ಉಕ್ರೇನ್- ರಷ್ಯಾ ಧ್ವಜ ಹೊದ್ದು ನಿಂತ ಜೋಡಿಯ ಪೋಟೋ ವೈರಲ್: ಇಲ್ಲಿದೆ ಫೋಟೋ ಹಿಂದಿನ ಅಸಲಿ ಕಹಾನಿ
ಯುವಕ ಮತ್ತು ಯುವತಿ ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳ ಧ್ವಜಗಳನ್ನು ಹೊದ್ದು ಜೊತೆಯಾಗಿ ನಿಂತ ಫೋಟೋ ವೈರಲ್ ಆಗಿದೆ. ಹಲವರು ಈ ಫೋಟೋವನ್ನು ಹಂಚಿಕೊಂಡು ಯುದ್ಧವನ್ನು ತಡೆದು ಸಾಮರಸ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಂದೇಶ ಸಾರಿದ್ದಾರೆ.
ಉಕ್ರೇನ್-ರಷ್ಯಾ (Ukraine-Russia War) ಯುದ್ಧ ಆರಂಭವಾದ ಮೇಲೆ ಹಲವು ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಉಕ್ರೇನ್ ಪರಿಸ್ಥಿತಿಯನ್ನು ಎತ್ತಿತೋರಿಸುವ ನಿದರ್ಶನದ ಫೋಟೋಗಳೂ ಕೂಡ ಸಾಕಷ್ಟು ವೈರಲ್ ಆಗಿದೆ. ಯುದ್ಧ ನಿಲ್ಲಿಸಿ ಎನ್ನುವ ಪ್ಲಾಗ್ಗಳನ್ನು ಹಿಡಿದ ಫೋಟೋಗಳು ಹರಿದಾಡುತ್ತಿವೆ. ಆದರೆ ಯುವಕ ಮತ್ತು ಯುವತಿ ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳ ಧ್ವಜ (Flag)ಗಳನ್ನು ಹೊದ್ದು ಜೊತೆಯಾಗಿ ನಿಂತ ಫೋಟೋ ವೈರಲ್ ಆಗಿದೆ. ಹಲವರು ಈ ಫೋಟೋವನ್ನು ಹಂಚಿಕೊಂಡು ಯುದ್ಧವನ್ನು ತಡೆದು ಸಾಮರಸ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಂದೇಶ ಸಾರಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ (Shashi Tharoor) ಕೂಡ ಈ ಫೋಟೋವನ್ನು ಈ ಹಂಚಿಕೊಂಡು ಯುವತಿ ರಷ್ಯಾ ಧ್ವಜವನ್ನು ಹಾಗೂ ಯುವಕ ಉಕ್ರೇನ್ ಧ್ವಜವನ್ನು ಹೊದ್ದುಕೊಂಡಿದ್ದಾರೆ. ಪ್ರೀತಿ, ಶಾಂತಿಯನ್ನು ಎಲ್ಲೆಡೆ ಹಂಚಿ ಒಗ್ಗಟ್ಟಿನ ಮಂತ್ರವನ್ನು ಸಾರುತ್ತಿದೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಟೋ ಹಲವು ಆಯಾಮಗಳನ್ನು ಪಡೆದು ವೈರಲ್ ಆಗುತ್ತಿದೆ.
Poignant: A man draped in the Ukrainian flag embraces a woman wearing the Russian flag. Let us hope love, peace & co-existence triumph over war & conflict. pic.twitter.com/WTwSOBgIFK
— Shashi Tharoor (@ShashiTharoor) February 25, 2022
ಆದರೆ ಈ ಫೋಟೋದ ಅಸಲಿಯತ್ತೇ ಬೇರೆ ಇದೆ. ಹೌದು ಈ ಫೋಟೋ ಈಗಿನದ್ದಲ್ಲ. ಇದು 3 ವರ್ಷ ಹಿಂದಿನ ಫೋಟೋವಾಗಿದೆ. ಈ ಫೋಟೋವನ್ನು ಮೊದಲು 2019 ರಲ್ಲಿ ಸೆರೆಹಿಡಿಯಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಇದು ಪೋಲೆಂಡ್‌ನಲ್ಲಿ ಬೆಲರೂಸಿಯನ್ ರಾಪರ್ ಮ್ಯಾಕ್ಸ್ ಕೊರ್ಜ್ ಅವರ ಸಂಗೀತ ಕಚೇರಿಗೆ ಹಾಜರಾಗುತ್ತಿದ್ದ ಜೂಲಿಯಾನಾ ಕುಜ್ನೆಟ್ಸೊವಾ ಅವರು ತಮ್ಮ ಮದುವೆಯಾಗುವ ವರನೊಂದಿಗೆ ತೆಗೆಸಿಕೊಂಡ ಫೋಟೋ. ಈ ಯುವಕ ಉಕ್ರೇನ್ನ ಮೂಲದವನು ಎನ್ನಲಾಗಿದೆ.
ಈ ಕುರಿತು ಜೂಲಿಯಾನಾ ವಾಷಿಂಗ್ಟನ್ ಪೋಸ್ಟ್ನೊಂದಿಗೆ ಮಾತನಾಡಿ, ಇದು ಯಾವುದೇ ರಾಜಕೀಯ ಉದ್ದೇಶದಿಂದ ತೆಗೆಸಿಕೊಂಡ ಫೋಟೋವಲ್ಲ. ಆದರೆ ಈ ಫೋಟೋ ವೈರಲ್ ಆಗುತ್ತಿದ್ದಂತೆ ಹಲವು ಕೆಟ್ಟ ಮತ್ತು ಒಳ್ಳೆಯ ಕಾಮೆಂಟ್ಗಳನ್ನು ಎದುರಿಸಿದ್ದೇನೆ. ಏನೇ ಆದರೂ ಆ ಫೋಟೋ ಪ್ರೀತಿಯನ್ನು ಹಂಚುವುದನ್ನೇ ಸಂಕೇತಿಸುತ್ತದೆ ಎಂದು ಹೇಳಿದ್ದಾರೆ. ಫೋಟೋ ಜಗತ್ತಿನಾದ್ಯಂತ ಸಾವಿರಾರು ಬಾರಿ ಹಂಚಿಕೊಳ್ಳಲಾಗಿದೆ. ಆದರೆ ಫೋಟೋ ಈಗಿನದ್ದಲ್ಲ ಎನ್ನುವುದಕ್ಕೆ ಸ್ಪಷ್ಟ ಉತ್ತರವನ್ನು ಯುವತಿಯೇ ನೀಡಿದ್ದಾಳೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:
ಆಹಾರ ಪದಾರ್ಥಗಳ ರಫ್ತಿನಲ್ಲಿ ಟಾಪ್ 10 ಪಟ್ಟಿಯಲ್ಲಿರುವ ಪುಟ್ಟ ರಾಷ್ಟ್ರ ಉಕ್ರೇನ್