Viral Video: ಹೆಲಿಕಾಪ್ಟರ್ ಕೆಳಗೆ ನೇತಾಡುತ್ತಾ ಪುಲ್ ಅಪ್ಸ್ ಮಾಡಿ ದಾಖಲೆ ಬರೆದ ಯುವಕ
ರೋಮನ್ ಸಹೃದ್ಯನ್ ಒಂದು ನಿಮಿಷದಲ್ಲಿ ಹೆಲಿಕಾಪ್ಟರ್‌ನಿಂದ ಜೋತು ಬಿದ್ದು 23 ಪುಲ್ ಅಪ್ಗಳನ್ನು ಮಾಡಿದ್ದಾರೆ ಎಂದು ವೀಡಿಯೊವನ್ನು ಪೋಸ್ಟ್ ಮಾಡಿರುವ ಗಿನ್ನೆಸ್ ರೆಕಾರ್ಡ್ ಸಂಸ್ಥೆ ತಿಳಿಸಿದೆ.
ನೀವು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR)ನ ಇನ್ಸ್ಟಾಗ್ರಾಂ (Instagram) ಪೇಜ್ ಫಾಲೋ ಮಾಡುತ್ತೀರಾ? ಈ ಪೇಜ್ನಲ್ಲಿ ನಾನಾ ವಿಧದ ದಾಖಲೆಗಳನ್ನು ಮಾಡಿರುವ ಜನರ ವಿಡಿಯೋ, ಮಾಹಿತಿಯನ್ನು ಶೇರ್ ಮಾಡಲಾಗುತ್ತದೆ. ಇತ್ತೀಚೆಗೆ ಈ ಪೇಜ್ನಲ್ಲಿ ಪೋಸ್ಟ್ ಮಾಡಿದ ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬರು ಹೆಲಿಕಾಪ್ಟರ್‌ನಿಂದ ನೇತಾಡುತ್ತಲೇ ಪುಲ್ ಅಪ್ಸ್ (pull ups) ಮಾಡುತ್ತಿರುವುದನ್ನು ನೋಡಬಹುದು.
ಒಂದು ನಿಮಿಷದ ಈ ವಿಡಿಯೋದಲ್ಲಿ ಬಹುತೇಕ ಪುಲ್ ಅಪ್ಗಳನ್ನು ಹೆಲಿಕಾಪ್ಟರ್‌ನಿಂದಲೇ ಮಾಡಲಾಗಿದೆ. ರೋಮನ್ ಸಹೃದ್ಯನ್ ಒಂದು ನಿಮಿಷದಲ್ಲಿ ಹೆಲಿಕಾಪ್ಟರ್‌ನಿಂದ ಜೋತು ಬಿದ್ದು 23 ಪುಲ್ ಅಪ್ಗಳನ್ನು ಮಾಡಿದ್ದಾರೆ ಎಂದು ವೀಡಿಯೊವನ್ನು ಪೋಸ್ಟ್ ಮಾಡಿರುವ ಗಿನ್ನೆಸ್ ರೆಕಾರ್ಡ್ ಸಂಸ್ಥೆ ತಿಳಿಸಿದೆ. ವ್ಯಕ್ತಿ ಹೆಲಿಕಾಪ್ಟರ್ ಕೆಳಗೆ ನೇತಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅದಾಗಿ ಕೆಲವೇ ಕ್ಷಣಗಳಲ್ಲಿ ವಿಮಾನವು ನಿಧಾನವಾಗಿ ಹಾರಲು ಪ್ರಾರಂಭಿಸಿದಾಗ ಅದರ ಲ್ಯಾಂಡಿಂಗ್ ಸ್ಲೈಡ್‌ಗಳಲ್ಲಿ ಒಂದನ್ನು ಆ ವ್ಯಕ್ತಿ ಹಿಡಿದಿಟ್ಟುಕೊಳ್ಳುತ್ತಾರೆ. ನಂತರ ಆ ವ್ಯಕ್ತಿ ಗಾಳಿಯಲ್ಲಿ ಹೆಲಿಕಾಪ್ಟರ್‌ನಿಂದ ನೇತಾಡುತ್ತಾ ಪುಲ್ ಅಪ್ಸ್ ಮಾಡುತ್ತಿರುವುದನ್ನು ನೋಡಬಹುದು.
View this post on Instagram
ಸುಮಾರು 8 ಗಂಟೆಗಳ ಹಿಂದೆ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಈಗಾಗಲೇ ಈ ವಿಡಿಯೋ ಕ್ಲಿಪ್ 65,000ಕ್ಕೂ ಹೆಚ್ಚು ಲೈಕ್ಗಳನ್ನು ಪಡೆದಿದೆ ಮತ್ತು ಸಂಖ್ಯೆಗಳು ಹೆಚ್ಚುತ್ತಲೇ ಇದೆ. ರೋಮನ್ ಸಹೃದ್ಯನ್ ಅರ್ಮೇನಿಯಾದಿಂದ ಬಂದವರು ಎಂದು GWR ಬ್ಲಾಗ್ ವರದಿ ಮಾಡಿದೆ. ಅವರು ಅಕ್ಟೋಬರ್ 2, 2021 ರಂದು ಈ ಗಿನ್ನೆಸ್ ದಾಖಲೆಯನ್ನು ಪೂರ್ಣಗೊಳಿಸಿದರು.
ಇದನ್ನೂ ಓದಿ: Viral Video: ತಿಂಡಿ ತಿನ್ನುವಾಗ ನೀವೂ ಮೊಬೈಲ್ ನೋಡುತ್ತೀರಾ?; ಈ ವಿಡಿಯೋ ನೋಡಿದರೆ ನಿಮಗೂ ನಗು ಬರಬಹುದು