Viral Video: ಬ್ಯಾಗ್ ಕದಿಯಲು ಬಂದ ಕಳ್ಳರಿಗೆ ಮಣ್ಣು ಮುಕ್ಕಿಸಿದ ಯುವತಿ; ಈ ವಿಡಿಯೋ ನೋಡಿದರೆ ನಗದಿರಲು ಸಾಧ್ಯವೇ ಇಲ್ಲ!

ಬ್ಯಾಗ್ ಕದಿಯಲು ಹೋದ ಕಳ್ಳರ ಸ್ಕೂಟರ್ ಅನ್ನೇ ಕದ್ದ ಯುವತಿಯ ಕೆಲಸವನ್ನು ನೋಡಿ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಇದರಲ್ಲಿ ನಿಜವಾದ ಕಳ್ಳರು ಯಾರು? ಆ ಯುವಕರಾ ಅಥವಾ ಆ ಯುವತಿಯಾ? ಎಂದು ಹಲವರು ಕಮೆಂಟ್ ಮಾಡಿದ್ದಾರೆ.

Viral Video: ಬ್ಯಾಗ್ ಕದಿಯಲು ಬಂದ ಕಳ್ಳರಿಗೆ ಮಣ್ಣು ಮುಕ್ಕಿಸಿದ ಯುವತಿ; ಈ ವಿಡಿಯೋ ನೋಡಿದರೆ ನಗದಿರಲು ಸಾಧ್ಯವೇ ಇಲ್ಲ!
ಯುವತಿಯ ವಿಡಿಯೋ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 25, 2022 | 7:33 PM

ರಸ್ತೆಯಲ್ಲಿ ಒಬ್ಬರೇ ನಡೆದುಕೊಂಡು ಹೋಗುವಾಗ ಯಾರಾದರೂ ಕಳ್ಳ ಅಡ್ಡ ಹಾಕಿ, ಕೈಯಲ್ಲಿರುವ ಬ್ಯಾಗ್, ಜೇಬಿನಲ್ಲಿರುವ ಹಣ, ಮೊಬೈಲ್ ಕಿತ್ತುಕೊಳ್ಳಲು ನೋಡಿದರೆ ಏನು ಮಾಡುತ್ತೀರಾ? ಒಂದುಕ್ಷಣ ಎಂಥವರಿಗಾದರೂ ಕಂಗಾಲಾಗುವುದಿಲ್ಲವೇ? ಆದರೆ, ಇಲ್ಲೊಬ್ಬಳು ಯುವತಿ ತನ್ನ ಬ್ಯಾಗ್ ಕಸಿದುಕೊಳ್ಳಲು ಬಂದ ಕಳ್ಳನಿಗೆ ಸರಿಯಾಗೇ ಮಣ್ಣು ಮುಕ್ಕಿಸಿದ್ದಾಳೆ. ಆ ಯುವತಿ ಮಾಡಿದ ಕೆಲಸ ನೋಡಿ ಕಳ್ಳರಿಬ್ಬರು ಕಂಗಾಲಾಗಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಈ ವಿಡಿಯೋ ಭಾರೀ ವೈರಲ್ (Viral Video) ಆಗಿದ್ದು, ಈ ವಿಡಿಯೋ ನೋಡಿದರೆ ನಿಮಗೂ ನಗು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ ವೈರಲ್ ಆಗಿರುವ ವಿಡಿಯೋದಲ್ಲಿ ಅಂಥದ್ದೇನಿದೆ?

ಎರಡು ದಿನಗಳ ಹಿಂದೆ ‘nation.video’ ಎಂಬ ಪುಟದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವೊಂದನ್ನು ಅಪ್‌ಲೋಡ್ ಮಾಡಲಾಗಿದೆ. ಇದು ಈಗ 28,000ಕ್ಕೂ ಹೆಚ್ಚು ಲೈಕ್‌ಗಳೊಂದಿಗೆ ವೈರಲ್ ಆಗಿದೆ. ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿದ ಇಬ್ಬರು ಕಳ್ಳರು ಸ್ಕೂಟರ್‌ನಲ್ಲಿ ಬಂದು ಆ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಬಳಿ ಸ್ಕೂಟರ್ ನಿಲ್ಲಿಸುತ್ತಾರೆ. ಆ ವ್ಯಕ್ತಿಯ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸುವಷ್ಟರಲ್ಲಿ ಆ ಮೊಬೈಲ್​ಗೆ ಫೋನ್ ಬರುತ್ತದೆ. ಹೀಗಾಗಿ, ಆ ವ್ಯಕ್ತಿ ಫೋನ್​ನಲ್ಲಿ ಮತನಾಡುತ್ತಾ ಹೊರಟೇ ಹೋಗುತ್ತಾನೆ. ಇದರಿಂದ ಕಳ್ಳರಿಗೆ ಮೊಬೈಲ್ ಕದಿಯಲು ಆಗುವುದಿಲ್ಲ.

View this post on Instagram

A post shared by Video Nation (@nation.video)

ಅಷ್ಟರಲ್ಲೇ ಅದೇ ಮಾರ್ಗದಲ್ಲಿ ಯುವತಿಯೊಬ್ಬಳು ಮೊಬೈಲ್ ನೋಡುತ್ತಾ, ಹೆಗಲಿಗೆ ಬ್ಯಾಗ್ ಹಾಕಿಕೊಂಡು ಬರುತ್ತಿರುತ್ತಾಳೆ. ಆಕೆಯ ಬ್ಯಾಗ್ ಕದಿಯಬೇಕೆಂದು ಪ್ಲಾನ್ ಮಾಡುವ ಕಳ್ಳರು ಸ್ಕೂಟರ್ ನಿಲ್ಲಿಸಿ ಆಕೆ ಮುಂದೆ ಹೋಗಲು ಕಾಯುತ್ತಾರೆ. ಆಕೆ ಸ್ಕೂಟರ್ ದಾಟಿ ಹೋಗುತ್ತಿದ್ದಂತೆ ಕಳ್ಳರಲ್ಲಿ ಒಬ್ಬ ಆ ಹುಡುಗಿಯ ಬ್ಯಾಗ್ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ, ಆ ಯುವತಿ ಬ್ಯಾಗ್ ಬಿಡದೆ ಕಳ್ಳನೊಂದಿಗೆ ಜಗಳವಾಡುತ್ತಾಳೆ. ಇದರಿಂದ ಆ ಕಳ್ಳನ ಸಹಾಯಕ್ಕೆ ಬಂದ ಇನ್ನೊಬ್ಬ ಕಳ್ಳನೂ ಸೇರಿ ಆಕೆಯಿಂದ ಬ್ಯಾಗ್ ಕಸಿದುಕೊಳ್ಳುತ್ತಾರೆ. ಬ್ಯಾಗ್ ಕಸಿದುಕೊಳ್ಳಲು ಹೋಗಿ ರಸ್ತೆ ಮೇಲೆ ಬಿದ್ದ ಕಳ್ಳರು ಮೇಲೇಳುವಷ್ಟರಲ್ಲಿ ಆ ಯುವತಿ ಆ ಕಳ್ಳರು ತಂದಿದ್ದ ಸ್ಕೂಟರ್ ಓಡಿಸಿಕೊಂಡು ಅಲ್ಲಿಂದ ಪರಾರಿಯಾಗುತ್ತಾಳೆ.

ಬ್ಯಾಗ್ ಕದಿಯಲು ಹೋದ ಕಳ್ಳರ ಸ್ಕೂಟರ್ ಅನ್ನೇ ಕದ್ದ ಯುವತಿಯ ಕೆಲಸವನ್ನು ನೋಡಿ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಇದರಲ್ಲಿ ನಿಜವಾದ ಕಳ್ಳರು ಯಾರು? ಆ ಯುವಕರಾ ಅಥವಾ ಆ ಯುವತಿಯಾ? ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: 7 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೀದಿ ನಾಯಿಗೆ ಆರತಿ ಎತ್ತಿ ಸ್ವಾಗತ!; ನೀವೂ ಈ ವಿಡಿಯೋ ಕಣ್ತುಂಬಿಕೊಳ್ಳಿ

Viral Video: ಕಚೋರಿ ತಿನ್ನಲು ಮಾರ್ಗಮಧ್ಯೆ ರೈಲು ನಿಲ್ಲಿಸಿದ ಚಾಲಕನ ವಿಡಿಯೋ ವೈರಲ್; ಐವರು ಅಮಾನತು