Viral Video: ಮೊಸರು ತರಲು ಮಾರ್ಗಮಧ್ಯೆ ರೈಲು ನಿಲ್ಲಿಸಿದ ಚಾಲಕ ಅಮಾನತು!
ಲಾಹೋರ್‌ನ ರೈಲ್ವೇ ನಿಲ್ದಾಣಕ್ಕೂ ಮೊದಲು ಮೊಸರು ಖರೀದಿಸಲು ಪಾಕಿಸ್ತಾನದ ರೈಲು ಚಾಲಕ ಮತ್ತು ಅವರ ಸಹಾಯಕ ರೈಲನ್ನು ನಿಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಲಾಹೋರ್: ಸಾಮಾನ್ಯವಾಗಿ ಬಸ್, ಲಾರಿ ಡ್ರೈವರ್ಗಳು ಊಟಕ್ಕೆಂದು ತಮ್ಮ ಖಾಯಂ ಹೋಟೆಲ್ ಬಳಿ ವಾಹನ ನಿಲ್ಲಿಸಿ ಪಾರ್ಸಲ್ ಕಟ್ಟಿಸಿಕೊಳ್ಳುತ್ತಾರೆ. ಬಸ್ ಚಾಲಕರು ಈ ರೀತಿ ಕೆಲಕಾಲ ಬಸ್ ನಿಲ್ಲಿಸಿದರೂ ಅದರ ಪ್ರಯಾಣಿಕರು ಹೆಚ್ಚೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ರೈಲು ಚಾಲಕ ಈ ರೀತಿ ತನಗೆ ಬೇಕಾದ ಕಡೆ ರೈಲು ನಿಲ್ಲಿಸಿದರೆ ಪ್ರಯಾಣಿಕರು ಸುಮ್ಮನಿರಲು ಸಾಧ್ಯವೇ? ರೈಲು ನಿಗದಿತ ನಿಲ್ದಾಣವನ್ನು ಹೊರತುಪಡಿಸಿ ಬೇರೆಡೆ ನಿಲ್ಲುವಂತಿಲ್ಲ. ಯಾರಾದರೂ ಚೈನ್ ಎಳೆದು ರೈಲನ್ನು ತುರ್ತಾಗಿ ನಿಲ್ಲಿಸಿದರೂ ಅದಕ್ಕೆ ಅಷ್ಟೇ ಗಂಭೀರವಾದ ಕಾರಣವಿಲ್ಲದಿದ್ದರೆ ಅವರಿಗೆ ದಂಡ ವಿಧಿಸಬಹುದು, ಜೈಲಿಗೂ ಹಾಕಬಹುದು.
ಲಾಹೋರ್‌ನ ರೈಲ್ವೇ ನಿಲ್ದಾಣಕ್ಕೂ ಮೊದಲು ಮೊಸರು ಖರೀದಿಸಲು ಪಾಕಿಸ್ತಾನದ ರೈಲು ಚಾಲಕ ಮತ್ತು ಅವರ ಸಹಾಯಕ ರೈಲನ್ನು ನಿಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ರೈಲು ಚಾಲಕನ ಸಹಾಯಕನು ಮೊಸರು ಪ್ಯಾಕೆಟ್ ಹಿಡಿದು ರೈಲಿನತ್ತ ವಾಪಾಸ್ ಆಗುವುದನ್ನು ನೋಡಬಹುದು. ಈ ಘಟನೆಯು ಪಾಕಿಸ್ತಾನದಲ್ಲಿ ರೈಲ್ವೆಯ ಸುರಕ್ಷತೆ ಬಗ್ಗೆ ಪ್ರಶ್ನೆಯೇಳುವಂತೆ ಮಾಡಿದೆ. ಪಾಕಿಸ್ತಾನದಲ್ಲಿ ಚಾಲಕರ ನಿರ್ಲಕ್ಷ್ಯದಿಂದ ರೈಲು ಅಪಘಾತಗಳು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೀಗೆ ಮನಬಂದಂತೆ ರೈಲನ್ನು ನಿಲ್ಲಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಹೀಗೆ ರೈಲನ್ನು ನಿಲ್ಲಿಸಿ, ಮೊಸರು ತಂದ ಇಬ್ಬರು ರೈಲ್ವೆ ಸಿಬ್ಬಂದಿಯನ್ನು ರಾಣಾ ಮೊಹಮ್ಮದ್ ಶೆಹಜಾದ್ ಮತ್ತು ಆತನ ಸಹಾಯಕ ಇಫ್ತಿಕರ್ ಹುಸೇನ್ ಎಂದು ಗುರುತಿಸಲಾಗಿದೆ. ವಿಡಿಯೋ ವೈರಲ್ ಆದ ನಂತರ ರೈಲ್ವೆ ಸಚಿವ ಅಜಂ ಖಾನ್ ಸ್ವಾತಿ ಆ ಚಾಲಕ ಮತ್ತು ಆತನ ಸಹಾಯಕನನ್ನು ಅಮಾನತುಗೊಳಿಸಿದ್ದಾರೆ.
#WATCH| Video shows A #Pakistan Railways Driver stopped the train out of course in #Lahore to buy some yogurt.
A video of an assistant driver of a train stopping the locomotive to fetch yogurt has gone viral leading to his suspension on the directives of Pak Railway Minister. pic.twitter.com/DdCoVJ2okz
— Subodh Kumar (@kumarsubodh_) December 7, 2021
‘ನೀವು ರೈಲನ್ನು ಹಳಿಗಳ ಮಧ್ಯದಲ್ಲಿ ಮನಬಂದಂತೆ ನಿಲ್ಲಿಸಿದಾಗ ಅದರಿಂದ ಸುರಕ್ಷತೆಯ ಸಮಸ್ಯೆಯಾಗುತ್ತದೆ. ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ಸುರಕ್ಷತೆಗೆ ಧಕ್ಕೆ ತರುವ ಯಾವುದನ್ನೂ ನಾವು ಸಹಿಸುವುದಿಲ್ಲ ಎಂದು ಪಾಕಿಸ್ತಾನದ ರೈಲ್ವೇ ಸಚಿವಾಲಯದ ವಕ್ತಾರ ಸೈಯದ್ ಇಜಾಜ್-ಉಲ್-ಹಸನ್ ಶಾ ಎಚ್ಚರಿಕೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ನಾನು ಸಹಿಸುವುದಿಲ್ಲ ಮತ್ತು ರಾಷ್ಟ್ರೀಯ ಸ್ವತ್ತುಗಳನ್ನು ವೈಯಕ್ತಿಕ ಬಳಕೆಗೆ ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನದ ರೈಲ್ವೆ ಸಚಿವರು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Viral Video: ಮದುವೆ ಮಂಟಪಕ್ಕೆ ನುಗ್ಗಿ ಪ್ರೇಯಸಿಯ ಹಣೆಗೆ ಸಿಂಧೂರವಿಟ್ಟ ಯುವಕ; ತಾಳಿ ಕಟ್ಟಲು ರೆಡಿಯಾಗಿದ್ದ ವರ ಶಾಕ್!
Shocking News: ಹೋಂ ವರ್ಕ್ ಮಾಡದ ಮಗನ ಕೈ-ಕಾಲು ಕಟ್ಟಿ ಫ್ಯಾನ್ಗೆ ನೇತು ಹಾಕಿದ ಅಪ್ಪ!