AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬೆಡ್​ಗಳು ಭರ್ತಿಯಾಗಿವೆ; ಆಸ್ಪತ್ರೆ ಎದುರು ಬೋರ್ಡ್ ಹಾಕಿರುವ ಜಿಲ್ಲಾಡಳಿತ

ಒಟ್ಟು 685 ಬೆಡ್​ಗಳನ್ನು ಮೀಸಲಿಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ 250, ಕೊವಿಡ್ ಕೇರ್ ಸೆಂಟರ್ 210 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 225 ಬೆಡ್ ಮೀಸಲಿಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 48 ಜನ ಕೊವಿಡ್ ಐಸಿಯು ಹಾಗೂ 24 ಜನ ಕೊವಿಡ್ ಜನರಲ್ ಬೆಡ್ ಇವೆ. ಸದ್ಯ ಬೆಡ್ ಭರ್ತಿಯಾಗಿವೆ ಎಂದು ಜಿಲ್ಲಾಡಳಿತ ಬೋರ್ಡ್ ಹಾಕಿದೆ.

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬೆಡ್​ಗಳು ಭರ್ತಿಯಾಗಿವೆ; ಆಸ್ಪತ್ರೆ ಎದುರು ಬೋರ್ಡ್ ಹಾಕಿರುವ ಜಿಲ್ಲಾಡಳಿತ
ಕೊವಿಡ್ ವಾರ್ಡ್ ಮುಂಭಾಗ ಬೋರ್ಡ್​ ಅಂಟಿಸಿದ್ದಾರೆ
sandhya thejappa
|

Updated on:May 05, 2021 | 9:37 AM

Share

ಕೊಪ್ಪಳ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಆಕ್ಸಿಜನ್ ಮತ್ತು ಬೆಡ್​ಗಳಿಗಾಗಿ ಹಾಹಾಕಾರ ಶುರುವಾಗಿದೆ. ಆಕ್ಸಿಜನ್ ಮತ್ತು ಬೆಡ್​ಗಳು ಸಿಗದೆ ಕೊರೊನಾ ಸೋಂಕಿತರು ಹಾಗೂ ನಾನ್ ಕೊವಿಡ್ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಇದೀಗ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬೆಡ್​ಗಳು ಭರ್ತಿಯಾಗಿವೆ ಎಂದು ಜಿಲ್ಲಾಡಳಿತ ಚೀಟಿ ಅಂಟಿಸಿದೆ. ಇದರಿಂದ ಹೊಸದಾಗಿ ಸೋಂಕಿತರು ಬಂದರೆ ಬೆಡ್​ಗಳಿಗಾಗಿ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಒಟ್ಟು 685 ಬೆಡ್​ಗಳನ್ನು ಮೀಸಲಿಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ 250, ಕೊವಿಡ್ ಕೇರ್ ಸೆಂಟರ್ 210 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 225 ಬೆಡ್ ಮೀಸಲಿಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 48 ಜನ ಕೊವಿಡ್ ಐಸಿಯು ಹಾಗೂ 24 ಜನ ಕೊವಿಡ್ ಜನರಲ್ ಬೆಡ್ ಇವೆ. ಸದ್ಯ ಬೆಡ್ ಭರ್ತಿಯಾಗಿವೆ ಎಂದು ಜಿಲ್ಲಾಡಳಿತ ಜಿಲ್ಲಾ ಆಸ್ಪತ್ರೆಯ ಕೊವಿಡ್ ವಾರ್ಡ್ ಮುಂಭಾಗ ಬೋರ್ಡ್ ಹಾಕಿದೆ.

ಗದಗದ ಜಿಮ್ಸ್ ಆಸ್ಪತ್ರೆಯ ಐಸಿಯು ಬೆಡ್‌ಗಳು ಭರ್ತಿಯಾದ ಹಿನ್ನೆಲೆ ICU ಬೆಡ್ ಭರ್ತಿ ಎಂದು ಸಿಬ್ಬಂದಿ ಚೀಟಿ ಅಂಟಿಸಿದೆ. ಇದರಿಂದ ಟಿಕಲ್ ಇರುವ ಸೋಂಕಿತರು ಬಂದರೆ ಪರದಾಡುವಂತಾಗಿದೆ.

ರೋಗಿಗಳ ಪರದಾಟ ಚಿತ್ರದುರ್ಗ: ಕೋಟೆನಾಡಿನಲ್ಲೂ ಆಕ್ಸಿಜನ್ ಬೆಡ್​ಗಳಿಲ್ಲದೆ ರೋಗಿಗಳು ಪರದಾಟ ಪಡುತ್ತಿದ್ದಾರೆ. ಬೆಡ್​ಗಳಿದ್ದರೂ ಆಕ್ಸಿಜನ್ ಬೆಡ್ಗಳ ಕೊರತೆಯಿಂದ ಸಂಕಷ್ಟ ಎದುರಾಗಿದೆ. ಆದರೆ ಯಾವುದೇ ಕೊರತೆಯಿಲ್ಲ ಎಂದು ಅಧಿಕಾರಿಗಳು ಸುಳ್ಳು ಲೆಕ್ಕ ಹೇಳುತ್ತಿದ್ದಾರಂತೆ. ಆಕ್ಸಿಜನ್ ಬೆಡ್ಗಾಗಿ ಆಸ್ಪತ್ರೆ ಬಳಿ ಅಂಬುಲೆನ್ಸ್​ನಲ್ಲಿ ರೋಗಿ ಕಾಯುತ್ತಿದ್ದರು. ರೋಗಿ ಸಂಬಂಧಿ ಫೋನ್ ಮೂಲಕ ಮಾಧ್ಯಮಕ್ಕೆ ಮಾಹಿತಿ ನೀಡಿದ ಹಿನ್ನೆಲೆ ಎಚ್ಚೆತ್ತುಕೊಂಡು ಆಸ್ಪತ್ರೆ ಸಿಬ್ಬಂದಿ ಬೆಡ್ ನೀಡಿದೆ.

ಬೆಡ್​ಗಳಿಗಾಗಿ ಅಲೆದಾಟ ಹುಬ್ಬಳ್ಳಿ: ವೆಂಟಿಲೇಟರ್ ಬೆಡ್​ಗಾಗಿ ಕೊರೊನಾ ಸೋಂಕಿತನ ಸಂಬಂಧಿಕರು ಕಳೆದ 24 ಗಂಟೆಯಿಂದ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಕಿಮ್ಸ್ ಆಸ್ಪತ್ರೆಯ 100 ವೆಂಟಿಲೇಟರ್ ಬೆಡ್ ಭರ್ತಿಯಾಗಿವೆ. ಖಾಸಗಿ ಆಸ್ಪತ್ರೆಯಲ್ಲೂ ವೆಂಟಿಲೇಟರ್ ಖಾಲಿ ಇಲ್ಲ. ಹೀಗಾಗಿ ಎಲ್ಲೂ ಬೆಡ್ ಸಿಗದೆ ಸೋಂಕಿತ ವ್ಯಕ್ತಿ ಕಂಗಾಲಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ವೆಂಟಿಲೇಟರ್ ಬೆಡ್​ಗಾಗಿ ಸೋಂಕಿತ ವ್ಯಕ್ತಿ ಕಾಯುತ್ತಿದ್ದಾರೆ.

ಇದನ್ನೂ ಓದಿ

ಮೊಬೈಲ್​ ಚಾರ್ಜ್​ ಹಾಕೋಕೂ ದುಡ್ಡು ಕೊಡ್ಬೇಕು, ಡೈಪರ್​ ತಂದುಕೊಟ್ರೆ ಅದನ್ನೂ ಮಾರ್ತಾರೆ​, ಇವರೇ ನಮ್ಮಪ್ಪನ್ನ ಸಾಯಿಸಿದ್ದು: ಮಕ್ಕಳ ಆಕ್ರೋಶ

ಬ್ಯಾಟರಾಯನಪುರ ರೈತರ ಸಂತೆ ವ್ಯಾಪಾರಕ್ಕೆ ಗ್ರೀನ್ ಸಿಗ್ನಲ್

(board was pasted in front of the District Hospital as beds were full in Koppal)

Published On - 9:30 am, Wed, 5 May 21