Viral Video: ಕಚೋರಿ ತಿನ್ನಲು ಮಾರ್ಗಮಧ್ಯೆ ರೈಲು ನಿಲ್ಲಿಸಿದ ಚಾಲಕನ ವಿಡಿಯೋ ವೈರಲ್; ಐವರು ಅಮಾನತು

Indian Railways: ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಈ ವಿಡಿಯೋದಲ್ಲಿರುವ ಲೋಕೋ ಪೈಲಟ್, ಸಹಾಯಕ ಲೋಕೋ ಪೈಲಟ್, ಇಬ್ಬರು ಗೇಟ್‌ಮೆನ್ ಮತ್ತು ಸ್ಟೇಷನ್ ಮಾಸ್ಟರ್ ಸೇರಿದಂತೆ ಐವರನ್ನು ಅಮಾನತುಗೊಳಿಸಲಾಗಿದೆ.

Viral Video: ಕಚೋರಿ ತಿನ್ನಲು ಮಾರ್ಗಮಧ್ಯೆ ರೈಲು ನಿಲ್ಲಿಸಿದ ಚಾಲಕನ ವಿಡಿಯೋ ವೈರಲ್; ಐವರು ಅಮಾನತು
ರೈಲು ನಿಲ್ಲಿಸಿ ಕಚೋರಿ ಖರೀದಿಸಿದ ಚಾಲಕ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 24, 2022 | 4:02 PM

ಕಾರಿನಲ್ಲೋ, ಬಸ್​ನಲ್ಲೋ, ರೈಲಿನಲ್ಲೋ ಪ್ರಯಾಣಿಸುವಾಗ ಏನಾದರೂ ತಿನ್ನಬೇಕು ಎಂದು ಬಯಕೆಯಾಗುವುದು ಸಹಜ. ಅದಕ್ಕೆ ಸ್ಟಾಪ್ ಬಂದಾಗ ಇಳಿದು ಹೋಗಿ ನಿಮಗಿಷ್ಟವಾದ ತಿಂಡಿಗಳನ್ನು ಖರೀದಿಸಿ ತಂದು ತಿನ್ನುವ ಅಭ್ಯಾಸ ನಿಮಗಿರಬಹುದು. ಕಾರ್​ನಲ್ಲಾದರೆ ಎಲ್ಲಿ ಬೇಕೋ ಅಲ್ಲಿ ನಿಲ್ಲಿಸಿ ನಿಮಗೇನು ಬೇಕೋ ಅದನ್ನು ಖರೀದಿಸಬಹುದು. ಆದರೆ, ರೈಲು, ಬಸ್​ಗಳನ್ನೂ ನಿಮ್ಮ ಸ್ವಂತ ವಾಹನದಂತೆ ಬೇಕಾದ ಕಡೆ ನಿಲ್ಲಿಸಿ ತಿಂಡಿ ತೆಗೆದುಕೊಂಡು ಬರಲು ಹೋದರೆ ಬೇರೆ ಪ್ರಯಾಣಿಕರು ಸುಮ್ಮನಿರುತ್ತಾರಾ? ಇಲ್ಲೊಬ್ಬ ಲೋಕೋ ಪೈಲಟ್‌ಗೆ (Loco Pilot) ರೈಲಿನಲ್ಲಿ ಹೋಗುವಾಗ ಕಚೋರಿ ತಿನ್ನುವ ಬಯಕೆಯಾಗಿದೆ. ಹೀಗಾಗಿ, ಮಾರ್ಗಮಧ್ಯೆ ರೈಲನ್ನು ನಿಲ್ಲಿಸಿ, ಕಚೋರಿ (Kachori) ಮಾರುತ್ತಿದ್ದ ವ್ಯಕ್ತಿಯಿಂದ ಒಂದು ಪ್ಲೇಟ್ ಕಚೋರಿ ಖರೀದಿಸಿದ್ದಾನೆ.

ಲೋಕೋ ಪೈಲಟ್ ಆಗಿದ್ದ ಆತನಿಗೆ ಮಾರ್ಗಮಧ್ಯೆ ಕಚೋರಿ ತಿನ್ನಬೇಕೆಂಬ ಕಡುಬಯಕೆಯಾಗಿತ್ತು. ಹೀಗಾಗಿ, ಆತ ರೈಲ್ವೆ ಗೇಟ್ ಬಳಿ ಅಲ್ವಾರ್​​ನ ಫೇಮಸ್ ಕಚೋರಿಯನ್ನು ತಂದುಕೊಡಲು ಕಚೋರಿ ಮಾರುವ ವ್ಯಕ್ತಿಗೆ ಸೂಚಿಸಿದ್ದಾನೆ. ಅದರಂತೆ ರೈಲ್ವೆ ಹಳಿಯ ಮೇಲೆ ನಿಂತು ಕಾಯುತ್ತಿದ್ದ ವ್ಯಕ್ತಿ ಆ ಚಾಲಕನಿಗೆ ಕಚೋರಿಯ ಪಾರ್ಸಲ್ ಕೊಟ್ಟಿದ್ದಾನೆ.  ಆ ಚಾಲಕ ಮಾರ್ಗಮಧ್ಯೆ ರೈಲು ನಿಲ್ಲಿಸಿ, ಕಚೋರಿ ಕೊಳ್ಳುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಚಾಲಕ ಸೇರಿದಂತೆ ಐವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಈ ವಿಲಕ್ಷಣ ಘಟನೆಯ ವಿಡಿಯೋ ಇದೀಗ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಟ್ವಿಟ್ಟರ್ ಬಳಕೆದಾರರು ಈ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರೈಲ್ವೆ ಹಳಿಗಳ ಮಧ್ಯದಲ್ಲಿ ಮನುಷ್ಯನೊಬ್ಬ ನಿಂತಿದ್ದಾನೆ. ಕೆಲವೇ ಸೆಕೆಂಡುಗಳಲ್ಲಿ ಆತನ ಬಳಿ ಬಂದ ರೈಲು ಅಲ್ಲೇ ನಿಲ್ಲುತ್ತದೆ. ನಂತರ ಆ ರೈಲಿನ ಚಾಲಕ ಆ ವ್ಯಕ್ತಿಯಿಂದ ಕಚೋರಿಯ ಪ್ಲೇಟ್ ಪಡೆದುಕೊಂಡು, ನಂತರ ರೈಲನ್ನು ಮುಂದಕ್ಕೆ ಓಡಿಸುತ್ತಾನೆ.

ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಕೆಲವರು ಚಾಲಕನ ಬೆಂಬಲಕ್ಕೆ ನಿಂತರೆ, ಇತರರು ಈ ಘಟನೆ ಕಾನೂನುಬಾಹಿರವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ವಿಡಿಯೋ ಕ್ಲಿಪ್ ಆನ್‌ಲೈನ್‌ನಲ್ಲಿ ಕಾಡ್ಗಿಚ್ಚಿನಂತೆ ಹರಡಿದ ನಂತರ, ವಾಯುವ್ಯ ರೈಲ್ವೆ ಈ ವಿಡಿಯೋದಲ್ಲಿರುವ ಲೋಕೋ ಪೈಲಟ್, ಸಹಾಯಕ ಲೋಕೋ ಪೈಲಟ್, ಇಬ್ಬರು ಗೇಟ್‌ಮೆನ್ ಮತ್ತು ಸ್ಟೇಷನ್ ಮಾಸ್ಟರ್ ಸೇರಿದಂತೆ ಐವರನ್ನು ಅಮಾನತುಗೊಳಿಸಿದೆ.

ಲೊಕೊ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಮತ್ತು ಇಬ್ಬರು ಗೇಟ್‌ಮೆನ್ ಸೇರಿದಂತೆ ನಾಲ್ವರಿಗೆ ರೈಲ್ವೆ ಚಾರ್ಜ್ ಶೀಟ್‌ಗಳನ್ನು ನೀಡಿದೆ.

ಇದನ್ನೂ ಓದಿ: Viral Video: ಮೊಸರು ತರಲು ಮಾರ್ಗಮಧ್ಯೆ ರೈಲು ನಿಲ್ಲಿಸಿದ ಚಾಲಕ ಅಮಾನತು!

Shocking Video: ಕೆಳಗೆ ಬಿದ್ದ ಬಟ್ಟೆ ತರಲು ಮಗನನ್ನು ಸೀರೆಗೆ ಕಟ್ಟಿ 10ನೇ ಮಹಡಿಯಿಂದ ನೇತಾಡಿಸಿದ ತಾಯಿ!