ಹಾವೇರಿಯಲ್ಲಿ ಶ್ವಾನಕ್ಕೆ ಹುಟ್ಟುಹಬ್ಬದ ಸಂಭ್ರಮ; ಕೆಕ್​ ಕತ್ತರಿಸಿ ಕನಕನಿಗೆ ಶುಭಕೋರಿದ ಪೊಲೀಸರು

ಕನಕ ಹೆಸರಿನ ಈ ಶ್ವಾನವು 2019ರಲ್ಲಿ ಬೆಸ್ಟ್ ಬ್ಯೂಟಿ ಆಫ್ ಬೆಂಗಳೂರು ಪ್ರಶಸ್ತಿಯನ್ನು ಡಿಐಜಿ ಅವರಿಂದ ಪಡೆದುಕೊಂಡಿದೆ. 2020ರಲ್ಲಿ ದಾವಣಗೆರೆ ವಲಯದಲ್ಲಿ ಪ್ರಶಸ್ತಿ ಮತ್ತು ರಾಜ್ಯಮಟ್ಟದ ಕರ್ತವ್ಯಕೂಟದಲ್ಲಿ ಪ್ರಶಸ್ತಿ ಪಡೆದುಕೊಂಡು ಇಲಾಖೆಯಲ್ಲಿ ಉತ್ತಮ ಹೆಸರು ಮಾಡಿದೆ.

ಹಾವೇರಿಯಲ್ಲಿ  ಶ್ವಾನಕ್ಕೆ ಹುಟ್ಟುಹಬ್ಬದ ಸಂಭ್ರಮ; ಕೆಕ್​ ಕತ್ತರಿಸಿ ಕನಕನಿಗೆ ಶುಭಕೋರಿದ ಪೊಲೀಸರು
ಪೊಲೀಸ್ ಶ್ವಾನದ ಹುಟ್ಟುಹಬ್ಬ ಆಚರಿಸಿದ ಕ್ಷಣ
Follow us
preethi shettigar
|

Updated on: May 05, 2021 | 10:10 AM

ಹಾವೇರಿ : ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಿಬ್ಬಂದಿಯಷ್ಟೇ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳಕ್ಕೂ ಪ್ರಾಧಾನ್ಯತೆ ನೀಡಲಾಗುತ್ತದೆ. ಪೊಲೀಸ್ ಸಿಬ್ಬಂದಿಗಳು ಕೆಲವೊಂದು ಪ್ರಕರಣಗಳನನ್ನು ಒಂಟಿಯಾಗಿ ಭೇದಿಸಿದರೆ, ಮತ್ತೆ ಕೆಲವೊಂದು ಸಂದರ್ಭಗಳಲ್ಲಿ ಶ್ವಾನದಳದ ಸಾಥ್ ಬೇಕು. ಹೀಗೆ ಪೊಲೀಸ್ ಮತ್ತು ಶ್ವಾನಗಳ ನಡುವೆ ಸೃಷ್ಟಿಯಾಗಿದೆ. ಹೀಗೆ ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಶ್ವಾನದಳಕ್ಕೆ ಎರಡು ವರ್ಷಗಳ ಹಿಂದೆ ಶ್ವಾನವೊಂದು ಸೇವೆಗೆ ಸೇರಿತ್ತು. ಅದಕ್ಕೆ ಕನಕ ಎಂದು ನಾಮಕರಣ ಮಾಡಲಾಗಿತ್ತು.‌ ಈಗ ಈ ಕನಕನಿಗೆ ಎರಡು ವರ್ಷದ ಸಂಭ್ರಮ.

ಜಿಲ್ಲಾ ಪೊಲೀಸ್ ಶ್ವಾನದಳದ ರಾಜ ಎಂದು ಹೆಸರುವಾಸಿ ಆಗಿರುವ ಕನಕನಿಗೆ ಶ್ವಾನದಳದ ಸಿಬ್ಬಂದಿ 2ನೇ ವರ್ಷದ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. ಕನಕನಿಗೆ ತರಬೇತುದಾರ ಶ್ರೀಕಾಂತ ಕಬ್ಬೂರು, ಶಿವರಾಜ್ ಸೇರಿ ಹುಟ್ಟುಹಬ್ಬದ ಶುಭಕೋರಿದ್ದು, ಕನಕನಿಗೆ ಟೋಪಿ ಹಾಕಿ, ಕೇಕ್ ಕತ್ತರಿಸಿ ಎರಡನೆ ವರ್ಷದ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.

ಉತ್ತಮ ಹೆಸರು ಮಾಡಿರುವ ಕನಕ: 2019ರಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆಗೆ ಸೇರಿಕೊಂಡಿರುವ ಕನಕ ಬಾಂಬ್ ನಿಷ್ಕ್ರಿಯದಳ ಹಾಗೂ ಅಪರಾಧ ವಿಭಾಗದ ಸೇವೆಯನ್ನು ಆರಂಭ ಮಾಡಿದ್ದಾನೆ. ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿ ಮುಗಿಸಿರುವ ಕನಕ ಹಾವೇರಿ ಜಿಲ್ಲೆಯಲ್ಲಿ ತನ್ನ ಸೇವೆ ಪ್ರಾರಂಭಿಸಿದ್ದಾನೆ. ಕನಕ ಹೆಸರಿನ ಈ ಶ್ವಾನವು 2019ರಲ್ಲಿ ಬೆಸ್ಟ್ ಬ್ಯೂಟಿ ಆಫ್ ಬೆಂಗಳೂರು ಪ್ರಶಸ್ತಿಯನ್ನು ಡಿಐಜಿ ಅವರಿಂದ ಪಡೆದುಕೊಂಡಿದೆ. 2020ರಲ್ಲಿ ದಾವಣಗೆರೆ ವಲಯದಲ್ಲಿ ಪ್ರಶಸ್ತಿ ಮತ್ತು ರಾಜ್ಯಮಟ್ಟದ ಕರ್ತವ್ಯಕೂಟದಲ್ಲಿ ಪ್ರಶಸ್ತಿ ಪಡೆದುಕೊಂಡು ಇಲಾಖೆಯಲ್ಲಿ ಉತ್ತಮ ಹೆಸರು ಮಾಡಿದೆ.

ಕನಕನಿಂದ ಉತ್ತಮ ಕೆಲಸ: ಪ್ರಧಾನಮಂತ್ರಿ ತಂಗುದಾಣದಲ್ಲಿ ಕರ್ತವ್ಯ ಲೋಪವಾಗದಂತೆ ಉತ್ತಮ ಸೇವೆ‌, ಉಪರಾಷ್ಟ್ರಪತಿಯವರ ಬೆಂಗಾವಲು ಕರ್ತವ್ಯದಲ್ಲಿ ಅತ್ಯುತ್ತಮ ನಿರ್ವಹಣೆ ಮಾಡಿದ್ದು, ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಚಾಣಾಕ್ಷತನವನ್ನು ಕನಕ‌ ಹೆಸರಿನ ಶ್ವಾನ ಹೊಂದಿದೆ. ಸದ್ಯ ಕನಕನಿಗೆ ಈಗ ಎರಡು ವರ್ಷದ ಜನ್ಮದಿನದ ಸಂಭ್ರಮ. ಇಲಾಖೆಯಲ್ಲಿ ನಿನ್ನ ಸೇವೆ ಹೀಗೆ ಮುಂದುವರೆಯಲಿ ಎಂದು ಕನಕನಿಗೆ ಬರ್ತ್ ಡೇ ವಿಶ್ ಜೊತೆಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ ಇಲ್ಲಿನ ಸಿಬ್ಬಂದಿಗಳು.

ಇದನ್ನೂ ಓದಿ:

ಪ್ರೀತಿಯ ಶ್ವಾನಕ್ಕೆ ಇಡೀ ಕುಟುಂಬ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿ ಸಂಭ್ರಮಿಸಿದೆ

ಊಟ ಹಾಕಿದವನಿಗಾಗಿ 600 ಕಿ.ಮೀ ನಡೆದ ಗರ್ಭಿಣಿ ನಾಯಿ! ಇಲ್ಲಿದೆ ಮನಕಲಕುವ ಘಟನೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್