AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 7 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೀದಿ ನಾಯಿಗೆ ಆರತಿ ಎತ್ತಿ ಸ್ವಾಗತ!; ನೀವೂ ಈ ವಿಡಿಯೋ ಕಣ್ತುಂಬಿಕೊಳ್ಳಿ

ಮುಂಬೈನ ಪ್ರಭಾದೇವಿಯ ಸೊಸೈಟಿಯ ಬೀದಿಯಲ್ಲಿ ವಾಸವಾಗಿದ್ದ ವಿಸ್ಕಿ ಎಂಬ ಹೆಸರಿನ ಬೀದಿ ನಾಯಿ ನಾಪತ್ತೆಯಾಗಿತ್ತು. ಆ ನಾಯಿಗಾಗಿ 1 ವಾರ ಹುಡುಕಾಡಿದ ಜನರು ಕೊನೆಗೂ ಅದನ್ನು ಪತ್ತೆಹಚ್ಚಿ ಕರೆತಂದಿದ್ದಾರೆ. ಅಲ್ಲದೆ, ಆರತಿ ಎತ್ತಿ ಸ್ವಾಗತಿಸಿದ್ದಾರೆ!

Viral Video: 7 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೀದಿ ನಾಯಿಗೆ ಆರತಿ ಎತ್ತಿ ಸ್ವಾಗತ!; ನೀವೂ ಈ ವಿಡಿಯೋ ಕಣ್ತುಂಬಿಕೊಳ್ಳಿ
1 ವಾರದ ಹಿಂದೆ ವಾಪಾಸ್ ಬಂದ ಬೀದಿ ನಾಯಿ
TV9 Web
| Edited By: |

Updated on: Feb 25, 2022 | 2:53 PM

Share

ನಾಯಿಗಳು (Dogs) ಮನುಷ್ಯನ ಅತ್ಯುತ್ತಮ ಸ್ನೇಹಿತರೆಂಬುದರಲ್ಲಿ ಅನುಮಾನವೇ ಇಲ್ಲ. ನಾಯಿಗಳಿಗೆ ಒಂದು ಸಲ ಪ್ರೀತಿ ತೋರಿಸಿದರೆ ಅವುಗಳು ಎಂದಿಗೂ ಅವರನ್ನು ಮರೆಯುವುದಿಲ್ಲ. ನಾಯಿ ಮರಿಗಳು ಮನುಷ್ಯರೊಂದಿಗೆ ಆಡುವ ಹೃದಯಸ್ಪರ್ಶಿ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪದೇ ಪದೇ ವೈರಲ್ ಆಗುತ್ತಿರುತ್ತವೆ. ಇದೀಗ ಬೀದಿನಾಯಿಯೊಂದರ ಕಥೆ ಸಾವಿರಾರು ನೆಟ್ಟಿಗರ ಹೃದಯವನ್ನು ಕರಗಿಸಿದೆ. ಕಳೆದೊಂದು ವಾರದ ಹಿಂದೆ ನಾಪತ್ತೆಯಾಗಿದ್ದ ಬೀದಿ ನಾಯಿಯೊಂದು ಕೊನೆಗೂ ಆ ಬೀದಿಗೆ ವಾಪಾಸ್ ಬಂದಿದೆ. ಇದರಿಂದ ಖುಷಿಯಾದ ಆ ಬೀದಿಯ ಜನರು ಸಂಭ್ರಮಾಚರಣೆ ಮಾಡಿದ್ದಾರೆ.

ಮುಂಬೈನ ಪ್ರಭಾದೇವಿಯ ಸೊಸೈಟಿಯ ಬೀದಿಯಲ್ಲಿ ವಾಸವಾಗಿದ್ದ ವಿಸ್ಕಿ ಎಂಬ ಹೆಸರಿನ ಬೀದಿ ನಾಯಿ ನಾಪತ್ತೆಯಾಗಿತ್ತು. ಆ ಸೊಸೈಟಿಯ ಎಲ್ಲರೂ ಅವರನ್ನು ಪ್ರೀತಿಸುತ್ತಿದ್ದುದರಿಂದ ಆ ಬೀದಿ ನಾಯಿ ನಾಪತ್ತೆಯಾಗುತ್ತಿದ್ದಂತೆ ಆ ಸೊಸೈಟಿಯ ಜನರು ಬಹಳ ಬೇಸರಗೊಂಡಿದ್ದರು. ಅವರಲ್ಲಿ ಕೆಲವು ನಿವಾಸಿಗಳು 7 ದಿನಗಳ ಹುಡುಕಾಟದ ನಂತರ ವಿಲ್ಸನ್ ಕಾಲೇಜಿನ ಬಳಿಯ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ವಿಸ್ಕಿ ಎಂಬ ಆ ಬೀದಿ ನಾಯಿಯನ್ನು ಪತ್ತೆ ಹಚ್ಚಿದರು. ಆ ನಾಯಿಯನ್ನು ಮತ್ತೆ ಸೊಸೈಟಿಗೆ ವಾಪಾಸ್ ಕರೆತರಲಾಯಿತು.

ವಿಸ್ಕಿ ಬೀದಿ ನಾಯಿಯಾದರೂ ಆ ಸೊಸೈಟಿಯ ಜನರು ಆ ನಾಯಿಯನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಆ ನಾಯಿ ವಾಪಾಸ್ ಬರುತ್ತಿದ್ದಂತೆ ಅಲ್ಲಿನವರು ಹರ್ಷೋದ್ಗಾರಗಳೊಂದಿಗೆ ಬೀದಿ ನಾಯಿಯನ್ನು ಸ್ವಾಗತಿಸಿದರು. ಆರತಿ ಮಾಡಿ ಬೀದಿ ನಾಯಿಯನ್ನು ಸ್ವಾಗತಿಸಿದರು. ಆ ವಿಸ್ಕಿಯ ಸ್ವಾಗತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಮ್ಮ ಸೊಸೈಟಿಯ ನಾಯಿ ವಿಸ್ಕಿ ಫೆಬ್ರವರಿ 8ರಂದು ಪ್ರಭಾದೇವಿ ಏರಿಯಾದಿಂದ ಕಳೆದುಹೋಗಿತ್ತು. ಆ ನಾಯಿ ಫೆಬ್ರವರಿ 15ರಂದು ವಿಲ್ಸನ್ ಕಾಲೇಜು ಬಳಿಯ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಪತ್ತೆಯಾಗಿದೆ. 7 ದಿನಗಳ ಹುಡುಕಾಟದ ನಂತರ ಆ ನಾಯಿ ಮತ್ತೆ ಸಿಕ್ಕಿದೆ. ಅದನ್ನು ಕಂಡು ಇಡೀ ಸೊಸೈಟಿಯ ಜನರು ಖುಷಿಯಾಗಿ, ವಿಸ್ಕಿಯನ್ನು ಸ್ವಾಗತಿಸಿದ್ದೇವೆ ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ.

View this post on Instagram

A post shared by whiskey.jr (@whis.key_)

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 16,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ಕಣ್ಣೀರು ಹಾಕಿದರು. “ಇದು ತುಂಬಾ ಸಂತೋಷದಿಂದ ಕೂಡಿದ ಶುದ್ಧ ಪ್ರೀತಿ” ಎಂದು ಕೆಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದರೆ ಇನ್ನು ಕೆಲವರು ಈ ವಿಡಿಯೋ ನೋಡಿ ನನಗೆ ಅಳುವೇ ಬಂದಿತು ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಕಚೋರಿ ತಿನ್ನಲು ಮಾರ್ಗಮಧ್ಯೆ ರೈಲು ನಿಲ್ಲಿಸಿದ ಚಾಲಕನ ವಿಡಿಯೋ ವೈರಲ್; ಐವರು ಅಮಾನತು

Viral Video: ರಸ್ತೆ ಬದಿ ನಿಂತಿದ್ದ ಬೀದಿ ನಾಯಿಗೆ ಒದೆಯಲು ಹೋದವನಿಗೆ ಏನಾಯ್ತು ಗೊತ್ತಾ?; ವಿಡಿಯೋ ವೈರಲ್

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ