ಬೀದಿಗೆ ಬಂದ ಮದುವೆ ಮನೆ ಜಗಳ: ಆರತಕ್ಷತೆ ವೇಳೆ ರಸ್ತೆ ಮಧ್ಯೆ ಹೊಡೆದಾಟ: ವಿಡಿಯೋ ವೈರಲ್
ವಿಡಿಯೋದಲ್ಲಿ ಮದುವೆಯ ಉಡುಗೆಯನ್ನು ಧರಿಸಿದ ವ್ಯಕ್ತಿಗಳು ಒಬ್ಬರನ್ನೊಬ್ಬರು ಹೊಡೆದಾಡಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ಹೊಡೆದಾಟದ ಅಬ್ಬರದಲ್ಲಿ ಧರಿಸಿದ್ದ ಸೂಟ್ ಮತ್ತು ಕೋಟುಗಳನ್ನು ಕಿತ್ತೆಸೆಯವುದನ್ನು ಕಾಣಬಹುದು.
ಮದುವೆ ಮನೆಗಳೆಂದರೆ ಒಂದಷ್ಟು ಗೊಂದಲ, ಜಟಾಪಟಿ, ಜಗಳ ಸಾಮಾನ್ಯ. ಅದು ಆರಂಭವಾಗಿ ಶಾಂತವಾಗಿಯೇ ಮುಗಿದರೆ ಸಮಸ್ಯೆ ಇಲ್ಲ. ಬೀದಿಗೆ ಬಂದರೆ ಹೊಸ ಸಮಸ್ಯೆ ಉಲ್ಬಣವಾದಂತೆ. ಇಂತಹ ಘಟನೆ ಆಸ್ಟ್ರೇಲಿಯದಲ್ಲಿ ನಡೆದಿದೆ. ಮದುವೆಯ ಆರತಕ್ಷತೆ ವೇಳೆ ಗಲಾಟೆ ಆರಂಭವಾಗಿದ್ದು, ಬೀದಿಯಲ್ಲಿ ನಿಂತು ಹೊಡೆದಾಟ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೆಡ್ಡಿಟ್ನಲ್ಲಿ ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿ ಮದುವೆಯ ಉಡುಗೆಯನ್ನು ಧರಿಸಿದ ವ್ಯಕ್ತಿಗಳು ಒಬ್ಬರನ್ನೊಬ್ಬರು ಹೊಡೆದಾಡಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ಹೊಡೆದಾಟದ ಅಬ್ಬರದಲ್ಲಿ ಧರಿಸಿದ್ದ ಸೂಟ್ ಮತ್ತು ಕೋಟುಗಳನ್ನು ಕಿತ್ತೆಸೆಯವುದನ್ನು ಕಾಣಬಹುದು. ಸಿಡ್ನಿಯ ಮೊಸಮಾನ್ ನಗರದಲ್ಲಿ ಈ ಘಟನೆ ನಡೆದಿದೆ. ಮದುವೆ ಉಡುಗೆಗಳನ್ನು ಧರಿಸಿ ಬೀದಿಯಲ್ಲಿ ನಿಂತು ಜಗಳವಾಡುತ್ತಿದ್ದರು. ವಿಡಿಯೋದಲ್ಲಿ ಇನ್ನೂ ಆತಂಕಕಾರಿ ವಿಚಾರವೆಂದರೆ ಜಗಳ ನಿಲ್ಲಿಸಲು ಬಂದ ಬ್ಯಕ್ತಿಯನ್ನು ಬಗ್ಗು ಬಡಿದು ಆತನ ತಲೆಯನ್ನು ರಸ್ತೆಗೆ ಬಡಿದ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಹೊಡೆದಾಟವನ್ನು ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಈ ಭಯಾನಕ ವಿಡಿಯೋ ನೋಡಿ ನಟ್ಟಿಗರು ಇದೆಂತಹ ಸಂಸ್ಕೃತಿ ಎಂದು ಕಾಮೆಂಟ್ ಮಾಡಿದ್ದಾರೆ