AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಸ್ಕೂಟರ್‌ನಲ್ಲಿ ಗೂಡು ಕಟ್ಟಿ ಮರಿ ಇಟ್ಟ ಗುಬ್ಬಚ್ಚಿ, ಅಚ್ಚರಿಗೊಂಡ ಸ್ಥಳೀಯರು

ಬಿಸಿಲಿನ ಝಳ ಜೋರಾಗಿದೆ. ಹೀಗಾಗಿ ಜನರು ಹೊರಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿರುವಾಗ ಸುಡುವ ಬಿಸಿಲಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಾಣಿ ಪಕ್ಷಿಗಳು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ. ಇದೀಗ ತಿಂಗಳುಗಟ್ಟಲೆ ನಿಲ್ಲಿಸಿದ್ದ ಸ್ಕೂಟರ್‌ನಲ್ಲಿ ಗುಬ್ಬಚ್ಚಿಯೊಂದು ಗೂಡು ಕಟ್ಟಿ ಮೊಟ್ಟೆಗಳನ್ನು ಇಟ್ಟಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಸ್ಕೂಟರ್‌ನಲ್ಲಿ ಗೂಡು ಕಟ್ಟಿ ಮರಿ ಇಟ್ಟ ಗುಬ್ಬಚ್ಚಿ, ಅಚ್ಚರಿಗೊಂಡ ಸ್ಥಳೀಯರು
ಗುಬ್ಬಚ್ಚಿ ಗೂಡುImage Credit source: Tv9 Telugu
ಸಾಯಿನಂದಾ
|

Updated on: Jun 01, 2026 | 4:37 PM

Share

ತೆಲಂಗಾಣ ಜೂನ್ 01: ಸಾಮಾನ್ಯವಾಗಿ ಗುಬ್ಬಚ್ಚಿಗಳು ಈ ಮರಗಳು ಇಲ್ಲವಾದರೆ ಮನೆಗಳ ಜಂತಿ, ಸಂದುಗಳು, ಛಾವಣಿಗಳನ್ನು ಆಶ್ರಯಿಸಿ ಗೂಡು ಕಟ್ಟುತ್ತವೆ. ಆದರೆ ಇದೀಗ ಸ್ಕೂಟರ್‌ನಲ್ಲಿ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡಿದೆ. ಈ ಕುತೂಕಲಕಾರಿ ಘಟನೆಯೂ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾದಲ್ಲಿ (Vaira, Khammam district of Telangana) ನಡೆದಿದೆ. ಹೌದು, ಗುಬ್ಬಚ್ಚಿಯೊಂದು ಗುಬ್ಬಚ್ಚಿ ತನ್ನ ಮರಿಗಳನ್ನು ರಕ್ಷಿಸಲು ಆಯ್ಕೆ ಮಾಡಿಕೊಂಡ ಈ  ನೂತನ ಮಾರ್ಗದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ.

ಗುಬ್ಬಚ್ಚಿಯೊಂದು ಸಂತಾನ ಅಭಿವೃದ್ಧಿಗೆ  ವೈರ ಪುರಸಭೆ ವ್ಯಾಪ್ತಿಯ ಲೀಲಾಸುಂದರಯ್ಯನಗರದ ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಸ್ಕೂಟರ್‌ನನ್ನು ಸುರಕ್ಷಿತ ತಾಣವನ್ನಾಗಿ ಮಾಡಿಕೊಂಡಿದೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬವೊಂದು ಬೇಸಿಗೆ ರಜೆಯಲ್ಲಿ ತಮ್ಮ ಊರಿಗೆ ತೆರಳಿದ್ದು. ಈ ದ್ವಿಚಕ್ರ ವಾಹನವು ಒಂದು ತಿಂಗಳಿಗೂ ಹೆಚ್ಚು ಕಾಲ ಮನೆಯ ಹೊರಭಾಗದಲ್ಲಿ ನಿಲ್ಲಿಸಲಾಗಿತ್ತು.

ಇದನ್ನೂ ಓದಿ: ಬಾಯಾರಿಕೆಯಿಂದ ಬಸ್ ಅಡ್ಡಗಟ್ಟಿ ನೀರು ಕುಡಿದ ಕೋತಿಗಳು; ವಿಡಿಯೋ ವೈರಲ್

ಹೀಗಾಗಿ ಸ್ಕೂಟಿಯ ಕೀ ಪಕ್ಕದಲ್ಲಿ ಒಂದು ಸಣ್ಣ ಖಾಲಿ ಜಾಗದಲ್ಲಿ ಗುಬ್ಬಚ್ಚಿ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿ ಮಾಡಿದೆ. ಈ ಗುಬ್ಬಚ್ಚಿಗಳು ಹೆಚ್ಚಾಗಿ ಸ್ಕೂಟಿಗೆ ಬರುವುದನ್ನು ಸ್ಥಳೀಯರು ಗಮನಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಕೂಟಿಯಲ್ಲಿ ಗುಬ್ಬಚ್ಚಿ ಗೂಡು  ಮೊಟ್ಟೆಗಳಿರುವುದು ಕಂಡು ಬಂದಿದೆ.  ಈ ಘಟನೆಯೂ ಸ್ಥಳೀಯರನ್ನು ಅಚ್ಚರಿಗೊಳಿಸಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್