ತುಮಕೂರು: ಕಾರಿಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಕೆಎಸ್ಆರ್​ಟಿಸಿ ಬಸ್ ಅಪಘಾತ

Tumakuru News: ಬಸ್‌ ಚಾಲಕನ ಸಮಯ ಪ್ರಜ್ಞೆಯಿಂದ ಗಂಭೀರ ಅನಾಹುತ ತಪ್ಪಿದೆ. ಅದೃಷ್ಟವಷಾತ್ ಕಾರು, ಬಸ್‌ನಲ್ಲಿ ಇದ್ದವರೆಲ್ಲಾ ಪಾರಾಗಿದ್ದಾರೆ. ಕಂಡಕ್ಟರ್‌ಗೆ ಗಾಯವಾಗಿದೆ. ಕೋಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ತುಮಕೂರು: ಕಾರಿಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಕೆಎಸ್ಆರ್​ಟಿಸಿ ಬಸ್ ಅಪಘಾತ
ತುಮಕೂರು ಬಸ್ ಅಪಘಾತ


ತುಮಕೂರು: ಕಾರಿಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿಯಾದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತಣ್ಣೇನಹಳ್ಳಿ ಬಳಿ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ ರಸ್ತೆ ಪಕ್ಕದಲ್ಲಿದ್ದ ಗದ್ದೆಗೆ ಉರುಳಿದೆ. ಬಸ್‌ ಚಾಲಕನ ಸಮಯ ಪ್ರಜ್ಞೆಯಿಂದ ಗಂಭೀರ ಅನಾಹುತ ತಪ್ಪಿದೆ. ಅದೃಷ್ಟವಷಾತ್ ಕಾರು, ಬಸ್‌ನಲ್ಲಿ ಇದ್ದವರೆಲ್ಲಾ ಪಾರಾಗಿದ್ದಾರೆ. ಕಂಡಕ್ಟರ್‌ಗೆ ಗಾಯವಾಗಿದೆ. ಕೋಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಕೆಎಸ್​ಆರ್​ಟಿಸಿ ಬಸ್ ಪಲ್ಟಿಯಾದ ಮತ್ತೊಂದು ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕಲಕೇರಿ ಬಳಿ ನಡೆದಿದೆ. ಅದೃಷ್ಟವಶಾತ್ 30 ಕ್ಕೂ ಹೆಚ್ಚು ಪ್ರಯಾಣಿಕರು ಬಚಾವ್ ಆಗಿದ್ದಾರೆ. ಹುಬ್ಬಳ್ಳಿ- ಇಳಕಲ್ ಮಾರ್ಗದ ಸರ್ಕಾರಿ ಬಸ್​ ಪಲ್ಟಿ ಆಗಿದೆ. ಬಸ್​​ನ ಗ್ಲಾಸ್ ಒಡೆದು ಪ್ರಯಾಣಿಕರು ಹೊರ ಬಂದಿದ್ದಾರೆ. ಬಸ್​​ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನರಗುಂದ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು: ಮಳೆಗೆ ಮನೆ ಗೋಡೆ ಕುಸಿತ
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆ ಉಂಟಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡಹಳ್ಳಿಯಲ್ಲಿ ನಿರಂತರ ಮಳೆಗೆ ಮನೆಯ ಗೋಡೆ ಕುಸಿತಗೊಂಡಿದೆ. ರಾಮೇಗೌಡ ಎಂಬುವರಿಗೆ ಸೇರಿದ ಮನೆ ಗೋಡೆ ಕುಸಿತವಾಗಿದೆ.

ಚಾರ್ಮಾಡಿ ಘಾಟ್​ನಲ್ಲಿ ರಸ್ತೆಗೆ ಉರುಳಿಬಿದ್ದ ಬಂಡೆಗಳು
ಚಾರ್ಮಾಡಿ ಘಾಟ್‌ನಲ್ಲಿ 3- 4 ದಿನದಿಂದ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ, ಚಾರ್ಮಾಡಿ ಘಾಟ್‌ನಲ್ಲಿ ಬಂಡೆಗಳು ರಸ್ತೆಗೆ ಉರುಳಿಬಿದ್ದಿವೆ. ಚಾರ್ಮಾಡಿ ಘಾಟ್‌ನ 7ನೇ ತಿರುವಿನಲ್ಲಿ ಘಟನೆ ನಡೆದಿದೆ. ಚಿಕ್ಕಮಗಳೂರು- ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಿಸುವ ಘಾಟ್​ನಲ್ಲಿ ಘಟನೆ ನಡೆದಿದೆ.

ಬೀದರ್: ತೊಗರಿ ಕಳ್ಳತನ; ಕಳ್ಳರ ಬಂಧನ
66 ಚೀಲ ತೊಗರಿ ಕಳ್ಳತನ ಮಾಡಿದ್ದ ಐವರು ಕಳ್ಳರ ಬಂಧಿಸಲಾಗಿದೆ. ಬೀದರ್ ಜಿಲ್ಲೆ ಭಾಲ್ಕಿ ಠಾಣೆಯ ಪೊಲೀಸರಿಂದ ಕಳ್ಳರ ಬಂಧನ ಮಾಡಲಾಗಿದೆ. ಕಳ್ಳರು ಭಾಲ್ಕಿ ಎಪಿಎಂಸಿಯಲ್ಲಿ 66 ಚೀಲ ತೊಗರಿ ಅಪಹರಣ ಮಾಡಿದ್ದರು. ಘಟನೆ ನಡೆದ 24 ಗಂಟೆಯಲ್ಲೇ ಕಳ್ಳರನ್ನು ಬಂಧಿಸಿ ತೊಗರಿ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ತುಮಕೂರು: ಮಾಜಿ ಡಿಸಿಎಂ ಪರಮೇಶ್ವರ್​ಗೆ ಕುರಿಗಳನ್ನು ಕೊಡುಗೆಯಾಗಿ ನೀಡಿದ ಕಾಂಗ್ರೆಸ್​​ ಕಾರ್ಯಕರ್ತ

ಇದನ್ನೂ ಓದಿ: ಚಿಕ್ಕಮಗಳೂರು: ಬೆಳೆ ಉಳಿಸುವಂತೆ ಕೋರಿ ಗಣೇಶನಿಗೆ ಜೀವಂತ ಇಲಿ ಸಮರ್ಪಿಸಿದ ಭಕ್ತ

Read Full Article

Click on your DTH Provider to Add TV9 Kannada