AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: 35 ಸಾವಿರ ರೂಗೆ ಬೆಂಗಳೂರಿನಲ್ಲಿ ಆರಾಮ ಜೀವನ ನಡೆಸ್ಬಹುದು; ತಿಂಗಳ ಖರ್ಚು ವೆಚ್ಚ ಬಿಚ್ಚಿಟ್ಟ ಸಾಫ್ಟ್‌ವೇರ್‌ ಇಂಜಿನಿಯರ್

ಇಂದಿನ ದುಬಾರಿ ದುನಿಯಾದಲ್ಲಿ ಎಷ್ಟೇ ದುಡಿದರೂ ಜೀವನ ನಿರ್ವಹಣೆ ಹಾಗೂ ಉಳಿತಾಯ ಮಾಡುವುದು ಕಷ್ಟಕರ. ನೀವೇನಾದ್ರೂ ಈ ಬೆಂಗಳೂರಿನಲ್ಲಿ ಇದ್ದು ಬಿಟ್ಟರೆ ಉಳಿತಾಯ ಬಿಡಿ ತಿಂಗಳ ಕೊನೆಯಲ್ಲಿ ಕೈಯಲ್ಲಿ ದುಡ್ಡೇ ಉಳಿಯಲ್ಲ. ಆದರೆ, 35,000 ರೂ ಯೋಗ್ಯ ಜೀವನಶೈಲಿಯನ್ನು ನಿಭಾಯಿಸಬಹುದಂತೆ. ಹೌದು, ಬೆಂಗಳೂರಿನ ಅಮೆಜಾನ್ ಇಂಜಿನಿಯರ್ ತಮ್ಮ ಖರ್ಚು ವೆಚ್ಚಗಳನ್ನು ವಿವರಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: 35 ಸಾವಿರ ರೂಗೆ ಬೆಂಗಳೂರಿನಲ್ಲಿ ಆರಾಮ ಜೀವನ ನಡೆಸ್ಬಹುದು; ತಿಂಗಳ ಖರ್ಚು ವೆಚ್ಚ ಬಿಚ್ಚಿಟ್ಟ ಸಾಫ್ಟ್‌ವೇರ್‌ ಇಂಜಿನಿಯರ್
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: Jun 01, 2026 | 11:52 AM

Share

ಬೆಂಗಳೂರು, ಜೂನ್ 01: ಬೆಂಗ್ಳೂರಿನಂತಹ (Bengaluru) ದೊಡ್ಡ ದೊಡ್ಡ ನಗರಗಳಲ್ಲಿ ಜನ ಎಷ್ಟೇ ದುಡಿದ್ರೂ ಹಣ ಸಾಲ್ತಿಲ್ಲ, ದುಡಿದ ಎಲ್ಲಾ ಹಣ ಬಾಡಿಗೆ ಕಟ್ಟೋಕೆ, ತಿಂಗಳ ಖರ್ಚಿಗೆ ಸಾಕಾಗುತ್ತದೆ ಎಂದು ಗೊಣಗುವುದನ್ನು ನೋಡಿರುತ್ತೀರಿ. ಬೆಂಗಳೂರಿನಂತಹ ನಗರದಲ್ಲಿ 35,000 ನಿಂದ ಯೋಗ್ಯ ಜೀವನ ಹೇಗೆ ನಡೆಸಬಹುದೆಂದು ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ತಿಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಕಾಮೆಂಟ್ ಮಾಡಿ ಅಭಿಪ್ರಾಯ ತಮ್ಮ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಅಮೆಜಾನ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಪ್ರೇಮ್ ರಾಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಅಮೆಜಾನ್‌ನಲ್ಲಿ 9 ರಿಂದ 5 ರವರೆಗೆ ಕೆಲಸ ಮಾಡುವ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ನಾನು ಎಷ್ಟು ಖರ್ಚು ಮಾಡುತ್ತೇನೆ ಎಂಬುದು ಇಲ್ಲಿದೆ ಎಂದು ಹೇಳಿದ್ದಾರೆ. ಮಾರತಹಳ್ಳಿಯ 2BHK ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ಮೇಟ್‌ನೊಂದಿಗೆ ವಾಸಿಸುತ್ತಿದ್ದು ತಿಂಗಳ ಬಾಡಿಗೆ 30000 ರೂ ಇದ್ದರೂ, ನನಗೆ  ತಿಂಗಳಿಗೆ 15,000 ರೂ ಬರುತ್ತದೆ. 3,000 ರೂ ಸಂಬಳಕ್ಕೆ ಅಡುಗೆಯವರನ್ನು ನೇಮಿಸಿಕೊಂಡಿದ್ದೇನೆ ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Prem Raj (@_premverse)

ಪೆಟ್ರೋಲ್ ವೆಚ್ಚವು ತಿಂಗಳಿಗೆ 2,000 ರೂ ಆಗುತ್ತದೆ. ಫಿಟ್ ಆಗಿರಲು, ನಾನು ನಿಯಮಿತವಾಗಿ ಜಿಮ್ ಮಾಡುತ್ತೇನೆ. ಜಿಮ್ ಚಂದಾದಾರಿಕೆ ಮತ್ತು ಪ್ರೋಟೀನ್ ಪೂರಕಗಳಿಗಾಗಿ 2,000 ರೂ ಖರ್ಚು ಮಾಡುತ್ತೇನೆ. ಚಿಕನ್ ಗಾಗಿ ತಿಂಗಳಿಗೆ 3,000 ರೂ ಎತ್ತಿಡುತ್ತೇನೆ ಎಂದು ಹೇಳಿದ್ದಾರೆ.

ದಿನಸಿ ಮತ್ತು ಗೃಹೋಪಯೋಗಿ ವಸ್ತುಗಳಿಗೆ ತಿಂಗಳಿಗೆ ಸರಿಸುಮಾರು 3,000 ರೂ ಖರ್ಚು ಮಾಡುತ್ತೇನೆ. ವಾರಾಂತ್ಯದಲ್ಲಿ ಅಡುಗೆಯವರು ಹೆಚ್ಚಾಗಿ ಲಭ್ಯವಿರುವುದಿಲ್ಲ, ಹೀಗಾಗಿ ನಾನು ಫುಡ್‌ ಆರ್ಡರ್ ಮಾಡಲು ಪ್ರತಿ ತಿಂಗಳು ಸುಮಾರು 2,000 ರೂ ವೆಚ್ಚವಾಗುತ್ತದೆ ಎಂದು ವಿವರಿಸಿದ್ದಾರೆ.

ಇಂಟರ್ನೆಟ್ ಬಿಲ್‌ಗಳು, ವಿದ್ಯುತ್ ಮತ್ತು ಚಂದಾದಾರಿಕೆ ಸೇರಿ 2,000 ರೂ ರಷ್ಟು ಕಡಿಮೆ ಖರ್ಚಾಗುತ್ತದೆ. ವಾಷಿಂಗ್ ಮೆಷಿನ್ ರೆಫ್ರಿಜರೇಟರ್‌ನಂತಹ ಉಪಕರಣಗಳಿಗೆ 1,000 ರೂ ಬಾಡಿಗೆಯನ್ನೂ ಪಾವತಿಸುತ್ತೇನೆ. ಶಾಪಿಂಗ್‌ಗಾಗಿ 2,000 ರೂ ಮೀಸಲಿಡುತ್ತೇನೆ. ಹೀಗಾಗಿ, ಮಾಸಿಕ ಖರ್ಚು 35,000 ರೂ ಆಗುತ್ತದೆ ಎಂದು ಹೇಳಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ಬೆಂಗಳೂರಿನ ಇಸ್ತ್ರಿ ದರ ಕೇಳಿ ಬೆಚ್ಚಿಬಿದ್ದ ನೋಯ್ಡಾ ನಿವಾಸಿ; ವೈರಲ್ ಆಯ್ತು ಪೋಸ್ಟ್

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ಬೆಂಗಳೂರಿನಲ್ಲಿ ಲೆಕ್ಕ ಹಾಕಿ ಬದುಕುವುದು ಅನಿರ್ವಾಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಾನು ನೋಡಿದ ಅತ್ಯಂತ ವಾಸ್ತವಿಕ ವೆಚ್ಚಗಳ ವೀಡಿಯೊಗಳಲ್ಲಿ ಇದು ಒಂದು ಎಂದಿದ್ದಾರೆ. ಇನ್ನೊಬ್ಬರು, ಆದಾಯ ಹೆಚ್ಚಿರಲಿ ಕಡಿಮೆಯಿರಲಿ, ಖರ್ಚು ವೆಚ್ಚಗಳು ಇತಿಮಿತಿಯಲ್ಲಿದ್ದರೆ ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ