ಜೀಪ್ ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ; 8 ಮಂದಿ ದುರ್ಮರಣ

Kolar Accident: ಸ್ಥಳದಲ್ಲಿ ಮಾಲೂರು ಶಾಸಕ ಕೆ.ವೈ. ನಂಜೇಗೌಡರಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯ ನಡೆದಿದೆ. ಶಾಸಕರು ರಸ್ತೆ ಮಾರ್ಗವಾಗಿ ಹೋಗುತ್ತಿದ್ದರು. ಅಪಘಾತ ಕಂಡು ರಕ್ಷಣಾ ಕಾರ್ಯ ನಡೆಸಲು ಮುಂದಾಗಿದ್ದಾರೆ.

ಜೀಪ್ ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ; 8 ಮಂದಿ ದುರ್ಮರಣ
ಜೀಪ್ ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ
Follow us
TV9 Web
| Updated By: ganapathi bhat

Updated on:Sep 12, 2021 | 8:35 PM

ಚಿಕ್ಕಬಳ್ಳಾಪುರ: ಜೀಪ್, ಕ್ಯಾಂಟರ್​ ನಡುವೆ ಡಿಕ್ಕಿ ಆಗಿ 8 ಜನರ ದುರ್ಮರಣ ಆಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮದಿನಾಯಕನಹಳ್ಳಿ ಬಳಿ ನಡೆದಿದೆ. ಲಾರಿ ಹಾಗೂ ಜೀಪ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸ್ಥಳದಲ್ಲಿ ಮಾಲೂರು ಶಾಸಕ ಕೆ.ವೈ. ನಂಜೇಗೌಡರಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯ ನಡೆದಿದೆ. ಶಾಸಕರು ರಸ್ತೆ ಮಾರ್ಗವಾಗಿ ಹೋಗುತ್ತಿದ್ದರು. ಅಪಘಾತ ಕಂಡು ರಕ್ಷಣಾ ಕಾರ್ಯ ನಡೆಸಲು ಮುಂದಾಗಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಲಾರಿ ಹಾಗೂ ಜೀಪ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಬಳ್ಳಾಪುರ ಎಸ್​ಪಿ ಜಿ.ಜೆ. ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ಅಪಘಾತ ಆದ ಜೀಪ್‌ನಲ್ಲಿ 14 ಪ್ರಯಾಣಿಕರು ಇದ್ದರು. ಜೀಪ್​ನಲ್ಲಿ ಇದ್ದ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಜೀರೋ ಟ್ರಾಫಿಕ್‌ನಲ್ಲಿ ಕೋಲಾರಕ್ಕೆ ರವಾನೆ ಮಾಡಲಾಗಿದೆ. ಪ್ರಯಾಣಿಕರನ್ನು ಸಾಗಿಸುತ್ತಿದ್ದ ಜೀಪ್​ನಲ್ಲಿ ಇಬ್ಬರು ಮಕ್ಕಳು ಕೂಡ ಇದ್ದರು ಎಂದು ತಿಳಿಸಿದ್ದಾರೆ. ಮದಿನಾಯಕನಹಳ್ಳಿ ಬಳಿ ಭೀಕರ ಅಪಘಾತ ಘಟನಾಸ್ಥಳಕ್ಕೆ ಶ್ರೀನಿವಾಸಪುರ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ತೀವ್ರತೆಗೆ ಜೀಪ್ ನಜ್ಜುಗುಜ್ಜಾಗಿದೆ.

ಮದಿನಾಯಕನಹಳ್ಳಿ ಬಳಿ ಭೀಕರ ಅಪಘಾತ ಪ್ರಕರಣದಲ್ಲಿ ಜೀಪ್ ಚಾಲಕ ರಮೇಶ್ (40), ಮುನಿರತ್ನಮ್ಮ (55), ನಾರಾಯಣಸ್ವಾಮಿ (55) ಸೇರಿದಂತೆ 8 ಜನರ ಸಾವು ಸಂಭವಿಸಿದೆ. ನಿಖಿಲ್, ವೆಂಕಟಲಕ್ಷ್ಮೀ, ಯಶೋಧಮ್ಮ, ಸತ್ಯಪ್ಪ, ಮುನಿಸ್ವಾಮಿ, ಮಂಜುನಾಥ, ಅಂಬರೀಶ್​ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮೈಸೂರು: ಗೂಡ್ಸ್ ಆಟೋ ಡಿಕ್ಕಿ; ಬೈಕ್ ಸವಾರ ಸಾವು ಗೂಡ್ಸ್ ಆಟೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಪುರ ಗ್ರಾಮದ ಬಳಿ ನಡೆದಿದೆ. ಬೈಕ್ ಸವಾರ ಲೋಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿವಾಹಕ್ಕೆ ಎಂದು ಬಟ್ಟೆ ಖರೀದಿಸಿ ಸ್ನೇಹಿತನ ಜತೆ ಮೈಸೂರಿನಿಂದ ಲೋಕೇಶ್ ವಾಪಸಾಗುತ್ತಿದ್ದರು. ಈ ವೇಳೆ ಗೂಡ್ಸ್ ಆಟೋ ಡಿಕ್ಕಿಯಾಗಿ ಲೋಕೇಶ್ ಸಾವನ್ನಪ್ಪಿದ್ದಾರೆ. ಲೋಕೇಶ್ ಸ್ನೇಹಿತ ಶಿವಶಂಕರ್​ಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಜಿ ಪ್ರೇಮಿ ಟಾರ್ಚರ್‌ನಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಜಿ ಪ್ರೇಮಿ ಟಾರ್ಚರ್‌ನಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ಜಯನಗರದಲ್ಲಿ‌ ನಡೆದಿದೆ. 23 ವರ್ಷದ ನಿವೇದಿತಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಅವರಿಗೆ 4 ವರ್ಷದ ಹಿಂದೆ ಸೋಮು ಜತೆ ನಿವೇದಿತಾ ವಿವಾಹವಾಗಿತ್ತು. ವಿವಾಹ ಬಳಿಕವೂ ನಿವೇದಿತಾಗೆ ಹಳೇ ಪ್ರೇಮಿ ಕಿರುಕುಳ ನೀಡಿದ್ದಾನೆ. ಮಾಜಿ ಪ್ರಿಯಕರ ಪ್ರೇಮ್‌ನಿಂದ ನಿರಂತರ ಕಿರುಕುಳ ಆರೋಪ ಕೇಳಿಬಂದಿದೆ. ಈ ಸಂಬಂಧ, ನಿವೇದಿತಾ ಮನೆಯವರು ಪ್ರೇಮ್‌ಗೆ ಎಚ್ಚರಿಕೆ ಕೊಟ್ಟಿದ್ದರು. ಆದರೂ ಪ್ರೇಮ್‌ ಕಿರುಕುಳ ಮುಂದುವರಿಸಿದ್ದ ಹಿನ್ನೆಲೆ, ನಿವೇದಿತಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಬೆಂಗಳೂರು: ಬಾಲಕಿ ಜತೆ ಅಸಭ್ಯ ವರ್ತನೆ ಹಿನ್ನೆಲೆ ಮನನೊಂದು ಆತ್ಮಹತ್ಯೆ ಬಾಲಕಿ ಜತೆ ಯುವಕ ಅಸಭ್ಯ ವರ್ತನೆ ಹಿನ್ನೆಲೆ ಮನನೊಂದು 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವಕನೋರ್ವ ಬಾಲಕಿಯನ್ನ ಎಳೆದಾಡಿ ಅಸಭ್ಯ ವರ್ತನೆ ತೋರಿದ್ದ ಎನ್ನಲಾಗಿತ್ತು. ಅಸಭ್ಯ ವರ್ತನೆ ಬಗ್ಗೆ ಗ್ರಾಮದಲ್ಲಿ ಅಪಪ್ರಚಾರ ಉಂಟಾಗಿತ್ತು. ಈ ಹಿನ್ನೆಲೆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದ 16 ವರ್ಷದ ಬಾಲಕಿ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ತುಮಕೂರು: ಕಾರಿಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಕೆಎಸ್ಆರ್​ಟಿಸಿ ಬಸ್ ಅಪಘಾತ

ಇದನ್ನೂ ಓದಿ: ಭೀಕರ ಬೈಕ್​ ಅಪಘಾತ; ನಟನ 4 ತಪ್ಪುಗಳು ಬಟಾಬಯಲು: ಸಾಯಿ ಧರಮ್​ ತೇಜ್​ ಹೀಗೆ ಮಾಡಬಾರದಿತ್ತು

Published On - 5:14 pm, Sun, 12 September 21