ರಷ್ಯಾ-ಉಕ್ರೇನ್​ ಯುದ್ಧ: ದೇಶದ ಪರವಾಗಿ ನಿಂತು ಮಗಳಿಗೆ ಕಣ್ಣೀರಿನ ವಿದಾಯ ಹೇಳಿದ ತಂದೆ: ವಿಡಿಯೋ ವೈರಲ್​

ತಂದೆಯೊಬ್ಬ ತನ್ನ ಮಗಳನ್ನು ಸುರಕ್ಷಿತ ಜಾಗಕ್ಕೆ ಕಳುಹಿಸಿ ತಾನು  ದೇಶಕ್ಕಾಗಿ ಯುದ್ಧದಲ್ಲಿ ತೊಡಗಿಗೊಳ್ಳಲು ತಯಾರಿ ನಡೆಸಿದ್ದಾರೆ. ಮಗಳಿಗೆ ಬಿಳಿ ಟೋಪಿ ತೊಡಿಸಿ ಪ್ರೀತಿಯಿಂದ, ಆತಂಕದಿಂದಲೇ ಕಳುಹಿಸಿಕೊಡುತ್ತಿರುವ ವಿಡಿಯೋ ವೈರಲ್​ ಆಗಿದೆ.

ರಷ್ಯಾ-ಉಕ್ರೇನ್​ ಯುದ್ಧ: ದೇಶದ ಪರವಾಗಿ ನಿಂತು ಮಗಳಿಗೆ ಕಣ್ಣೀರಿನ ವಿದಾಯ ಹೇಳಿದ ತಂದೆ: ವಿಡಿಯೋ ವೈರಲ್​
ತಂದೆ-ಮಗಳು
Follow us
TV9 Web
| Updated By: Pavitra Bhat Jigalemane

Updated on:Feb 25, 2022 | 9:49 AM

ಉಕ್ರೇನ್ (Ukraine) ರಷ್ಯಾ (Russia) ನಡುವೆ ಯುದ್ಧ ಆರಂಭವಾಗಿದೆ. ಈಗಾಗಲೆ ರಷ್ಯಾಕ್ಕೆ ಸಮವಾಗಿ ದಾಳಿ ನೀಡುತ್ತಿರುವ ಉಕ್ರೇನ್​ನ  ನಾಗರಿಕರ ಪರಿಸ್ಥಿತಿ ಹದಗೆಟ್ಟಿದೆ. ಜನ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಬಾಂಬ್​, ಕ್ಷಿಪಣಿ ದಾಳಿಗಳ ಭಯದಿಂದ ಅಂಡರ್​ ಗ್ರೌಂಡ್​ನಲ್ಲಿ ಜನ ಅಡಗಿಕುಳಿತುಕೊಳ್ಳುತ್ತಿದ್ದಾರೆ.  ಉಕ್ರೇನ್​ನಲ್ಲಿ ಈಗಾಗಲೇ 137 ಜನರ ದುರ್ಮರಣವಾಗಿದೆ. ಎಲ್ಲೆಂದರಲ್ಲಿ ದಾಳಿಗಳು ನಡೆದು ಜನ ಛಿದ್ರ ಛಿದ್ರವಾಗಿ ಸಾವನ್ನಪ್ಪುತ್ತಿದ್ದಾರೆ. ಈ ರೀತಿಯ ಭಯ ಹುಟ್ಟಿಸುವ ದೃಶ್ಯಗಳು ಉಕ್ರೇನ್​ನಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ನಡುವೆ ಜೀವ ಉಳಸಿಕೊಳ್ಳಲು ಮಗಳನ್ನು ಸುರಕ್ಷಿತ ತಾಣಕ್ಕೆ ಕಳುಹಿಸುವ ತಂದೆ ಮಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿರುವ ಉಕ್ರೇನ್​ ಪರಿಸ್ಥತಿಯಿಂದ ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿ ಯುದ್ಧಕ್ಕೆ ಕಳುಹಿಸಲಾಗುತ್ತಿದೆ. ಈ ಸಂದರ್ಭದ ಕೆಲವು ದೃಶ್ಯಗಳು ನಿಜಕ್ಕೂ ಮನಕರಗುವಂತಿದೆ.

ಸದ್ಯ ವೈರಲ್​ ಆದ ವಿಡಿಯೋದಲ್ಲಿ ತಂದೆಯೊಬ್ಬ ತನ್ನ ಮಗಳನ್ನು ಸುರಕ್ಷಿತ ಜಾಗಕ್ಕೆ ಕಳುಹಿಸಿ ತಾನು  ದೇಶಕ್ಕಾಗಿ ಯುದ್ಧದಲ್ಲಿ ತೊಡಗಿಗೊಳ್ಳಲು ತಯಾರಿ ನಡೆಸಿದ್ದಾರೆ. ಮಗಳಿಗೆ ಬಿಳಿ ಟೋಪಿ ತೊಡಿಸಿ ಪ್ರೀತಿಯಿಂದ, ಕಣ್ಣೀರಿಡುತ್ತಾ ಕಳುಹಿಸಿಕೊಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಈ ಭಾವುಕ ವಿಡಿಯೋ ನೋಡಿ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಉಕ್ರೇನ್​ ಸ್ಥಿತಿ ಕಂಡು ಮರುಗಿದ್ದಾರೆ.

ವರದಿಯ ಪ್ರಕಾರ ಯುದ್ಧದಿಂದ ತತ್ತರಿಸಿದ ಉಕ್ರೇನ್​ ಜನತೆ ಹಣ, ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಉಕ್ರೇನ್​ ಸರ್ಕಾರ ಕೂಡ ದೇಶದ ಪರವಾಗಿ ಹೋರಾಡಲು ಸಿದ್ಧರಿರುವ ನಾಗರಿಕರಿಗೆ ಶಸ್ತ್ರಾಸ್ತ್ರ ನೀಡುವುದಾಗಿ ಹೇಳಿದೆ. ಹೀಗಾಗಿ ಉಕ್ರೇನ್​ನ ನೂರಾರು ನಾಗರಿಕರು ದೇಶಕ್ಕಾಗಿ ಮಡದಿ, ಮಕ್ಕಳು, ಕುಟುಂಬವನ್ನು ತೊರೆದು ಯುದ್ಧಕ್ಕೆ ತಯಾರಾಗಿದ್ದಾರೆ.

ಇದನ್ನೂ ಓದಿ:

Ukraine Crisis: ರಷ್ಯಾ ನಡೆಸಿದ ದಾಳಿಯಲ್ಲಿ ಉಕ್ರೇನ್​ನ 137 ಜನರ ಮರಣ; ರಷ್ಯಾ- ಉಕ್ರೇನ್ ಬೆಳವಣಿಗೆಯ ಮುಖ್ಯಾಂಶಗಳು ಇಲ್ಲಿವೆ

Published On - 9:45 am, Fri, 25 February 22