Viral Video: ರಸ್ತೆ ಬದಿ ನಿಂತಿದ್ದ ಬೀದಿ ನಾಯಿಗೆ ಒದೆಯಲು ಹೋದವನಿಗೆ ಏನಾಯ್ತು ಗೊತ್ತಾ?; ವಿಡಿಯೋ ವೈರಲ್

Shocking Video: ತನ್ನಷ್ಟಕ್ಕೆ ತಾನು ರಸ್ತೆಯಲ್ಲಿ ಹೋಗುತ್ತಿದ್ದ ನಾಯಿಗೆ ತನ್ನ ಎಡ ಕಾಲಿನಿಂದ ಜಾಡಿಸಿ ಒದೆಯಲು ಹೋದ ಆ ವ್ಯಕ್ತಿ ಇದ್ದಕ್ಕಿದ್ದಂತೆ ಆಯತಪ್ಪಿ ಕೆಳಗೆ ಬೀಳುತ್ತಾನೆ. ಈ ವಿಡಿಯೋ ವೈರಲ್ ಆಗಿದೆ.

Viral Video: ರಸ್ತೆ ಬದಿ ನಿಂತಿದ್ದ ಬೀದಿ ನಾಯಿಗೆ ಒದೆಯಲು ಹೋದವನಿಗೆ ಏನಾಯ್ತು ಗೊತ್ತಾ?; ವಿಡಿಯೋ ವೈರಲ್
ನಾಯಿಯ ವಿಡಿಯೋ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 22, 2022 | 8:31 PM

ಕರ್ಮ ಎನ್ನುವುದು ಯಾರನ್ನೂ ಬಿಡುವುದಿಲ್ಲ. ಕೆಲವರಿಗೆ ಆ ಕರ್ಮದ (Karma) ಫಲ ತಕ್ಷಣ ಸಿಕ್ಕಿದರೆ ಇನ್ನು ಕೆಲವರಿಗೆ ನಿಧಾನವಾಗಿ ಅದರ ಫಲ ಸಿಗುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ವ್ಯಕ್ತಿಯೊಬ್ಬನಿಗೆ ಕರ್ಮದ ಫಲ ಸಿಕ್ಕ ವಿಡಿಯೋ ಭಾರೀ ವೈರಲ್ (Video Viral) ಆಗಿದೆ. ರಸ್ತೆ ಬದಿಯಲ್ಲಿದ್ದ ಅಮಾಯಕ ನಾಯಿಗೆ ತೊಂದರೆ ಕೊಡುವ ಉದ್ದೇಶದಿಂದ ಅದಕ್ಕೆ ಒದೆಯಲು ಹೋದ ವ್ಯಕ್ತಿಗೆ ಏನಾಯಿತು? ಎಂಬುದನ್ನು ನೀವೇ ನೋಡಿ.

ನೇಚರ್‌ಹೋಲಿಕ್ ಎಂಬ ಟ್ವಿಟ್ಟರ್ ಖಾತೆಯು ಈ ಘಟನೆಯ ಸಿಸಿಟಿವಿ ದೃಶ್ಯವನ್ನು ಪೋಸ್ಟ್ ಮಾಡಿದೆ. ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆಗ ಅಲ್ಲಿದ್ದ ಬೀದಿ ನಾಯಿಯ ಬಳಿ ಹೋಗಿ ಅದಕ್ಕೆ ಒದೆಯುವ ಪ್ರಯತ್ನ ಮಾಡುತ್ತಾನೆ. ತನ್ನಷ್ಟಕ್ಕೆ ತಾನು ರಸ್ತೆಯಲ್ಲಿ ಹೋಗುತ್ತಿದ್ದ ನಾಯಿಗೆ ತನ್ನ ಎಡ ಕಾಲಿನಿಂದ ಜಾಡಿಸಿ ಒದೆಯಲು ಹೋದ ಆ ವ್ಯಕ್ತಿ ಇದ್ದಕ್ಕಿದ್ದಂತೆ ಆಯತಪ್ಪಿ ಕೆಳಗೆ ಬೀಳುತ್ತಾನೆ. ಹಿಮ್ಮುಖವಾಗಿ ಬಿದ್ದ ಆ ವ್ಯಕ್ತಿ ಸಾವರಿಸಿಕೊಂಡು ಮೇಲಕ್ಕೇಳುವಷ್ಟರಲ್ಲಿ ಆ ಬೀದಿ ನಾಯಿ ಓಡಿ ಹೋಗಿರುತ್ತದೆ. ಆದರೂ ಸುಮ್ಮನಾಗದ ಆತ ಆ ನಾಯಿಯ ಹಿಂದೆ ಓಡಲು ಯತ್ನಿಸುತ್ತಾನೆ. ಅಷ್ಟರಲ್ಲಿ ಆ ನಾಯಿ ದೂರ ಓಡಿ ಹೋಗಿರುತ್ತದೆ.

ಈ ವಿಡಿಯೋ ನೋಡಿದರೆ ಇನ್​ಸ್ಟಂಟ್ ಕರ್ಮ ಎಂದು ಲೇವಡಿ ಮಾಡಿದ್ದಾರೆ.

ಫೆಬ್ರವರಿ 19ರಂದು ಹಂಚಿಕೊಳ್ಳಲಾದ ಈ ವೀಡಿಯೊ 3.70 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದೆ. ಅಮಾಯಕ ಪ್ರಾಣಿಗೆ ತೊಂದರೆ ಕೊಡಲು ಹೋದವನು ತತ್‌ಕ್ಷಣದ ಕರ್ಮವನ್ನು ಪಡೆದಿದ್ದಾನೆ, ಅವನಿಗೆ ತಕ್ಕ ಶಿಕ್ಷೆಯಾಗಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಇದನ್ನೂ ಓದಿ: Viral Video: ಪಾದ ಮುಟ್ಟಿ ನಮಸ್ಕರಿಸಿದ ಬಿಜೆಪಿ ನಾಯಕನಿಗೆ ಸನ್ನೆಯಲ್ಲೇ ಪಾಠ ಮಾಡಿದ ಪ್ರಧಾನಿ ನರೇಂದ್ರ ಮೋದಿ

Shocking Video: ಕೆಳಗೆ ಬಿದ್ದ ಬಟ್ಟೆ ತರಲು ಮಗನನ್ನು ಸೀರೆಗೆ ಕಟ್ಟಿ 10ನೇ ಮಹಡಿಯಿಂದ ನೇತಾಡಿಸಿದ ತಾಯಿ!