AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಬೆಳೆ ಉಳಿಸುವಂತೆ ಕೋರಿ ಗಣೇಶನಿಗೆ ಜೀವಂತ ಇಲಿ ಸಮರ್ಪಿಸಿದ ಭಕ್ತ

Ganesh Chaturthi 2021: ಮರ್ಕಲ್ ಗ್ರಾಮದ ನಿತಿನ್ ಎಂಬವರು ಗಣೇಶನಿಗೆ ಮೂಷಿಕವನ್ನ ಅರ್ಪಿಸಿದ ಭಕ್ತರು. ಗಣೇಶನಿಗೆ ತಾನು ತಂದಿದ್ದ ಇಲಿ ಹೊರತೆಗೆದು ಅರ್ಪಿಸುತ್ತಿದ್ದಂತೆ ಆ ಮೂಷಿಕ ಕಾಲ್ಕಿತ್ತಿದೆ.

ಚಿಕ್ಕಮಗಳೂರು: ಬೆಳೆ ಉಳಿಸುವಂತೆ ಕೋರಿ ಗಣೇಶನಿಗೆ ಜೀವಂತ ಇಲಿ ಸಮರ್ಪಿಸಿದ ಭಕ್ತ
ಬೆಳೆ ಉಳಿಸುವಂತೆ ಗಣೇಶನಿಗೆ ಜೀವಂತ ಇಲಿ ಸಮರ್ಪಿಸಿದ ಭಕ್ತ
TV9 Web
| Updated By: ganapathi bhat|

Updated on:Sep 10, 2021 | 5:57 PM

Share

ಚಿಕ್ಕಮಗಳೂರು: ತಾನು ಬೆಳೆದ ಬೆಳೆ ಬೆಳೆ ಉಳಿಸುವಂತೆ ಪ್ರಾರ್ಥಿಸಿ ರೈತರೊಬ್ಬರು ಗಣೇಶನಿಗೆ ಜೀವಂತ ಇಲಿ ಸಮರ್ಪಣೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ನಡೆದಿದೆ. ಕೃಷಿಯನ್ನು ಉಳಿಸುವಂತೆ ಕೇಳಿಕೊಂಡು ಗಣೇಶನಿಗೆ ರೈತ ಭಕ್ತರೊಬ್ಬರು ಇಲಿ ನೀಡಿದ್ದಾರೆ. ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ಭಕ್ತರೊಬ್ಬ ಗಣಪನಿಗೆ ಹೀಗೆ ಮೊರೆ ಹೋಗಿದ್ದಾರೆ. ಜಮೀನಿನಲ್ಲಿ ಇದ್ದ ಇಲಿಯನ್ನ ಹಿಡಿದು ತಂದು ಗಣೇಶನಿಗೆ ಕೊಟ್ಟಿದ್ದಾರೆ.

ಇಲಿಗಳು ಹೊಲದಲ್ಲಿ ಬೆಳೆಗಳನ್ನು ನಾಶ ಮಾಡುತ್ತಿದ್ದವು. ಹೀಗಾಗಿ ಇಲಿಗಳಿಂದ ಬೆಳೆ ಹಾನಿ ತಪ್ಪಿಸುವಂತೆ ಗಣೇಶನಿಗೆ ಮೊರೆ ಹೋಗಿದ್ದಾರೆ. ಮರ್ಕಲ್ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನಿಗೆ ಇಲಿ ನೀಡಿದ್ದಾರೆ. ಮರ್ಕಲ್ ಗ್ರಾಮದ ನಿತಿನ್ ಎಂಬವರು ಗಣೇಶನಿಗೆ ಮೂಷಿಕವನ್ನ ಅರ್ಪಿಸಿದ ಭಕ್ತರು. ಗಣೇಶನಿಗೆ ತಾನು ತಂದಿದ್ದ ಇಲಿ ಹೊರತೆಗೆದು ಅರ್ಪಿಸುತ್ತಿದ್ದಂತೆ ಆ ಮೂಷಿಕ ಕಾಲ್ಕಿತ್ತಿದೆ.

ಬೆಂಗಳೂರು: ದೊಡ್ಡಗಣೇಶ ದೇಗುಲದಲ್ಲಿ ವಿಶೇಷ ಪೂಜೆ ಕೊರೊನಾ ನಡುವೆ ಗಣೇಶ ಚತುರ್ಥಿ ಸಂಭ್ರಮ ಕರ್ನಾಟಕದ ಎಲ್ಲೆಡೆ ನಡೆಯುತ್ತಿದೆ. ದೊಡ್ಡ ಗಣೇಶ ದೇಗುಲದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಗಿದೆ. ಹಬ್ಬದ ನಿಮಿತ್ತ ದರ್ಶನ ಪಡೆಯಲು ಭಕ್ತ ಜನರು ಆಗಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಕೊವಿಡ್19 ಕಾರಣದಿಂದಾಗಿ ಗಣೇಶ ಚತುರ್ಥಿ ಆಚರಣೆಗೆ ಸರ್ಕಾರ ಷರತ್ತುಬದ್ಧ ಅನುಮತಿ ‌ನೀಡಿದೆ. ಹೀಗಾಗಿ ದೇವಾಲಯದಲ್ಲಿ ತೀರ್ಥ, ಪ್ರಸಾದ ವಿತರಣೆಯಿಲ್ಲ. ವಿಶೇಷ ಪೂಜೆಗೆ ಅವಕಾಶವಿಲ್ಲ. ಕೇವಲ ದೇವರ ದರ್ಶನ ಮಾತ್ರ ಸಿಗುತ್ತಿದೆ. ಮಾಸ್ಕ್ ಧರಿಸಿ ಸರತಿ ಸಾಲಿನಲ್ಲಿ ಆಗಮಿಸಿ ಜನ ದರ್ಶನ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Ganesha chaturthi 2021: ಗಣಪತಿ ಉತ್ಸವದ ಆಚರಣೆ ಆರಂಭವಾಗಿದ್ದು ಯಾವಾಗ? ಗಣೇಶೋತ್ಸವದ ಉದ್ದೇಶ ಏನು?

ಇದನ್ನೂ ಓದಿ: Ganesh Chaturthi 2021: 2 ಸಾವಿರ ನೀಡಿ ಗೌರಿ ಗಣೇಶ ಮೂರ್ತಿ ಖರೀದಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

Published On - 5:51 pm, Fri, 10 September 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ