ಉಕ್ರೇನ್ ಸೇನೆ ಸೇರಲು ಸರತಿ ಸಾಲಿನಲ್ಲಿ ನಿಂತ 80 ವರ್ಷದ ವೃದ್ಧ: ಫೋಟೋ ವೈರಲ್
ದೇಶ ಉಳಸಿಕೊಳ್ಳಲು ಉಕ್ರೇನ್ ಸರ್ಕಾರ ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿ ಯುದ್ಧಕ್ಕೆ ಕಳುಹಿಸುತ್ತಿದೆ. ಈ ನಡುವೆ 80 ವರ್ಷದ ವೃದ್ಧರೋಬ್ಬರು ಬ್ಯಾಗ್ ಹಿಡಿದು ಸೇನೆ ಸೇರಲು ಹೋದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಷ್ಯಾ (Russia) ಸೇನೆಯ ದಾಳಿಗೆ ನಲುಗಿದ ಉಕ್ರೇನ್ (Ukraine) ಸ್ಥಿತಿ ಹೇಳತೀರದಾಗಿದೆ. ನಾಗರಿಕರ, ಸೈನಿಕರ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಈಗಾಗಲೇ ಉಕ್ರೇನ್ ರಾಜಧಾನಿಯನ್ನು ವಶಪಡಿಸಿಕೊಳ್ಳುವತ್ತ ರಷ್ಯಾ ಸೇನೆ ಮುನ್ನುಗ್ಗುತ್ತಿದೆ. ಈ ನಡುವೆ ಒಂದಷ್ಟು ಮನಕಲಕುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಸಿಕೊಳ್ಳುತ್ತಿದ್ದು, ಉಕ್ರೇನ್ನ ಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ. ಈಗಾಗಲೇ ಪ್ರೀತಿ ಪಾತ್ರರನ್ನು ಕಳೆದುಕೊಂಡ, ಕಳೆದುಕೊಳ್ಳವ ಆತಂಕದಲ್ಲಿರುವ ಭಯಹುಟ್ಟಿಸುವ ಫೋಟೋಗಳು, ಯುದ್ಧಕ್ಕೆ ಹೋಗುವ ಮುಂಚೆ ಮಗಳನ್ನು ಮುದ್ದಾಡಿದ ತಂದೆಯ ವಿಡಿಯೋ, ಅನ್ನ, ನೀರಿಲ್ಲದೆ ಹಸಿವೆಯಿಂದ ಬಳಲುತ್ತಿರುವ ಜನರ ಫೋಟೊಗಳು ವೈರಲ್ ಆಗಿವೆ. ದೇಶ ಉಳಸಿಕೊಳ್ಳಲು ಉಕ್ರೇನ್ ಸರ್ಕಾರ ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿ ಯುದ್ಧಕ್ಕೆ ಕಳುಹಿಸತ್ತಿದೆ. ಈ ನಡುವೆ 80 ವರ್ಷದ ವೃದ್ಧರೋಬ್ಬರು ಬ್ಯಾಗ್ ಹಿಡಿದು ಸೇನೆ ಸೇರಲು ಸರತಿ ಸಾಲಿನಲ್ಲಿ ನಿಂತ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Someone posted a photo of this 80-year-old who showed up to join the army, carrying with him a small case with 2 t-shirts, a pair of extra pants, a toothbrush and a few sandwiches for lunch. He said he was doing it for his grandkids. pic.twitter.com/bemD24h6Ae
— Kateryna Yushchenko (@KatyaYushchenko) February 24, 2022
ಟ್ವಿಟರ್ನಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದೆ. 80 ವೃರ್ಷದ ವೃದ್ಧ ಕೈಲ್ಲೊಂದು ಬ್ಯಾಗ್ ಹಿಡಿದು ಸೇನೆಗೆ ಸೇರಲು ಸರತಿ ಸಾಲಿನಲ್ಲಿ ನಿಂತಿರುವುದನ್ನು ಫೋಟೋದಲ್ಲಿ ಕಾಣಬಹುದು. ಈ ಬಗ್ಗೆ ಇಂಡಿಯಾ ಟುಡೆ ಮಾಹಿತಿ ಹಂಚಿಕೊಂಡಿದೆ, ವೃದ್ಧನ ಬ್ಯಾಗ್ನಲ್ಲಿ 2 ಟೀ ಶರ್ಟ್, ಪ್ಯಾಂಟ್ಸ್, ಟೂತ್ಬ್ರಶ್, ಹಾಗೂ ಸ್ವಲ್ಪ ತಿಂಡಿಯಿದೆ. ನೀವೇಕೆ ಬಂದಿದ್ದೀರಿ ಎಂದರೆ, ನನ್ನ ಮೊಮ್ಮಕ್ಕಳನ್ನು ಉಳಿಸಿಕೊಳ್ಳಬೇಕು ಅದಕ್ಕಾಗಿಯೇ ಯುದ್ಧಮಾಡಬೇಕು ಎಂದಿದ್ದಾರೆ ಎಂದು ವರದಿ ತಿಳಿಸಿದೆ. ಸದ್ಯ ಈ ಫೋಟೋ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳಿಸಿದ್ದು, ನೆಟ್ಟಿಗರು ವೃದ್ಧನ ಧೈರ್ಯವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:
ರಷ್ಯಾ-ಉಕ್ರೇನ್ ಯುದ್ಧ: ದೇಶದ ಪರವಾಗಿ ನಿಂತು ಮಗಳಿಗೆ ಕಣ್ಣೀರಿನ ವಿದಾಯ ಹೇಳಿದ ತಂದೆ: ವಿಡಿಯೋ ವೈರಲ್
Published On - 9:45 am, Sat, 26 February 22