Viral Video: ಲೆಹೆಂಗಾ ಧರಿಸಿ ಬಿಂದಾಸ್ ಆಗಿ ಭಾಂಗ್ರಾ ಡ್ಯಾನ್ಸ್ ಮಾಡಿದ ವಧು
ವಧುವೊಬ್ಬಳು ಗ್ರ್ಯಾಂಡ್ ಡ್ರೆಸ್ ಧರಿಸಿ ಭಾಂಗ್ರಾ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ವಧುವಿನ ಬಿಂದಾಸ್ ಡ್ಯಾನ್ಸ್ನ ವಿಡಿಯೋ ವೈರಲ್ ಆಗಿದೆ.
ಮದುವೆ(Wedding) ಎಂದರೆ ಪ್ರತೀ ವ್ಯಕ್ತಿಗೆ ಒಂದು ವಿಶೇಷ ಸಂದರ್ಭ. ಒಂದಷ್ಟು ತಮಾಷೆ, ಒಂದಷ್ಟು ಖುಷಿ, ಒಂದಷ್ಟು ಸಂಭ್ರಮ, ಹಾಡು, ನೃತ್ಯ ಹೀಗೆ ಒಂದಲ್ಲ ಒಂದು ರೀತಿಯ ಅಪರೂಪದ ಕ್ಷಣಗಳು ಒಟ್ಟುಗೂಡಿರುತ್ತವೆ. ಭಾರತೀಯ ಮದುವೆಗಳಲ್ಲಿ ಸಂಪ್ರದಾಯಗಳೊಂದಿಗೆ ಸಂಭ್ರಮ ಮನೆಮಾಡಿರುತ್ತದೆ. ವಧು ವರರನ್ನು ವಿಶೇಷವಾಗಿ ಮಂಟಪಕ್ಕೆ ಕರೆದುಕೊಂಡು ಬರುವುದು ಇತ್ತೀಚಿನ ಟ್ರೆಂಡ್ ಆಗಿದೆ. ಇದರ ನಡುವೆ ವಧುವೊಬ್ಬಳು ಗ್ರ್ಯಾಂಡ್ ಡ್ರೆಸ್ ಧರಿಸಿ ಭಾಂಗ್ರಾ ಡ್ಯಾನ್ಸ್(Bhangra Dance) ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ವಧುವಿನ ಬಿಂದಾಸ್ ಡ್ಯಾನ್ಸ್ನ ವಿಡಿಯೋ ವೈರಲ್ ಆಗಿದೆ. ಮೇಕಪ್ ಆರ್ಟಿಸ್ಟ್(Makeup Artist) ಒಬ್ಬರು ಫೆ.15ರಂದು ವಿಡಿಯೋ ಹಂಚಿಕೊಂಡಿದ್ದು 2.5 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಪಡೆದಿದ್ದು ನೆಟ್ಟಗರ ಮನಗೆದ್ದಿದೆ.
View this post on Instagram
ವಿಡಿಯೋದಲ್ಲಿ ಕ್ರೀಮ್ ಕಲರ್ ಲೆಹೆಂಗಾ ಧರಿಸಿ, ಒಡವೆಗಳನ್ನು ಧರಿಸಿ, ಮದುವಣಗಿತ್ತಿಯಾಗಿ ತಯಾರಾಗಿ ಬಂದ ವಧು ಮದುವೆ ಮಂಟಪಕ್ಕೆ ಬರುವ ವೇಳೆ ಬಿಂದಾಸ್ ಆಗಿ ಭಾಂಗ್ರಾ ನೃತ್ಯ ಮಾಡಿದ್ದಾರೆ. ವಧುವನ್ನು ಆಯುಶಿ ಎಂದು ಗುರುತಿಸಲಾಗಿದ್ದು, ಆಕೆಯೂ ಕೂಡ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಆಯುಶೀ ಕೂಡ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ;
ನಾಯಿಯನ್ನು ರಕ್ಷಿಸಲು ಹೋದ ವ್ಯಕ್ತಿಗೆ ಜಾಡಿಸಿ ಒದ್ದ ಕಾಂಗರೂ: ವಿಡಿಯೋ ವೈರಲ್