ಹರ್ಷ ಹುತಾತ್ಮನಾಗಿದ್ದಾನೆ, ಕೊಲೆ ಮಾಡಿದವರನ್ನು ಗುಂಡಿಟ್ಟು ಕೊಲ್ಲಬೇಕು ಎಂದರು ಬಿಜೆಪಿ ಶಾಸಕ ಹರತಾಳು ಹಾಲಪ್ಪ
ಗುಂಡಿಟ್ಟು ಕೊಲ್ಲಬೇಕೆಂದು ಹಾಲಪ್ಪ 4-5 ಸಲ ಹೇಳುತ್ತಾರೆ. ಅವರನ್ನು ಕೊಲ್ಲದಿದ್ದರೆ ಹರ್ಷನ ಸಾವಿಗೆ ನ್ಯಾಯ ಸಿಗುವುದಿಲ್ಲ, ಅವನನ್ನು ಕೊಂದವರು ಬೆಲೆ ತೆರಲೇಬೇಕು. ತಪ್ಪಿತಸ್ಥರನ್ನು ಮುಗಿಸದೆ ಹೋದರೆ ಇಂಥ ಕೃತ್ಯಗಳು ನಿಯಂತ್ರಣಕ್ಕೆ ಬರೋದಿಲ್ಲ ಅಂತ ಅವರು ಹೇಳುತ್ತಾರೆ.
ಬಜರಂಗದಳದ (Bajrang Dal) ಕಾರ್ಯಕರ್ತ ಹರ್ಷನ ಕೊಲೆ ನಡೆದು 5 ದಿನ ಕಳೆದಿವೆ. ರಾಜ್ಯದೆಲ್ಲೆಡೆ ಈಗಲೂ ಪ್ರಕ್ಷುಬ್ಧ ಸ್ಥಿತಿ ಇದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ತಮ್ಮ ತಮ್ಮ ಶಾಸಕರಿಗೆ ಹರ್ಷನ ಕೊಲೆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಬಾರದೆಂದು ನಿರ್ದೇಶಿಸುವ ಕೆಲಸವನ್ನು ಮೊದಲು ಮಾಡಬೇಕಿದೆ. ಯಾಕೆ ಅಂತ ನಿಮಗೆ ಗೊತ್ತಿದೆ. ಇವರೆಲ್ಲ ತಮ್ಮ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ತಾವೇ ಕೋರ್ಟು ಅನ್ನುವ ರೀತಿಯಲ್ಲಿ ಮಾತಾಡುತ್ತಿದ್ದಾರೆ. ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅವರು ಹರ್ಷ ಹುತಾತ್ಮನಾಗಿದ್ದಾನೆ, ಅವನ ಸಾವು ವ್ಯರ್ಥ ಹೋಗಬಾರದು, ತಪ್ಪಿತಸ್ಥರನ್ನು ಪೊಲೀಸರು ಗುಂಡಿಟ್ಟು ಕೊಲ್ಲಬೇಕು ಅಂತ ಹೇಳುತ್ತಾರೆ.
ಅವರನ್ನು ಗುಂಡಿಟ್ಟು ಕೊಲ್ಲದಿದ್ದರೆ ಎಲ್ಲ ಅನರ್ಥ ಆಗುತ್ತದೆ. ಕೊಲೆಗಡುಕರನ್ನು ಬಂಧಿಸಿ ಜೈಲಿಗೆ ಹಾಕುತ್ತಾರೆ, ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತದೆ, ಸೂಕ್ತ ಸಾಕ್ಷ್ಯಾಧಾರ ಇಲ್ಲ ಅಂತ ಅವರಿಗೆ ಜಾಮೀನು ಸಿಗುತ್ತದೆ. ಹಾಗಾಗಲು ಬಿಡಬಾರದು. ಅವರನ್ನು ಗುಂಡಿಟ್ಟು ಕೊಲ್ಲುವುದೊಂದೇ ಸರಿಯಾದ ಮಾರ್ಗ ಅಂತ ಹಾಲಪ್ಪ ಹೇಳಿದರು.
ಗುಂಡಿಟ್ಟು ಕೊಲ್ಲಬೇಕೆಂದು ಹಾಲಪ್ಪ 4-5 ಸಲ ಹೇಳುತ್ತಾರೆ. ಅವರನ್ನು ಕೊಲ್ಲದಿದ್ದರೆ ಹರ್ಷನ ಸಾವಿಗೆ ನ್ಯಾಯ ಸಿಗುವುದಿಲ್ಲ, ಅವನನ್ನು ಕೊಂದವರು ಬೆಲೆ ತೆರಲೇಬೇಕು. ತಪ್ಪಿತಸ್ಥರನ್ನು ಮುಗಿಸದೆ ಹೋದರೆ ಇಂಥ ಕೃತ್ಯಗಳು ನಿಯಂತ್ರಣಕ್ಕೆ ಬರೋದಿಲ್ಲ ಅಂತ ಅವರು ಹೇಳುತ್ತಾರೆ.
ಅದಕ್ಕೆ ನಾವು ಹೇಳಿದ್ದು, ಶಾಸಕರು ಮತ್ತು ಪಕ್ಷಗಳ ಇತರ ಸಣ್ಣಪುಟ್ಟ ನಾಯಕರು ಕೋರ್ಟ್ಗಳಾಗುವುದು ಬೇಡ. ವರಿಷ್ಠರು ಅವರನ್ನು ತಡೆಯಲೇ ಬೇಕಾಗಿದೆ