಮೀಜಿ ಸೇರಿದಂತೆ ಮೂವರ ವಿರುದ್ಧ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ನಿಚ್ಚವನಹಳ್ಳಿಯ ಹಾಲಸ್ವಾಮಿ ಮಠದ ಹಾಲಸ್ವಾಮಿ, ಕಂಚಿಕೇರಿಯ ಗುರುರಾಜ್, ಪ್ರಿಯಾಂಕಾ ವಿರುದ್ಧ ದೂರು ದಾಖಲಾಗಿದೆ. ಹರಪನಹಳ್ಳಿಯ ಖಾಸಗಿ ನರ್ಸಿಂಗ್ ಹೋಂ ಬಳಿ ಕಿಡ್ನ್ಯಾಪ್ ಆಗಿದ್ದು ದಾವಣಗೆರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಂದ್ರಶೇಖರ ದೂರು ಆಧರಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರಿನಲ್ಲಿ ಮರಕ್ಕೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಬೆಂಗಳೂರು: ದೀನದಯಾಳ್ ಉಪಾಧ್ಯಾಯ ಮೇಲ್ಸೇತುವೆಯ ಬಳಿ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸಿಪಿ ಕಚೇರಿಗೆ ಕೂಗಳತೆ ದೂರದಲ್ಲೇ ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಕೂಡ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಉಕ್ರೇನಿನ ಪ್ರತ್ಯೇಕವಾದಿ ಸಂಘರ್ಷವನ್ನು ಕೊನೆಗಾಣಿಸಲು ಯಾವುದೇ ಶಾಂತಿ-ಸಂಧಾನ ಯಶಕಾಣದು: ವ್ಲಾದಿಮಿರ್ ಪುಟಿನ್

Gold and Silver Price: ಆಭರಣ ಖರೀದಿಗೂ ಮುನ್ನ ದರ ವಿವರ ಪರಿಶೀಲಿಸಿ; ಇಲ್ಲಿದೆ ಇಂದಿನ ಚಿನ್ನ, ಬೆಳ್ಳಿ ಬೆಲೆ

Published On - 7:32 am, Tue, 22 February 22

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ