Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಬೀದಿ ನಾಯಿಗೆ ಅದ್ದೂರಿ ಹುಟ್ಟುಹಬ್ಬ ಆಚರಣೆ; ಕೇಕ್ ಕತ್ತರಿಸಿ ಸನ್ಮಾನ ಮಾಡಿದ ಸ್ಥಳೀಯರು

ಅಚ್ಚುಮೆಚ್ಚಿನ ನಾಯಿಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸಂಭ್ರಮಿಸುವ ಮೂಲಕ ವಿನೂತನವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.

ಚಿಕ್ಕಬಳ್ಳಾಪುರ: ಬೀದಿ ನಾಯಿಗೆ ಅದ್ದೂರಿ ಹುಟ್ಟುಹಬ್ಬ ಆಚರಣೆ; ಕೇಕ್ ಕತ್ತರಿಸಿ ಸನ್ಮಾನ ಮಾಡಿದ ಸ್ಥಳೀಯರು
ಬೀದಿ ನಾಯಿಗೆ ಅದ್ದೂರಿ ಹುಟ್ಟುಹಬ್ಬ ಆಚರಣೆ
Follow us
TV9 Web
| Updated By: preethi shettigar

Updated on:Sep 12, 2021 | 3:22 PM

ಚಿಕ್ಕಬಳ್ಳಾಪುರ: ನಿಯತ್ತಿಗೆ ಇನ್ನೊಂದು ಹೆಸರು ನಾಯಿ ಎಂಬ ಮಾತಿದೆ. ಅದರಂತೆ ತನ್ನ ಒಳ್ಳೆಯ ಗುಣಗಳಿಂದ ಖ್ಯಾತಿ ಪಡೆದಿರುವ ಬೀದಿ ನಾಯಿಯೊಂದಕ್ಕೆ( Street dog) ಗೌರವ ಸಮರ್ಪಣೆ ಮಾಡಲಾಗಿದೆ. ಬೀದಿ ನಾಯಿಯ ಹುಟ್ಟುಹಬ್ಬದ (Birthday) ಅಂಗವಾಗಿ ಸ್ಥಳೀಯರು ಕೇಕ್ ಕತ್ತರಿಸಿ, ಸನ್ಮಾನ ಮಾಡಿ, ಅಭಿನಂದನೆ ಸಲ್ಲಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದ ನಾಲ್ಕನೇ ವಾರ್ಡ್​ನಲ್ಲಿ ನಡೆದಿದೆ.

ನಗರದ 4ನೇ ವಾರ್ಡ್​ನ ಎಡಿ ಕಾಲೋನಿಯ ಸ್ನೇಹಿತ ಬಳಗದಿಂದ ಬೀದಿ ನಾಯಿಗೆ ಸನ್ಮಾನ ಮಾಡಲಾಯಿತು. ಕೆಲವು ವರ್ಷಗಳ ಹಿಂದೆ ಸಾಕು ನಾಯಿಯನ್ನು ತಂದು ದೇವಾಸ್ಥಾನದ ಆವರಣದಲ್ಲಿ ಬಿಡಲಾಯಿತು. ಇದನ್ನು ಕಂಡ ಇಲ್ಲಿನ ಜನರು ಅದಕ್ಕೆ ಶೇರ್ ಖಾನ್ ಎಂದು ಹೆಸರು ಸಹ ಇಟ್ಟಿದ್ದರು. ಹೀಗಾಗಿ ಶೇರ್ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಬೀದಿಯಲ್ಲಿ ಪ್ಲೇಕ್ಸ್ ಕಟ್ಟಿ, ಹುಟ್ಟುಹಬ್ಬ ಆಚರಣೆ ಮಾಡಿ ಪಟಾಕಿ ಹೋಡೆಯಲಾಗಿದೆ.

ರಾಜಕೀಯ ಮುಖಂಡರಿಗೆ ಅಥವಾ ಇನ್ನಿತರ ದೊಡ್ಡ ವ್ಯಕ್ತಿಗಳಿಗೆ ಅದ್ದೂರಿ ಸನ್ಮಾನ ಮಾಡುವ ರೀತಿಯಲ್ಲಿ, ಸ್ಥಳಿಯ ಯುವಕರ ಗುಂಪು ಕೇಕ್ ಸಿದ್ಧಪಡಿಸಿದ್ದು, ಅದರ ಮೇಲೆ ನಾಯಿಯ ಭಾವಚಿತ್ರ ಬಿಡಿಸಿದ್ದಾರೆ. ಅಚ್ಚುಮೆಚ್ಚಿನ ನಾಯಿಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸಂಭ್ರಮಿಸುವ ಮೂಲಕ ವಿನೂತನವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.

ಅಚ್ಚು ಮೆಚ್ಚಿನ ನಾಯಿಯ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಏರಿಯಾದ ಗೆಳೆಯರೆಲ್ಲ ಒಂದೆಡೆ ಸೇರಿ ನಾಯಿಯನ್ನು ಕರೆ ತಂದು ಗೌರವ ನೀಡಿದ್ದು, ವಿಶೇಷವಾಗಿತ್ತು. ಶ್ವಾನದ ಹುಟ್ಟುಹಬ್ಬ ಕೂಡ ಈ ರೀತಿಯಾಗಿ ಮಾಡಬಹುದು ಎಂಬುವುದನ್ನು ಇಲ್ಲಿನ ಜನರು ನಿರೂಪಿಸಿದ್ದಾರೆ ಎಂದು ನಾಯಿಯ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದ ಸ್ಥಳಿಯ ಯುವಕ ಅರುಣ್ ಅಭಿಪ್ರಾಯಪಟ್ಟಿದ್ದಾರೆ.

dog birthday

ಕೇಕ್ ಕತ್ತರಿಸಿ ಸನ್ಮಾನ ಮಾಡಿದ ಸ್ಥಳೀಯರು

ಪೊಲೀಸರು ಮಾಡುವ ಕೆಲಸವನ್ನು ಶೇರ್ ಖಾನ್ ಎನ್ನುವ ಈ ಶ್ವಾನ ಮಾಡುತ್ತದೆ. ತಮ್ಮ ಏರಿಯಾಗೆ ಪೋಲಿಸರ ಅವಶ್ಯಕತೆಯಿಲ್ಲ. ವಾರ್ಡಿನಲ್ಲಿ ಕಳ್ಳ ಕದಿಮರನ್ನು ಬೆನ್ನತ್ತಿ ಹಿಡಿಯುತ್ತದೆ ಈ ನಾಯಿ. ಬೇರೆ ಬೀದಿ ನಾಯಿಗಳು ಆಗಮಿಸಿದರೆ ವಾಪಸ್ ಓಡಿಸುತ್ತದೆ. ಹೀಗಾಗಿ ನಮ್ಮ ವಾರ್ಡಿನ ಕಾವಲಾಗಿರುವ ನಾಯಿಗೂ ಗೌರವ ಕೊಟ್ಟು ಮಾನವೀಯತೆ ಮೇರೆಯಬೇಕು ಎಂದು ಇಲ್ಲಿನ ಸ್ನೇಹಿತರ ಬಳಗದ ಮುಖಂಡರು ತಿಳಿಸಿದ್ದಾರೆ.

ವರದಿ: ಭೀಮಪ್ಪ ಪಾಟೀಲ್​

ಇದನ್ನೂ ಓದಿ:

ಹಾವೇರಿಯಲ್ಲಿ ಶ್ವಾನಕ್ಕೆ ಹುಟ್ಟುಹಬ್ಬದ ಸಂಭ್ರಮ; ಕೆಕ್​ ಕತ್ತರಿಸಿ ಕನಕನಿಗೆ ಶುಭಕೋರಿದ ಪೊಲೀಸರು

ಗದಗ: ಮನೆ ಮಗಳಂತೆ ಸಾಕಿರುವ ಆಕಳಿಗೆ ಸೀಮಂತ; ರೈತ ಕುಟುಂಬದಿಂದ 7 ತಿಂಗಳ ಗರ್ಭಿಣಿ ಗೌರಿಗೆ ವಿಶೇಷ ಪೂಜೆ

(People celebrated Street dog birthday by cutting a special cake in chikkaballapur)

Published On - 3:14 pm, Sun, 12 September 21

ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ